ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿಯಲ್ಲಿರುವ ಮಹಾರಾಜ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಿತು.ಕಾವೇರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ಕಲಿಯುವ ಉತ್ಸಾಹ ಮತ್ತು ಚಿಕಿತ್ಸೆ ನೀಡುವುದರಲ್ಲಿ ಶ್ರದ್ಧೆ ಎಂದು ಹೇಳಿದರು.ಡಾ. ಸದಾನಂದ ಪರಗೊಂಡೆ ಅವರು ಕವನ ಪ್ರಸ್ತುತಿ ಮೂಲಕ ಅಲ್ಲಿರುವ ವೈದ್ಯರಿಗೆ ಕೃತಜ್ಞತೆಗಳನ್ನು ತಿಳಿಸಿದರು.ಡಾ. ಅನಿಲ್ ಕುಮಾರ್ ದೀಕ್ಷಿತ್ ಕೆಲಸವೇ ತಮ್ಮ ಮೊದಲ ಆದ್ಯತೆಯಾಗಿರುಬೇಕು ಎಂದು ಹೇಳಿದರು. ಡಾ. ಗುರು ಬಸವರಾಜ್ ವೈದ್ಯರು ಉತ್ತಮ ನಡತೆಯನ್ನು ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಡಾ. ವೈ.ಟಿ. ಕೃಷ್ಣೇಗೌಡ ಅವರು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯ ಮಹತ್ವನ್ನು ತಿಳಿಸಿದರು. ಡಾ.ಎಸ್. ಚಂದ್ರಶೇಖರ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ನೈತಿಕ ಮೌಲ್ಯಗಳ ಮಹತ್ವದ ಬಗ್ಗೆ ಹೇಳಿದರು. ಮಹಾರಾಜ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಜಿ. ನರೇಶ್ ಅವರು ಎಲ್ಲ ರೋಗಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ತಿಳಿದು ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ಸ್ಪೂರ್ತಿ ತುಂಬಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ವಿ. ಕೃಷ್ಣಮೂರ್ತಿ, ಮಹಾರಾಜ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ. ರೂಪಾ, ಮಹಾರಾಜ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಮಂಜು, ಮಹಾರಾಜ ಯೋಗ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ಶಶಿಕಾಂತ್ ಇದ್ದರು.ಡಾ. ರಜನಿ ಅವರು ಮಾರ್ಗದರ್ಶನದಲ್ಲಿ ವೈದ್ಯರ ಮಹತ್ವದ ಮೇಲೆ ಒಂದು ಕಿರುನಾಟಕದ ಪ್ರಸ್ತುತಿ ನಡೆಯಿತು. ಮಹಾರಾಜ ನರ್ಸಿಂಗ್‌ಕಾಲೇಜು ಮತ್ತು ಮಹಾರಾಜ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.