ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸ್ಥಳೀಯ ಪುರಸಭೆಯ ಸಭಾಭವನದಲ್ಲಿ ಬುಧವಾರ ನಡೆದ ಪುರಸಭೆಯ ೨೦೨೫-೨೬ನೇ ಸಾಲಿನ ಪರಿಷ್ಕೃತ ಆಯವ್ಯಯ ಅಂದಾಜು ಮತ್ತು ೨೦೨೫-೨೬ನೇ ಸಾಲಿನ ಆಯವ್ಯಯವನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಮಂಡಿಸಿದರು.ಪುರಸಭೆಯ ಎಲ್ಲ ಮೂಲಗಳಿಂದ ₹24,40,90,350 ಆದಾಯ ನಿರೀಕ್ಷೆ, ₹೨೪,೩೪, ೫೨,೬೦೦ ಖರ್ಚುದ ಅಂದಾಜಿದ್ದು, ೬,೩೭,೭೫೦ ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಬಜೆಟ್‌ನಲ್ಲಿ ಕೆರೆ ಅಭಿವೃದ್ಧಿ, ತಿನಿಸು ಕಟ್ಟೆ ಮಾರುಕಟ್ಟೆಗೆ ಪುನಃ ಟೆಂಡರ್ ಕರೆದು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಒತ್ತಾಯಿಸಿದರು. ಬಾಡಿಗೆ ಮತ್ತು ಠೇವಣಿ ಕಡಿಮೆ ಮಾಡಲು ಅವಕಾಶ ಇದ್ದರೆ ಕಡಿಮೆ ಮಾಡಲು ಒತ್ತಾಯಿಸಿದರು. ಪುರಸಭೆ ಪರವಾನಗಿ ಇಲ್ಲದೆ ಬ್ಯಾನರ್ ಅಳವಡಿಸಬಾರದು ಎಂದು ಸಲಹೆ ನೀಡಿದರು.ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ ಮಾತನಾಡಿ, ಜಂಗಮ ಸಮುದಾಯ ಭವನಕ್ಕೆ ಅನುದಾನ ನೀಡಲು ಒತ್ತಾಯಿಸಿ, ಪುರಸಭೆಯಲ್ಲಿ ನಿರ್ಧಾರವಾಗುವ ನಿಯಮಗಳನ್ನು ಸೂಚನಾ ಫಲಕದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿ ಎಂದರು.
ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಮಾತನಾಡಿ, ಡಬಲ್ ರಸ್ತೆಯಲ್ಲಿರುವ ಹರಳಯ್ಯ ಸಮುದಾಯದ ₹೪ ಲಕ್ಷ ವೆಚ್ಚದ ಕಾಮಗಾರಿ ಆರಂಭಿಸುವಂತೆ, ಜೋಡು ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಮಧ್ಯ ರಸ್ತೆ ಬಿಟ್ಟಿದ್ದು, ಆ ರಸ್ತೆಯಲ್ಲಿನ ಎಲ್ಲ ಅನಧಿಕೃತ ಚಹಾ ಅಂಗಡಿ, ಹೋಟೆಲ್ ತೆರುವುಗೊಳಿಗೊಳಿಸಲು ಒತ್ತಾಯಿಸಿದರು.ಪುರಸಭೆ ಸದಸ್ಯ ಚನ್ನಬಸು ಯರಗಟ್ಟಿ ಮಾತನಾಡಿ, ಪಟ್ಟಣದ ಕೆರೆ ಹತ್ತಿರವಿರುವ ಜಾಗೆಯಲ್ಲಿ ಸುಂದರವಾದ ಗಾರ್ಡನ್ ಮಾಡಲು ಒತ್ತಾಯಿಸಿದರು. ಪಟ್ಟಣದ ಯಾವ ಜಾಗದಲ್ಲಾದರೂ ಒಂದು ಸ್ವಿಮ್ಮಿಂಗ್ ಫೂಲ್ ಮಾಡಬೇಕು ಎಂದು ಆಗ್ರಹಿಸಿದರು.
ರಾಜು ಚಮಕೇರಿ ಮಾತನಾಡಿ, ನಗರದ ಚೆನ್ನಮ್ಮ ವೃತ್ತದ ಹತ್ತಿರವಿರುವ ಮಹಾಲಿಂಗೇಶ್ವರ ತಿನಿಸು ಕಟ್ಟೆ ಹೆಸರು ಬದಲಾಯಿಸಬೇಕು. ತಿನಿಸು ಕಟ್ಟೆಯ ಮುಂದೆ ಹಾಕಿರುವ ಕಬ್ಬಿಣದ ಡ್ರಿಲ್ ತೆಗೆದು ಅನುಕೂಲ ಕಲ್ಪಿಸಬೇಕೆಂದರು.ಸದಸ್ಯೆ ಸವಿತಾ ಹುರಕಡ್ಲಿ, ತಮ್ಮ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದಿರುವುದು ತುಂಬಾ ಬೇಸರ ತರಿಸಿದೆ ಅಸಮಾಧಾನ ವ್ಯಕ್ತಪಡಿಸಿದರು.
ಉದ್ಯಾನವನ ನಿರ್ವಹಣೆಗೆ ಟೆಂಡರ್ನಗರದಲ್ಲಿರುವ ಉದ್ಯಾನವನಗಳಲ್ಲಿ ಆರು ಸಂಪೂರ್ಣ ಅಭಿವೃದ್ಧಿ ಹೊಂದಿದ್ದು, ಅವುಗಳ ನಿರ್ವಹಣೆಗೆ ಮಹಿಳಾ ಸಂಘಗಳಿಗೆ ಟೆಂಡರ್ ಕರೆಯಲಾಗಿದೆ. ಅರ್ಹ ಸಂಘಗಳಿಗೆ ವಾರ್ಷಿಕ ನಿರ್ವಹಣೆ ವೆಚ್ಚವಾಗಿ ಪುರಸಭೆ ₹೨.೫೦ ಲಕ್ಷ ಕೊಡಲಿದೆ ಎಂದು ಹೇಳಿದರು.
ಈ ಎಲ್ಲ ಸಮಸ್ಯೆ ಆಲಿಸಿದ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಕೂಡಲೇ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರಮನ್ ಅಬ್ದುಲ್‌ರಜಾಕ್ ಭಾಗವಾನ, ಬಲವಂತಗೌಡ ಪಾಟೀಲ, ಮುಸ್ತಾಕ್ ಚಿಕ್ಕೋಡಿ, ಸಜನಸಾಬ ಪೆಂಡಾರಿ, ರಾಜು ಗೌಡಪ್ಪಗೋಳ, ಬಸಪ್ಪ ಬುರುಡ, ಚಾಂದನಿ ನಾಯಕ, ಸ್ನೇಹಲ್ ಅಂಗಡಿ, ಲಕ್ಷ್ಮಿ ಮುದ್ದಾಪುರ, ಸವಿತಾ ಕೋಳಿಗುಡ್ಡ, ಸರಸ್ವತಿ ರಾಮೋಜಿ, ಭಾವನಾ ಪಾಟೀಲ, ಸುಜಾತಾ ಮಾಂಗ, ಗೋದಾವರಿ ಬಾಟ, ನಾಮನಿರ್ದೇಶೀತ ಸದಸ್ಯರಾದ ವಿನೋದ ಸಿಂಪಿ, ಅಪ್ಪಾಸಾಬ ನಾಲಬಂಧ, ಅನಂತನಾಗ ಬಂಡಿ, ಬಸು ಕರೆಹೊನ್ನ ಸೇರಿದಂತೆ ಪುರಸಭೆ ಅಧಿಕಾರಿಗಳಾದ ಎಸ್.ಎಸ್. ಪಾಟೀಲ, ಸಿ.ಎಸ್. ಮಠಪತಿ, ಪಿ.ವೈ.ಸೊನ್ನದ, ಎಂ.ಎಂ. ಮುಗಳಕೋಡ, ಎಸ್.ಎಂ. ಕಲಬುರ್ಗಿ, ರಾಜೇಶ್ವರಿ ಸೊರಗಾಂವಿ, ಸಿಪಾಯಿ ರಾಮು ಮಾಂಗ , ಮಹಾಲಿಂಗ ಮಾಂಗ ಉಪಸ್ಥಿತರಿದ್ದರು.ಸಾರ್ವಜನಿಕರ ಹಿತ ಮತ್ತು ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಇತರ ವಿಷಯಗಳನ್ನು ಸದಸ್ಯರು ತಿಳಿಸಿದರೆ ಸೇರಿಸಿಕೊಳ್ಳಲಾಗುವುದು. ಪಟ್ಟಣದ ಅಭಿವೃದ್ಧಿಯೇ ನಮ್ಮೆಲ್ಲರ ಗುರಿ.
ಯಲ್ಲನಗೌಡ ಪಾಟೀಲ ಪುರಸಭೆ ಅಧ್ಯಕ್ಷರು ಮಹಾಲಿಂಗಪುರ