ಮಹರ್ಷಿ ವಾಲ್ಮೀಕಿ ಮಾನವೀಯತೆ, ಭ್ರಾತೃತ್ವದ ಸಂಕೇತ: ಗೋವಿಂದರ ಪರಶುರಾಮ

| Published : Oct 18 2024, 12:16 AM IST / Updated: Oct 18 2024, 12:17 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಇಡೀ ಪ್ರಪಂಚಕ್ಕೆ ಸಂಬಂಧಗಳ ಮಹತ್ವ ಮತ್ತು ಮಾನವೀಯತೆಯನ್ನು ಮತ್ತು ಸಹೋದರ ಭಾವನೆಗಳನ್ನು ಬೋಧಿಸಿ ಇಡೀ ಪ್ರಪಂಚಕ್ಕೆ ಮಾನವೀಯತೆ ಮತ್ತು ಭ್ರಾತೃತ್ವದ ಸಂಕೇತವಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ ಹೇಳಿದರು.

ಮರಿಯಮ್ಮನಹ‍ಳ್ಳಿ: ಮಹರ್ಷಿ ವಾಲ್ಮೀಕಿ ಮಮತೆ ಮತ್ತು ಸಮತೆಯ ವಿಶ್ವಾಸ ಹಾಗೂ ವಿಶ್ವಕ್ಕೆ ಮಾನವೀಯತೆ ಮತ್ತು ಭ್ರಾತೃತ್ವವನ್ನು ಬೋಧಿಸಿದ ಮಹಾನ್ ಕವಿ ಎಂದು ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ ಹೇಳಿದರು.

ಇಲ್ಲಿನ 9ನೇ ವಾರ್ಡಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಇಡೀ ಪ್ರಪಂಚಕ್ಕೆ ಸಂಬಂಧಗಳ ಮಹತ್ವ ಮತ್ತು ಮಾನವೀಯತೆಯನ್ನು ಮತ್ತು ಸಹೋದರ ಭಾವನೆಗಳನ್ನು ಬೋಧಿಸಿ ಇಡೀ ಪ್ರಪಂಚಕ್ಕೆ ಮಾನವೀಯತೆ ಮತ್ತು ಭ್ರಾತೃತ್ವದ ಸಂಕೇತವಾಗಿದ್ದಾರೆ ಎಂದು ಅವರು ಹೇಳಿದರು.

ಉಪನ್ಯಾಸಕ ಹಾಗೂ ಪಪಂ ಮಾಜಿ ಸದಸ್ಯ ಎಸ್. ನವೀನ್ ಕುಮಾರ್ ಮಾತನಾಡಿ, ವಾಲ್ಮೀಕಿ ಈ ನೆಲದ ಮೂಲ ಕವಿ. ಅವರ ಆಶಯ ಸಮಾಜವನ್ನು ಸಶಕ್ತಗೊಳಿಸಿ ಸಂಬಂಧಗಳ ಮೂಲಕ ಭ್ರಾತೃತ್ವವನ್ನು ಉತ್ತೇಜಿಸಿ ಏಕತೆಯನ್ನು ಸಾರುವುದಾಗಿದೆ. ವಾಲ್ಮೀಕಿ ಅವರು ರಾಮಾಯಣದ ಅಂತಹ ಮಹಾನ್ ಕೃತಿಯನ್ನು ರಚಿಸಿ ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ಹನುಮಂತ, ರಾಮ, ಸೀತೆ, ಲಕ್ಷ್ಮಣ ಎಂಬ ಮಹಾನ್ ವ್ಯಕ್ತಿಗಳ ಆಶಯಗಳನ್ನು ಸೃಷ್ಟಿಸಿ, ಅವರಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವ ಕೆಲಸವನ್ನು ವಾಲ್ಮೀಕಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿ ಹೋಬಳಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮರಡಿ ಹನುಮಂತ, ಮರಿಯಮ್ಮನಹಳ್ಳಿ ಪಟ್ಟಣದ ವಾಲ್ಮೀಕಿ ಸಮಾಜದ ಅಧ್ಯಕ್ಷ ರೋಗಣ್ಣನವರ ಮಂಜುನಾಥ, ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ, ಪಪಂ ಉಪಾಧ್ಯಕ್ಷ ಲಕ್ಷ್ಮಿ ರೋಗಾಣಿಮಂಜುನಾಥ, ಪಪಂ ಸದಸ್ಯ ಎಲ್. ವಸಂತ, ವಾಲ್ಮೀಕಿ ಸಮಾಜದ ಕಾರ್ಯದರ್ಶಿ ಬಿ. ಪರಶುರಾಮ, ಸಮಾಜದ ಮುಖಂಡರಾದ ತಳವಾರ್ ಹುಲಗಪ್ಪ, ಕಲ್ಲಾಳ್ ಪರಶುರಾಮಪ್ಪ, ತಳವಾರ ಸೋಮಶೇಖರ್, ಬುರುಡಿ ರಾಮಣ್ಣ, ಕಟಗಿ ರವಿಕುಮಾರ್, ಹರಪನಹಳ್ಳಿ ಮಂಜುನಾಥ, ತಳವಾರ ಬಸವರಾಜ, ಬಾಪುರಿ ಅಂಜನಿ, ಮಣೆಗಾರ ರಾಮಣ್ಣ, ಮರಡಿ ಸ್ವಾಮಿ, ತಳವಾರ ಈಶ್ವರ, ಗಡ್ಡಿ ಸೋಮಶೇಖರ, ಸಿ. ಮಂಜುನಾಥ, ಎಚ್. ರವಿಕಿರಣ್, ರಮೇಶ, ಕಾಸ್ಲಿ ಬಾಲರಾಜ್, ಮೈದೂರು ಅಂಕಲೇಶಪ್ಪ, ಟೈಲರ್ ಅಂಕೇಶ, ಶ್ಯಾಮಲಾ, ರೇಣುಕಾ ಉಪಸ್ಥಿತರಿದ್ದರು.