ಮಹಾಮಾಯಾ ರಥೋತ್ಸವ ಸಂಪನ್ನ

| Published : Oct 25 2023, 01:15 AM IST

ಸಾರಾಂಶ

ಪಟ್ಟಣದ ಆರಾದ್ಯ ದೈವ ಶ್ರೀ ಮಹಾಮಾಯಾ ರಥೋತ್ಸವ ಅದ್ಧೂರಿಯಿಂದ ಸೋಮವಾರ ಸಂಜೆ ಅಪಾರ ಭಕ್ತ ಸಮೂಹ ಮಧ್ಯೆ ಜರುಗಿತು.ಶ್ರೀ ಮಹಾಮಾಯಾ ದೇವಿಯ ರಥೋತ್ಸವ ಪ್ರಯುಕ್ತ ನಾನಾ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆ ಮೂಲಕ ಭಾನುವಾರವೇ ಆಗಮಿಸಿದ್ದರು.ಸೋಮವಾರ ಸಹ ನಾನಾ ಕಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದರು.ಸೋಮವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ದೇವಿಗೆ ನಾನಾ ರೀತಿಯ ಪೂಜೆ, ಹೋಮಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದ ಆರಾದ್ಯ ದೈವ ಶ್ರೀ ಮಹಾಮಾಯಾ ರಥೋತ್ಸವ ಅದ್ಧೂರಿಯಿಂದ ಸೋಮವಾರ ಸಂಜೆ ಅಪಾರ ಭಕ್ತ ಸಮೂಹ ಮಧ್ಯೆ ಜರುಗಿತು.

ಶ್ರೀ ಮಹಾಮಾಯಾ ದೇವಿಯ ರಥೋತ್ಸವ ಪ್ರಯುಕ್ತ ನಾನಾ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆ ಮೂಲಕ ಭಾನುವಾರವೇ ಆಗಮಿಸಿದ್ದರು.

ಸೋಮವಾರ ಸಹ ನಾನಾ ಕಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದರು.ಸೋಮವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ದೇವಿಗೆ ನಾನಾ ರೀತಿಯ ಪೂಜೆ, ಹೋಮಗಳು ಜರುಗಿದವು.

ಬೆಳಗ್ಗೆಯಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.ದೇವಸ್ಥಾನದಲ್ಲಿ ದರ್ಶನಕ್ಕೆ ಜನರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.ದೇವಿಗೆ ಕಾಯಿ, ಕರ್ಪೂರ, ಉಡಿ ತುಂಬುವುದು ಹೀಗೆ ನಾನಾ ಧಾರ್ಮಿಕ ಪೂಜೆ ಸಲ್ಲಿಸಿದರು.ಕೆಲವು ಭಕ್ತರು ದೀಡ್ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಮಧ್ಯಾಹ್ನ 3 ಗಂಟೆಯಿಂದ ರಥೋತ್ಸವ ಆರಂಭವಾಯಿತು.ಅಪಾರ ಸಂಖ್ಯೆಯ ಜನರು ರಥೋತ್ಸವಕ್ಕೆ ಸಾಕ್ಷಿಯಾದರು. ಭಕ್ತರು ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಮೆರೆದರು.ಅತ್ಯಂತ ಕಿರಿದಾದ ಇಕ್ಕಟ್ಟಾದ ರಸ್ತೆಯಲ್ಲಿ ರಥೋತ್ಸವ ಸಾಗಿ ಬಂದಿತು.ಮಹಾಮಾಯಾ ದೇವಿಯ ಜಯಘೋಷ ಮುಗಿಲು ಮುಟ್ಟಿದ್ದವು. ಶೃಂಗಾರಗೊಂಡ ದೇವಿಯ ಮಹಾರಥೋತ್ಸವವನ್ನು ಜನರು ಕಣ್ತುಂಬಿಕೊಂಡು ನಮಸ್ಕರಿಸಿ ಭಕ್ತಿ ಸಮರ್ಪಿಸಿದರು.

ಶರವನ್ನವರಾತ್ರಿಯ ಪ್ರಯುಕ್ತ ದೇವಸ್ಥಾನದಲ್ಲಿ ಕಳೆದ 9 ದಿನಗಳಿಂದ ವಿಶೇಷ ಪೂಜೆ ಜರುಗಿದ್ದವು.ಸೋಮವಾರ ರಾತ್ರಿಯೇ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಉಭಯ ಧರ್ಮಾಧಿಕಾರಿಗಳು, ಅರ್ಚಕ ಮಂಡಳಿ, ಭಕ್ತ ಸಮೂಹ ಇದ್ದರು.