ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕಿನ ಅರಸೀಕೆರೆ ಗ್ರಾಮದ ಎಸ್ ಎಂ ಸಿ ಕೆ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಹಾಲಕ್ಷ್ಮಿ ವಾಣಿಜ್ಯ ವಿಭಾಗದಲ್ಲಿ ಹರಪನಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.ಉಚ್ಚಂಗಿದುರ್ಗದ ಬಡ ರೈತನ ಮಗಳಾದ ಮಹಾಲಕ್ಷ್ಮಿ 574 ಅಂಕ ಪಡೆದಿದ್ದಾಳೆ.
ಮಾಜಿ ಸಂಸದ ವೈ. ದೇವೇಂದ್ರಪ್ಪ ಅರಸೀಕೆರೆಯಲ್ಲಿ ಸನ್ಮಾನಿಸಿ ಸಿಹಿ ತಿನ್ನಿಸಿ ಮಾತನಾಡಿ, ಹಳ್ಳಿಗಾಡಿನ ಬಡ ರೈತನ ಮಗಳು ತಾಲೂಕಿಗೆ ಪ್ರಥಮಳಾಗಿ ಸಾಧನೆ ಮಾಡಿದ್ದಾಳೆ. ಈಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ತಮ್ಮ ಸಹಕಾರವಿರುತ್ತದೆ ಎಂದು ಹೇಳಿದರು.ವಿದ್ಯಾರ್ಥಿನಿ ಮಹಾಲಕ್ಷ್ಮಿ, ಪ್ರಾಚಾರ್ಯ ಪಿ. ದುರುಗೇಶ ಮಾತನಾಡಿದರು. ಉಪನ್ಯಾಸಕ ಎಂ.ನಾಗರಾಜ, ಸಿಬ್ಬಂದಿ ವಸಂತ, ಅಂಜಿನಪ್ಪ ಇತರರು ಮಹಾಲಕ್ಷ್ಮಿಗೆ ಸಿಹಿ ತಿನ್ನಿಸಿ ಶುಭಕೋರಿದರು.
ಕಂಚಿಕೇರಿ ಕಾಲೇಜಿಗೆ ಶೇ.90:ತಾಲೂಕಿನ ಕಂಚಿಕೇರಿ ಸ್ವತಂತ್ರ ಪಪೂ ಕಾಲೇಜಿಗೆ ಶೇ. 90ರಷ್ಟು ಫಲಿತಾಂಶ ಬಂದಿದೆ, ಅರಸೀಕೆರೆ ತೋಂಟದಾರ್ಯ ಪಪೂ ಕಾಲೇಜಿಗೆ ಶೇ.51ರಷ್ಟು ಫಲಿತಾಂಶ, ಎಸ್ ಎಂಸಿಕೆ ಕಾಲೇಜಿಗೆ ಶೇ. 35ರಷ್ಟು ಫಲಿತಾಂಶ, ಮಾದಿಹಳ್ಳಿ ಕಾಲೇಜಿಗೆ ಶೇ. 20ರಷ್ಟು ಫಲಿತಾಂಶ, ಲಕ್ಷ್ಮೀಪುರದ ಸಪಪೂ ಕಾಲೇಜಿಗೆ ಶೇ. 55ರಷ್ಟು ಫಲಿತಾಂಶ ಬಂದಿದೆ.
ಶಿಂಗ್ರಿಹಳ್ಳಿ ಕಾಲೇಜಿಗೆ ಶೇ. 66.66 ಫಲಿತಾಂಶ, ಉಚ್ಚಂಗಿದುರ್ಗ ಕಾಲೇಜಿಗೆ ಶೇ. 20ರಷ್ಟು ಫಲಿತಾಂಶ, ಸಾಸ್ವಿಹಳ್ಳಿ ಕಾಲೇಜಿಗೆ ಶೇ.34 ರಷ್ಟು ಫಲಿತಾಂಶ ಬಂದಿದೆ.ನಿಸರ್ಗ ಪಪೂ ಕಾಲೇಜಿಗೆ ವಿದ್ಯಾಶ್ರೀ ಪ್ರಥಮ:
ದ್ವಿತೀಯ ಪಿಯುಸಿಯಲ್ಲಿ ಹರಪನಹಳ್ಳಿ ತಾಲೂಕಿನ ನಜೀರ ನಗರದ ನಿಸರ್ಗ ಪದವಿ ಪೂರ್ವ ಕಾಲೇಜಿಗೆ ಶೇ.50.98ರಷ್ಟು ಫಲಿತಾಂಶ ಬಂದಿದೆ.ಹರಪನಹಳ್ಳಿ ಪಟ್ಟಣದ ಶ್ರೀ ಶರಣಬಸವ ಬುದ್ಧ ಭೀಮಜಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುವ ನಿಸರ್ಗ ಪದವಿ ಪೂರ್ವ ಕಾಲೇಜಿನಲ್ಲಿ 51 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಉನ್ನತ ಶ್ರೇಣಿ -6, ಪ್ರಥಮ -11, ದ್ವಿತೀಯ -6, ತೃತೀಯ -3 ಈ ರೀತಿ ಫಲಿತಾಂಶ ಬಂದಿದೆ. ಸಂಸ್ಥೆಯ ಕಾರ್ಯದರ್ಶಿಶ್ರೀ ಗುಂಡಗತ್ತಿ ಕೆ.ಕೊಟ್ರಪ್ಪ ಹರಪನಹಳ್ಳೀಯ ಆದಿಬಸವೇಶ್ವರ ನಗರದ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ವಿ.ಸಣ್ಣ ಅಜ್ಜಯ್ಯ, ಪ್ರಾಂಶುಪಾಲ ಆರ್.ಎಚ್. ಕಲ್ಯಾಣದವರ್, ಉಪಪ್ರಾಂಶುಪಾಲ ಎಚ್.ಮೋಹನ್, ಕಾಲೇಜಿನ ಉಪನ್ಯಾಸಕರು ಹಾಗೂ ಬೋಧಕೇತರರು 563 ಅಂಕ ಗಳಿಸಿ ಕಾಲೇಜಿಗೆ ಪ್ರಥಮಳಾದ ಮಾಡ್ಲಗೇರಿಯ ವಿದ್ಯಾರ್ಥಿನಿ ಎಂ.ವಿದ್ಯಾಶ್ರೀಯ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ನಾರಾಯಣಪುರದ ಎಂ.ಪಲ್ಲವಿ, ಮೈದೂರಿನ ಕೆ.ಕಾವೇರಿ, ಯರಬಳ್ಳಿಯ ಜೆ.ಕೆ. ಅಮೃತ, ಮೇಗಳ ಉಪ್ಪಾರಗೇರಿಯ ಎಂ.ಡಿ. ಸಂಜನಾ, ಮೋತಿಕಲ್ ತಾಂಡಾದ ಸುಮಿತ್ರಾಬಾಯಿ ಹಾಗೂ ಇತಿಹಾಸ ವಿಷಯದಲ್ಲಿ 100 ಕ್ಕೆ 100ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))