ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಆರೋಗ್ಯ ಮತ್ತು ಶಿಸ್ತು ಬದ್ಧ ಜೀವನಕ್ಕೆ ಕ್ರೀಡೆ ಸಹಕಾರಿ ಎಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ರಾಷ್ಟ್ರೀಯ ವಾಲಿಬಾಲ್ ತಂಡದ ತರಬೇತುದಾರ ಡಾ.ಎನ್.ಬಿ. ಸುರೇಶ್ ಹೇಳಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ 2023 24ನೇ ಸಾಲಿನ ವಾರ್ಷಿಕ ಕ್ರೀಡಾಕೂಟ, ಎನ್.ಎಸ್.ಎಸ್, ಎನ್.ಸಿಸಿ, ರೆಡ್ ಕ್ರಾಸ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆಯು ಜೀವನ ಉತ್ಸಾಹವನ್ನು ಹೆಚ್ಚಿಸುವುದಲ್ಲದೆ, ನಾವು ದಿನನಿತ್ಯದ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಇರಲು ಪ್ರತಿದಿನ ಕನಿಷ್ಠ ಒಂದು ಗಂಟೆಗಳ ವ್ಯಾಯಾಮ ಅಥವಾ ಯಾವುದಾದರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿಕೊಂಡರೆ ಇದರಿಂದ ನಮ್ಮ ಆರೋಗ್ಯ ವೃದ್ಧಿಸುವುದಲ್ಲದೆ, ವಿದ್ಯಾಭ್ಯಾಸದ ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಹೆಚ್ಚಿಸುತ್ತದೆ, ಅಲ್ಲದೆ ಪಠ್ಯೇತರ ಚಟುವಟಿಕೆಗಳಿಂದ ಪರಿಪೂರ್ಣತೆ ಹೊಂದುವುದರ ಮೂಲಕ ಸ್ವಾವಲಂಬನೆ ಮತ್ತು ಜೀವನ ನಿರ್ವಹಣೆ ಸಾಧ್ಯ ಹಾಗೂ ಉದ್ಯೋಗದ ವಿಫಲ ಅವಕಾಶಗಳು ದೊರಕುತ್ತವೆ, ಇಂದು ಕ್ರೀಡೆಯು ಜಾಗತಿಕ ಮಟ್ಟದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ವೇದಿಕೆಯಾಗಿದೆ, ಇಂದಿನ ಯುವ ಜನತೆ ಆರೋಗ್ಯದಿಂದ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವುದರ ಜೊತೆಗೆ ಸಾಮರಸ್ಯದ ಬದುಕನ್ನು ರೂಢಿಸಿಕೊಳ್ಳುವುದರ ಮೂಲಕ ವೈಯಕ್ತಿಕ ಸಾಮಾಜಿಕ, ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಆರೋಗ್ಯವನ್ನು ವೃದ್ಧಿಸಿಕೊಂಡು ಭಾರತ ದೇಶವನ್ನು ಒಂದು ಸದೃಢ ಹಾಗೂ ಬಲಿಷ್ಠ ಆರೋಗ್ಯವಂತ ರಾಷ್ಟ್ರವನ್ನಾಗಿ ಮಾಡಬಹುದಾಗಿದೆ ಎಂದು ಅವರು ಹೇಳಿದರು.ಬೆಂಗಳೂರಿನ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್ ಮಾತನಾಡಿ, ಸ್ಕೌಟ್ಸ್ ಘಟಕವು ಒಂದು ಮಹಾ ಚಳವಳಿಯಾಗಿದ್ದು, ನಾವೆಲ್ಲರೂ ಪ್ರಕೃತಿದತ್ತ ಸಂಪನ್ಮೂಲಗಳನ್ನು ಸರಿಯಾಗಿ ಸದುಪಯೋಗಪಡಿ ಕೊಂಡು ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾದ ಹೊಣೆಗಾರಿಕೆ ಇಂದಿನ ಯುವ ಜನತೆಗೆ ಬೇಕಾಗಿದೆ ಸ್ಕೌಟ್ಸ್ ಪ್ರಪಂಚಾದ್ಯಂತ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದು, ಸಾಹಸ ಚಟುವಟಿಕೆಗಳ ಮೂಲಕ ನಮ್ಮಲ್ಲಿ ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ತುಂಬುವುದರ ಜೊತೆಗೆ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ. ವಸಂತಕುಮಾರ್ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್. ಭಾಸ್ಕರ್ ಮತ್ತು ಸಿ.ಎಸ್. ಮೋಹನ್ ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಚಾಲಕಿ ಡಾ. ಪೂರ್ಣಿಮಾ, ರೆಡ್ ಕ್ರಾಸ್ ಘಟಕದ ಸಂಚಾಲಕ ಪಿ. ರಘು, ಎನ್.ಸಿಸಿ ಘಟಕ ಸಂಚಾಲಕಿ ಡಾ. ಲಕ್ಷ್ಮಿ, ವಿಶ್ವನಾಥ್, ಡಾ. ಚಂದ್ರಕುಮಾರ್, ಸೌಮ್ಯ ಇದ್ದರು.ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಹಾಗೂ ವಿಶ್ವವಿದ್ಯಾನಿಲಯ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾಗಿ ಪದಕ ಗಳಿಸಿದ ಕ್ರೀಡಾಪಟುಗಳನ್ನು, ಕಾಲೇಜು ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಹಾಗೂ ಎನ್.ಸಿಸಿ, ಗೈಡ್ಸ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರೆಂಜರ್ಸ್, ಎನ್.ಎಸ್.ಎಸ್, ರೆಡ್ ಕ್ರಾಸ್ ಘಟಕಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿತು. ಸಿ. ರಕ್ಷಿತಾ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))