ಸ್ವಂತ ಸೂರಿದ್ದರೆ ಮನುಷ್ಯನಿಗೆ ಭದ್ರತೆ, ಸ್ಥಿರತೆ ಇರುತ್ತದೆ

| Published : Dec 17 2024, 12:45 AM IST

ಸಾರಾಂಶ

ತಾವು ಮಾಡುವ ಕೆಲಸದಲ್ಲಿ ಯಾರು ಸಮಷ್ಟಿ ಪ್ರಜ್ಞೆ ಹೊಂದಿರುತ್ತಾರೋ, ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಾರೋ ಅಂತಹ ರಾಷ್ಟ್ರ ಬಹಳ ದೊಡ್ಡದಾಗಿ ಬೆಳೆಯುತ್ತದೆ.

---ಕನ್ನಡಪ್ರಭ ವಾರ್ತೆ ಮೈಸೂರುಮನುಷ್ಯನ ಪ್ರತಿ ಬೆವರ ಹನಿಯ ಕನಸೇ ಸ್ವಂತ ಮನೆ, ತಲೆಯ ಮೇಲೊಂದು ಸೂರು ಇದ್ದರೆ ಮನುಷ್ಯನಿಗೆ ಭದ್ರತೆ ಹಾಗೂ ಸ್ಥಿರತೆ ಇರುತ್ತದೆ ಎಂದು ಪತ್ರಕರ್ತ ರವೀಂದ್ರ ಜೋಶಿ ಹೇಳಿದರು.ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕಟ್ಟಡ ನಿರ್ಮಾಣ ಸಾಮಗ್ರಿ, ಸಲಕರಣೆ, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ರಿಯಲ್ ಎಸ್ಟೇಟ್ ನಲ್ಲಿ ಇತ್ತೀಚಿನ ಅವಿಷ್ಕಾರ ಕುರಿತ ವಸ್ತು ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಷ್ಟ್ರ ನಿರ್ಮಾಣದಲ್ಲಿ ಬಿಲ್ಡರ್ ಗಳ ಪಾತ್ರ ಹಿರಿದಿದೆ. ತಾವು ಮಾಡುವ ಕೆಲಸದಲ್ಲಿ ಯಾರು ಸಮಷ್ಟಿ ಪ್ರಜ್ಞೆ ಹೊಂದಿರುತ್ತಾರೋ, ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಾರೋ ಅಂತಹ ರಾಷ್ಟ್ರ ಬಹಳ ದೊಡ್ಡದಾಗಿ ಬೆಳೆಯುತ್ತದೆ. ಈ ಕೆಲಸವನ್ನು ಭಾರತದಲ್ಲಿ ಬಿಲ್ಡರ್ಸ್ ಗಳು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಅಂತಹ ಕನಸನ್ನು ನನಸು ಮಾಡುವವರೆ ಬಿಲ್ಡರ್ಸ್. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬಿಲ್ಡರ್ಸ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಗೌರವ ಅತಿಥಿಯಾಗಿದ್ದ ಎಂಬಿಸಿಟಿ ಮ್ಯಾನೇಜಿಂಗ್ ಟ್ರಸ್ಟಿ ಎಂ.ಸಿ. ಮಲ್ಲಿಕಾರ್ಜುನ ಮಾತನಾಡಿ, 24 ವರ್ಷಗಳಿಂದ ಸತತವಾಗಿ ಪ್ರದರ್ಶನ ನಡೆದುಕೊಂಡು ಬಂದಿದೆ ಹಾಗೂ ಕಾರ್ಮಿಕರಿಗಾಗಿ ಹಲವು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಬಿಎಐ ಮೈಸೂರು ಕೇಂದ್ರದ ಅಧ್ಯಕ್ಷ ಎ.ಎಸ್. ಯೋಗಾನರಸಿಂಹ, ಮೈಬಿಲ್ಡ್ ಅಧ್ಯಕ್ಷ ಕೆ.ಟಿ. ಗೋವಿಂದರಾಜು, ಗೌರವ ಕಾರ್ಯದರ್ಶಿ ಪ್ರಭಾಕರ್ ರಾವ್, ಎಸ್.ಎಲ್. ದಿನೇಶ್ ಇದ್ದರು.------------------eom/mys/dnm/