ಲೋಕಕ್ಕೆ ರಾಮಾಯಣ ನೀಡಿದ ಮಹರ್ಷಿ ವಾಲ್ಮೀಕಿ ಸದಾ ಪ್ರಸ್ತುತ, ಮನುಕುಲಕ್ಕೆ ಉತ್ತಮ ಸಂದೇಶ ಸಾರುವ ರಾಮಾಯಣ ಮಹಾಗ್ರಂಥಕಟ್ಟಿಕೊಟ್ಟ ಮಹಾಮುನಿಯ ಜೀವನ ಸರಳವಾಗಿತ್ತು, ಸರಳತನವೇ ಶ್ರೇಷ್ಠ, ಬದುಕು ಕಷ್ಟ ಎಂದು ಸಾರಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ವ್ಯಕ್ತಿ ಹುಟ್ಟಿದಾಗಿನಿಂದ ಶ್ರೇಷ್ಠರಾಗಿ ಹುಟ್ಟುವುದಿಲ್ಲ, ಆಚಾರ, ವಿಚಾರ, ನಡೆ-ನುಡಿ ಮುಖಾಂತರ ಸರ್ವಶ್ರೇಷ್ಠರಾಗುತ್ತಾರೆ ಎಂದು ರಾಜ್ಯ ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ಕುಮಾರ್ ಹೇಳಿದರು.ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ರೈತ ಮೋರ್ಚಾ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ರೈತ ಮೋರ್ಚಾ ಸಂಘಟನಾ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದರು.
ಲೋಕಕ್ಕೆ ರಾಮಾಯಣ ನೀಡಿದ ಮಹರ್ಷಿ ವಾಲ್ಮೀಕಿ ಸದಾ ಪ್ರಸ್ತುತ, ಮನುಕುಲಕ್ಕೆ ಉತ್ತಮ ಸಂದೇಶ ಸಾರುವ ರಾಮಾಯಣ ಮಹಾಗ್ರಂಥಕಟ್ಟಿಕೊಟ್ಟ ಮಹಾಮುನಿಯ ಜೀವನ ಸರಳವಾಗಿತ್ತು, ಸರಳತನವೇ ಶ್ರೇಷ್ಠ, ಬದುಕು ಕಷ್ಟ ಎಂದು ಸಾರಿದರು ಎಂದು ನುಡಿದರು.ಮುಂದಿನ ದಿನಗಳಲ್ಲಿ ಬಿಜೆಪಿ ಸಂಘಟನೆಯನ್ನು ಭೂತ್ ಮಟ್ಟದಿಂದ ಕಟ್ಟಿ, ತಾಪಂ,ಜಿಪಂ, ಚುನಾವಣೆಗಳಲ್ಲಿ ಗೆಲ್ಲುವ ಕಾರ್ಯತಂತ್ರಗಳನ್ನು ಸಾಧಿಸಬೇಕಿದೆ, ರೈತ ಸಮಸ್ಯೆಗಳ ಪರಿಹಾರಕ್ಕೆ ಹಲವು ಮಾರ್ಗೋಪಾಯಗಳ, ಕೇಂದ್ರ ಸರ್ಕಾರಿ ಯೋಜನೆಗಳನ್ನು ತಲುಪಿಸಬೇಕಿದೆ ಎಂದು ಸಲಹೆ ನೀಡಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್ಕುಮಾರ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಇಡಿದು ಉನ್ನತಮಟ್ಟದ ವ್ಯಕ್ತಿವರೆಗೂ ಸನಾತನ ಧರ್ಮದ ಸಂಸ್ಕಾರ, ರಾಮಾಯಣದ ಸಂದೇಶಗಳು ಪ್ರೇರಣೆ ನೀಡಿರುತ್ತವೆ ಎಂದರು.ಬೇಡನಾಗಿ ಹುಟ್ಟಿ, ನಾರದ ಮುನಿಯಿಂದ ದೈವಮುನಿಯಾಗಿ ಪರಿವರ್ತನೆಗೊಂಡು ರಾಮಾಯಣ ಮೂಲಕ ಸಮಾಜ ಪರಿವರ್ತನೆ ಮಾಡಲು ಮುಂದಾದ ಸಾಧಕರನ್ನು ಸಮಾಜ ಮರೆಯದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ನಗರಾಧ್ಯಕ್ಷ ಪ್ರಸನ್ನ, ಚಂದ್ರ, ಸಿ.ಎಂ.ಜವರೇಗೌಡ, ಅನಿಲ್ಕುಮಾರ್, ನಿಂಗರಾಜ್, ಬೊಮ್ಮೇಶ್ ಮತ್ತಿತರರಿದ್ದರು.