ಗೃಹಶೋಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಪುಷ್ಪನಮನ

| Published : Dec 28 2024, 12:47 AM IST

ಗೃಹಶೋಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಪುಷ್ಪನಮನ
Share this Article
  • FB
  • TW
  • Linkdin
  • Email

ಸಾರಾಂಶ

ಅಮೇರಿಕ, ರಷ್ಯಾ, ಇಂಗ್ಲೆಂಡ್ ಮುಂತಾದ ವಿದೇಶಗಳು ಭಾರತ ಕಡೆ ತಿರುಗಿ ನೋಡುವಂತೆ ಜಾಗತಿಕ ಮನ್ನಣೆ,

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ‌ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೃಹಶೋಭೆ ವಸ್ತುಪ್ರದರ್ಶನ‌ದಲ್ಲಿ ಕಲಾವಿದರಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಗೃಹಶೋಭೆ ವ್ಯವಸ್ಥಾಪಕ ಕೃಷ್ಣ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅಮೇರಿಕ, ರಷ್ಯಾ, ಇಂಗ್ಲೆಂಡ್ ಮುಂತಾದ ವಿದೇಶಗಳು ಭಾರತ ಕಡೆ ತಿರುಗಿ ನೋಡುವಂತೆ ಜಾಗತಿಕ ಮನ್ನಣೆ, ಆಡಳಿತ ಅಭಿವೃದ್ಧಿ ಕೆಲಸ ಮಾಡಿ ದೇಶದೆಲ್ಲೆಡೆ ರಾಜಕೀಯ ವ್ಯವಸ್ಥೆಯಲ್ಲಿ ಪದವೀಧರ ಪ್ರಜ್ಞಾವಂತ ಸಮಾಜ ಕಟ್ಟಿದವರು ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಎಂದರು. ಆಧಾರ್ ಕಾರ್ಡ್ ಜಾರಿಗೆ, ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಶಾ ಕಾರ್ಯಕರ್ತರ ಯೋಜನೆ, ನರೇಗಾ, ಮಾಹಿತಿ ಹಕ್ಕು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ದೇಶದ ಭವಿಷ್ಯಕ್ಕೆ ಆರ್ಥಿಕ ವ್ಯವಸ್ಥೆಯ ಭದ್ರಬುನಾದಿ ಹಾಕಿದರು. ನಮ್ಮ ಮಾತಿಗಿಂತ ಕಲಸವೇ ಮಾತಾಗಬೇಕು ಎನ್ನುವುದಕ್ಕೆ ನಿದರ್ಶನವಾಗಿ ಮೌನಿಯಲ್ಲ ದೇಶದ ಮಹಾನ್ ಜ್ಞಾನಿಯಾದವರು ಮನಮೋಹನ್ ಸಿಂಗ್ ಎಂದು ಅವರು ಸ್ಮರಿಸಿದರು. ನಿರೂಪಕ ಅಜಯ್ ಶಾಸ್ತ್ರಿ, ಗಾಯಕರಾದ ಸೇತುರಾಂ, ಜಗದೀಶ್, ಸುಬ್ರಹ್ಮಣ್ಯ, ಮೀನಾಕ್ಷಿ ಚಟ್ನಿ, ವಿಶ್ವನಾಥ್, ಮೋಹನ್ ಕುಮಾರ್, ಶ್ರೀನಿವಾಸ್, ಸುಮಾ ಇದ್ದರು.