ಸಾರಾಂಶ
ಎಲೆಕ್ಟ್ರೋಫೋರೆಸಿಸ್ ತಂತ್ರಗಳು, ತತ್ವಗಳು, ಕ್ಯಾಪಿಲರಿ, ಪಲ್ಸ್ ಫೀಲ್ಡ್ ಎಲೆಕ್ಟ್ರೋಫೋರೆಸಿಸ್ ನಂತಹ ವಿವಿಧ ರೀತಿಯ ಸುಧಾರಿತ ವಿಶ್ಲೇಷಣಾತ್ಮಕ ತಂತ್ರಗಳು ಮತ್ತು ಪ್ರೋಟಿನ್ ಗಳು, ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ವಿವಿಧ ಜೈವಿಕ ಅಣುಗಳ ವಿಶ್ಲೇಷಣೆಗಾಗಿ ಸಂಶೋಧನೆಯ ಕ್ಷೇತ್ರದಲ್ಲಿ ಪ್ರಮುಖವಾದ ಅದರ ಅನ್ವಯಗಳ ಬಗ್ಗೆ ವಿವರಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಜೈವಿಕ ತಂತ್ರಜ್ಞಾನ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಎಲೆಕ್ಟ್ರೋಫೋರೆಸಿಸ್ ಮತ್ತು ಇಮ್ಯುನೊಟೆಕ್ನಿಕ್ಸ್ ಕುರಿತು ಸಂವಾದಾತ್ಮಕ ಅಧಿವೇಶನವನ್ನು ಆಯೋಜಿಸಲಾಗಿತ್ತು.ಮೈಸೂರು ವಿವಿ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಕೆ. ರಾಮಚಂದ್ರ ಕಿಣಿ ಅವರು, ಎಲೆಕ್ಟ್ರೋಫೋರೆಸಿಸ್ ತಂತ್ರಗಳು, ತತ್ವಗಳು, ಕ್ಯಾಪಿಲರಿ, ಪಲ್ಸ್ ಫೀಲ್ಡ್ ಎಲೆಕ್ಟ್ರೋಫೋರೆಸಿಸ್ ನಂತಹ ವಿವಿಧ ರೀತಿಯ ಸುಧಾರಿತ ವಿಶ್ಲೇಷಣಾತ್ಮಕ ತಂತ್ರಗಳು ಮತ್ತು ಪ್ರೋಟಿನ್ ಗಳು, ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ವಿವಿಧ ಜೈವಿಕ ಅಣುಗಳ ವಿಶ್ಲೇಷಣೆಗಾಗಿ ಸಂಶೋಧನೆಯ ಕ್ಷೇತ್ರದಲ್ಲಿ ಪ್ರಮುಖವಾದ ಅದರ ಅನ್ವಯಗಳ ಬಗ್ಗೆ ವಿವರಿಸಿದರು.
ಜೆಎಸ್ಎಸ್ ಅಹೆರ್ ಜೀವರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶೈಲಶ್ರೀ ಶೇಖರ್ ಮಾತನಾಡಿ, ಪ್ರತಿ ಜನಕ ಪ್ರತಿಕಾಯ ಪರಸ್ಪರ ಕ್ರಿಯೆಯ ಮೂಲತತ್ವಗಳು, ವಿಭಿನ್ನ ಗುಣಾತ್ಮಕ ಮತ್ತು ಪರಿಮಾಣಾತ್ಮಕ ತಂತ್ರಗಳು ಮತ್ತು ಇಮ್ಯುನೊಮ್ಯಾಗ್ನೆಟಿಕ್ ಸೆಲ್ ವಿಂಗಡಣೆ ಹಾಗೂ ಫ್ಲೋಸೈಟೊಮೆಟ್ರಿ ನಂತಹ ಸುಧಾರಿತ ತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಸಿಇಒ ಡಾ.ಎಸ್.ಆರ್. ರಮೇಶ್, ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥೆ ಎನ್. ಪ್ರಿಯಾಂಕ ಶೆಣೈ, ಸಹಾಯಕ ಪ್ರಾಧ್ಯಾಪಕಿ ಎಸ್. ಅಮೂಲ್ಯ ಇದ್ದರು. ಲಕ್ಷ್ಮೀ ಪ್ರಾರ್ಥಿಸಿದರು. ಪ್ರೇಕ್ಷಾ ವಿಟಲ್ ಸ್ವಾಗತಿಸಿದರು. ಪಿ. ರಾಧಿಕಾ ನಿರೂಪಿಸಿದರು. ಕಾರ್ತಿಕ್ ವಂದಿಸಿದರು.