ಪಡುವಾರಹಳ್ಳಿ ಸ್ನೇಹ ಬಳಗದಿಂದ ವಿವೇಕಾನಂದರ ಜಯಂತಿ

| Published : Jan 13 2024, 01:36 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ರಸ್ತೆಯಲ್ಲಿ ಆಧುನಿಕ ಭಾರತದ ಸಾಂಸ್ಕೃತಿಕ ರಾಯಭಾರಿ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ರಸ್ತೆಯಲ್ಲಿ ಆಧುನಿಕ ಭಾರತದ ಸಾಂಸ್ಕೃತಿಕ ರಾಯಭಾರಿ ಶ್ರೀ ವಿವೇಕಾನಂದರ 162ನೇ ಜಯಂತಿ ಆಚರಿಸಲಾಯಿತು.

ಶ್ರೀ ವಿವೇಕಾನಂದರ ಭಾವಚಿತ್ರಕ್ಕೆ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿಯ ಎಂ ರಾಮಕೃಷ್ಣ ಪುಷ್ಪಾರ್ಚನೆ ಮಾಡಿದರು. ನಗರ ಪಾಲಿಕೆ ಮಾಜಿ ಸದಸ್ಯ ಎಂ. ಚಿಕ್ಕವೆಂಕಟು, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಸಿ. ಸಂತೋಷ್, ನಿರ್ದೇಶಕರಾದ ಸಿ.ಡಿ. ಕುಮಾರ್, ರಾಘವ್ ಎಂ. ಗೌಡ, ಬಿ. ಕುಮಾರ್, ಯುವ ಮುಖಂಡರಾದ ಅಜಯ್ ಶಾಸ್ರೀ, ಸುರೇಂದ್ರ, ಕೇಬಲ್ ಕಿಟ್ಟಿ, ಚಾಮರಾಜ ಆಶ್ರಯ ಸಮಿತಿ ಮಾಜಿ ಸದಸ್ಯ ಮಂಜುನಾಥಪುರ ಎಂ. ಮಹೇಶ್ ಮೊದಲಾದವರು ಇದ್ದರು.