ಮಹರ್ಷಿ ಭಗೀರಥ ಜಯಂತಿ ಸರಳ ಆಚರಣೆ

| Published : May 15 2024, 01:39 AM IST

ಸಾರಾಂಶ

ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ರಾಯಚೂರು: ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಉಪ್ಪಾರ ಸಮಾಜದ ಸಹಯೋಗದಲ್ಲಿ ಮಹರ್ಷಿ ಭಗೀರಥ ಜಯಂತಿ ಸರಳವಾಗಿ ಮಂಗಳವಾರ ಆಚರಿಸಲಾಯಿತು.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಉಪ್ಪಾರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಮಿರ್ಜಾಪುರ ಪಾಗುಂಟಪ್ಪ, ಪ್ರಧಾನ ಕಾರ್ಯದರ್ಶಿ ಮಾಡಗಿರಿ ಚಂದ್ರಶೇಖರ, ಮಾಜಿ ಅಧ್ಯಕ್ಷ ವೆಂಕೋಬ ಉಪ್ಪಾರ, ಪ್ರವೀಣ ಕುಮಾರ ಗಟ್ಟು, ರಾಘವೇಂದ್ರ, ಗಡಿಗಿ ಶಶಿಧರ, ಬೋದೂರು ಶ್ರೀನಿವಾಸ, ಚಿದಾನಂದ, ಶ್ರೀನಿವಾದ, ಗಟ್ಟು ಈರಣ್ಣ, ಎಸ್.ವೆಂಕಟೇಶ, ರವಿ ಕುಮಾರ್ ಗಧಾರ್, ನವಯುವಕ ಸಂಘದ ಅಧ್ಯಕ್ಷ ಜೂಕುರು ಶ್ರೀನಿವಾಸ, ಆರ್.ಶ್ರೀನಿವಾಸ, ಮಹಿಳಾ ಘಟಕದ ಅಧ್ಯಕ್ಷೆ ಪಿ.ಸುರೇಖಾ, ಕಾರ್ಯದರ್ಶಿ ಶ್ರಾವಣಿ, ಆದಿಲಕ್ಷ್ಮೀ ಸೇರಿ ಉಪ್ಪಾರ ಸಮಾಜದ ಜನ ಪಾಲ್ಗೊಂಡಿದ್ದರು.

---------

ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.