ದೇಶಪ್ರೇಮದ ಪ್ರತಿರೂಪ ಮಹಾರಾಣಾ ಪ್ರತಾಪಸಿಂಹ

| Published : May 10 2025, 01:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ದೇಶ ಪ್ರೇಮ ತ್ಯಾಗ ಬಲಿದಾನ ಸಂಘರ್ಷ ಮುಂತಾದ ಗುಣಗಳಿಗೆ ಪ್ರತಿರೂಪವಾಗಿರುವ ಮಹಾರಾಣಾ ಪ್ರತಾಪಸಿಂಹ ಭಾರತೀಯರಿಗೆ ಶ್ರದ್ದೆ ಮತ್ತು ಅಭಿಮಾನದ ರೂಪವಾಗಿದ್ದಾರೆ ಎಂದು ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ದೇಶ ಪ್ರೇಮ ತ್ಯಾಗ ಬಲಿದಾನ ಸಂಘರ್ಷ ಮುಂತಾದ ಗುಣಗಳಿಗೆ ಪ್ರತಿರೂಪವಾಗಿರುವ ಮಹಾರಾಣಾ ಪ್ರತಾಪಸಿಂಹ ಭಾರತೀಯರಿಗೆ ಶ್ರದ್ದೆ ಮತ್ತು ಅಭಿಮಾನದ ರೂಪವಾಗಿದ್ದಾರೆ ಎಂದು ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಮಹಾಸ್ವಾಮಿಗಳು ಹೇಳಿದರು.

ಸ್ಥಳೀಯ ರಜಪೂತ ಸಮಾಜದಿಂದ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಮೂರ್ತಿ ಪ್ರತಿಷ್ಠಾಪನೆಯ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ರಾಣಾ ಪ್ರತಾಪಸಿಂಹ ಹೆಸರು ಹೇಳುತ್ತಲೇ ಮೊಘಲ ಸಾಮ್ರಾಜ್ಯದ ಪ್ರಭುತ್ವಕ್ಕೆ ಕರೆಕೊಡುವ ಅವರ ಚಿತ್ರ ನಮ್ಮೆದರು ನಿಲ್ಲುತ್ತದೆ. ಇಂದು ಭಾರತದ ರಾಷ್ಟ್ರೀಯ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕಾದರೆ ಮಹಾರಾಣಾ ಪ್ರತಾಪಸಿಂಹ ಜೀವನ ಚರಿತ್ರೆ ಆದರ್ಶವಾಗಿದೆ. ಮುಂದಿನ ಪೀಳಿಗೆಗೆ ಅನುಕೂಲವಾಗಲೆಂದು ತಾಳಿಕೋಟೆಯ ರಜಪೂತ ಸಮಾಜದಿಂದ ಪ್ರತಾಪಸಿಂಹ ಅವರ ಜನ್ಮದಿನದಂದು ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ ಎಂದರು.

ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು ಮಾತನಾಡಿ, ತಾಳಿಕೋಟೆ ಪಟ್ಟಣದಲ್ಲಿ ಕ್ಷತ್ರೀಯರು ಮಹಾರಾಜರ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗಿದ್ದು ಹೆಮ್ಮೆಯ ವಿಷಯ. ಮಹಾರಾಣಾ ಪ್ರತಾಪಸಿಂಹ ಅವರ ತಮ್ಮಲ್ಲಿದ್ದ ಚೇತಕ ಎಂಬ ಕುದುರೆಯೂ ಸಹ ತನ್ನ ಜೀವದ ಹಂಗು ತೊರೆದು ರಾಜನ ಜೀವಕ್ಕೆ ಜೀವಕೊಟ್ಟು ಬದುಕನ್ನು ತೋರಿಸಿಕೊಟ್ಟಿರುವದು ಇತಿಹಾಸ. ಅಂತಹ ಮಹಾರಾಜನ ಮೂರ್ತಿ ಪ್ರತಿಷ್ಠಾಪನೆ ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

ಸಮಾಜದ ಮುಖಂಡ ವಿಜಯಸಿಂಗ್ ಹಜೇರಿ ಮಾತನಾಡಿ, ತಾಳಿಕೋಟೆ ಪಟ್ಟಣದಲ್ಲಿ ೧೨ ಅಡಿ ಎತ್ತರದ ಅಶ್ವಾರೂಢ ಮೂರ್ತಿಗೆ ₹ ೨೫ ಲಕ್ಷ ವೆಚ್ಚದಲ್ಲಿ ತಯಾರಿಸಿದ ಪಂಚಲೋಹದ ಮೂರ್ತಿ ಇದಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮಕ್ಕೆ ರಾಷ್ಟ್ರ, ರಾಜ್ಯಮಟ್ಟದ ನಾಯಕರನ್ನೂ ಅಹ್ವಾನಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ವೇ.ಮುರುಘೇಶ ವಿರಕ್ತಮಠ, ವೇ.ವೆಂಕಟೇಶ ಗ್ರಾಂಪೊರೊಹಿತ, ಸಮಾಜದ ಮುಖಂಡರಾದ ಪರಶುರಾಮ ಸಿಂಗ್ ರಜಪೂತ, ಪ್ರಕಾಶಸಿಂಗ್ ರಜಪೂತ, ರಮೇಶಸಿಂಗ್ ಹಜೇರಿ, ರಾಜು ಚವ್ಹಾಣ, ಹರಿಸಿಂಗ್ ಮೂಲಿಮನಿ, ರತನಸಿಂಗ್ ಕೊಕಟನೂರ, ಗೋವಿಂದಸಿಂಗ್ ಮೂಲಿಮನಿ, ಅಮೀತಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಹಜೇರಿ, ಪ್ರಕಾಶ ಹಜೇರಿ, ವಿಜಯಸಿಂಗ್ ಹಜೇರಿ, ರಘುರಾಮಸಿಂಗ್ ಹಜೇರಿ, ಕೇಸರಸಿಂಗ್ ಹಜೇರಿ, ಭರತಸಿಂಗ್ ಹಜೇರಿ, ಸುರೇಶ ಹಜೇರಿ, ಅಮರಸಿಂಗ್ ಹಜೇರಿ, ನೀತಿನ ವಿಜಾಪೂರ, ಅರುಣ ದಡೇದ, ವಿಠ್ಠಲ ಬೇಕಿನಾಳ, ರಮೇಶ ಗೌಡಗೇರಿ, ಉಮರಸಿಂಗ್ ಗೌಡಗೇರಿ, ಪ್ರಲ್ಹಾದ ಹಜೇರಿ, ಸಂಜೀವಕುಮಾರ ಹಜೇರಿ, ಸಂತೋಷ ಹಜೇರಿ ಸೇರಿ ದೇವಣಗಾಂವ, ಮುದ್ನೂರ, ಮನಗೂಳಿ, ಮುದ್ದೇಬಿಹಾಳ, ವಿಜಯಪುರ, ಗದಗ, ಶಾಬಾದ ಪಟ್ಟಣಗಳ ಸಮಾಜದವರು ಭಾಗವಹಿಸಿದ್ದರು.