ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಪುರಸಭೆಯ ಸನ್ ೨೦೨೬-೨೭ನೇ ಸಾಲಿನ ಪುರಸಭೆಯ ಅಯವ್ಯಯ(ಬಜೆಟ್)ಗೆ ಜಮಖಂಡಿ ಎಸಿ ಶ್ವೇತಾ ಬಿಡಿಕರ ಅನುಮೋದನೆ ನೀಡಿದರು.ಬಜೆಟ್ ನಲ್ಲಿ ಪಟ್ಟಣದ ಕುಡಿಯುವ ನೀರು ನೈರ್ಮಲೀಕರಣ, ಬೀದಿ ದೀಪಗಳ ವ್ಯವಸ್ಥೆ ರಸ್ತೆ ಮತ್ತು ಚರಂಡಿ, ಉದ್ಯಾನಗಳ ಅಭಿವೃದ್ಧಿ, ಕೆರೆಯ ಅಭಿವೃದ್ಧಿ ಮತ್ತು ೧೫,೧೬ನೇ ಹಣಕಾಸಿನ /ಎಸ್.ಎಫ್.ಸಿ ಹಾಗೂ ಇತರ ಸರಕಾರದ ಪುರಷೃತ ಯೋಜನೆಗಳ ಮುಂದುವರೆದ ಕಾಮಗಾರಿಗಳಿಗಾಗಿ ಅನುದಾನ ಕಾಯ್ದಿರಿಸಿದ್ದು, ಅದರಂತೆ ಎಸ್.ಎಫ್.ಸಿ ಹಾಗೂ ಪುರಸಭೆ ನಿಧಿಯಡಿ ಸರಕಾರದ ಮಾರ್ಗಸೂಚಿ ಪ್ರಕಾರ ಶೇ೨೪.೧೦, ಶೇ೭.೨೫, ಶೇ೫, ರಡಿ ಮೊತ್ತ ಕಾಯ್ದಿರಿಸಲಾಗಿದೆ.
೨೦೨೬-೨೭ನೇ ಸಾಲಿಗಾಗಿ ತಯಾರಿಸಿದ ಆಯವ್ಯಯದ ಅಂದಾಜು ₹೩೧,೧೩,೧೮,೨೬೮ ಆದಾಯ ನಿರೀಕ್ಷಿಸಿದ್ದು, ₹೩೧,೦೬,೫೭,೨೬೮ ವೆಚ್ಚ ನಿರೀಕ್ಷಿಸಲಾಗಿದ್ದು, ೬,೬೧,೦೦೦ ಉಳಿತಾಯ ಬಜೆಟ್ ಅನುಮೋದಿಸಲಾಯಿತು. ಬಜೆಟ್ ಗೆ ಆಡಳಿತಾಧಿಕಾರಿ ಶ್ವೇತಾ ಎಮ್ ಬಿಡಿಕರ ಅವರಿದಂದ ಮಾ.೧೨ರಂದು ಅನುಮೋದನೆ ಪಡೆಯಲಾಗಿದೆ ಎಂದು ಮುಖ್ಯಾಧಿಕಾರಿ ನಾಮದೇವ ಲಮಾಣಿ ಪ್ರಕಟಿಸಿದ್ದಾರೆ.