ಮಹರ್ಷಿ ವಾಲ್ಮೀಕಿ ಪುಣ್ಯ ಪುರುಷ: ಬಿ.ವೈ.ವಿಜಯೇಂದ್ರ

| Published : Oct 18 2024, 12:05 AM IST

ಮಹರ್ಷಿ ವಾಲ್ಮೀಕಿ ಪುಣ್ಯ ಪುರುಷ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರ: ಆಚಾರ, ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ವ್ಯವಸ್ಥೆ ಸಹಿತ ಮನುಕುಲದ ಉದ್ಧಾರಕ್ಕಾಗಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಜಗತ್ತಿನ ಎಲ್ಲೆಡೆ ಶ್ರೀ ರಾಮನ ಸಹಿತ ಹಲವು ಮಹಾನ್ ಪುರುಷರನ್ನು ಪರಿಚಯಿಸಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶಿಕಾರಿಪುರ: ಆಚಾರ, ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ವ್ಯವಸ್ಥೆ ಸಹಿತ ಮನುಕುಲದ ಉದ್ಧಾರಕ್ಕಾಗಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಜಗತ್ತಿನ ಎಲ್ಲೆಡೆ ಶ್ರೀ ರಾಮನ ಸಹಿತ ಹಲವು ಮಹಾನ್ ಪುರುಷರನ್ನು ಪರಿಚಯಿಸಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಗುರುವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾ.ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ ಮಹಾಕಾವ್ಯ ನಾಡಿಗೆ ಮಾತ್ರವಲ್ಲದೆ ಜಗತ್ತಿನ ಮಾನವ ಕುಲದ ಉದ್ಧಾರಕ್ಕಾಗಿ ಮಹರ್ಷಿ ವಾಲ್ಮೀಕಿ ನೀಡಿದ ಬಹು ದೊಡ್ಡ ಕೊಡುಗೆಯಾಗಿದ್ದು, ಜಗತ್ತು ತಲೆದೂಗುವಂತೆ ಸುಂದರವಾಗಿ ರಚಿಸಿದ ರಾಮಾಯಣದಲ್ಲಿ ಶ್ರೀ ರಾಮಚಂದ್ರನ ಸಹಿತ ಅನೇಕ ಪುಣ್ಯ ಪುರುಷರು, ದಾರ್ಶನಿಕರು, ಸಂತರ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.

ರಾಮಾಯಣದಲ್ಲಿ ಕೌಟುಂಬಿಕ ವ್ಯವಸ್ಥೆ ಸಹಿತ ಆಚಾರ, ಸಂಸ್ಕೃತಿ, ಸಂಸ್ಕಾರದ ಮೂಲಕ ಮನುಕುಲದ ಉದ್ಧಾರಕ್ಕಾಗಿ ಅಗತ್ಯವಾದ ಎಲ್ಲ ಸಂದೇಶವನ್ನು ನೀಡಿದ ಮಹರ್ಷಿ ವಾಲ್ಮೀಕಿ ಪುಣ್ಯ ಪುರುಷ ಎಂದು ಬಣ್ಣಿಸಿದರು. ಇತ್ತೀಚಿನ ವರ್ಷದಲ್ಲಿ ನಾಡಿನ ಶ್ರೇಷ್ಠ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಬಗ್ಗೆ ಯುವ ಪೀಳಿಗೆಗೆ ಆಸಕ್ತಿ ಕುಂಠಿತವಾತ್ತಿದೆ. ಇದನ್ನರಿತು ವಾಲ್ಮೀಕಿ ಮಹರ್ಷಿ ಸೇರಿದಂತೆ ಮತ್ತಿತರ ಮಹಾನ್ ಸಂತರನ್ನು ಸದಾಕಾಲ ಸ್ಮರಿಸುವ ಸದುದ್ದೇಶದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿಸಿ ರಜೆ ಘೋಷಿಸಿದ್ದಾರೆ ಎಂದು ತಿಳಿಸಿದರು.

ವಾಲ್ಮೀಕಿ ಸಮಾಜಕ್ಕೆ ಎಲ್ಲ ರೀತಿ ಶೈಕ್ಷಣಿಕ, ಆರ್ಥಿಕ ಶಕ್ತಿ ದೊರಕಿಸಲು ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಬೆಂಗಳೂರಿನಲ್ಲಿ 8 ರು. ಕೋಟಿ ವೆಚ್ಚದಲ್ಲಿ ತಾಲೂಕಿನ ಶಿರಾಳಕೊಪ್ಪದಲ್ಲಿ 2 ಕೋಟಿ ರು. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿದ್ದು, ಸಮುದಾಯದ ಬಗೆಗಿನ ಪ್ರಾಮಾಣಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.

ಬಸವಣ್ಣನವರ ಸಮ ಸಮಾಜದ ಕನಸಿನ ರೀತಿಯಲ್ಲಿ ಸರ್ವ ಸಮಾಜದ ಅಭ್ಯುದಯಕ್ಕಾಗಿ ಯಡಿಯೂರಪ್ಪನವರು ಶ್ರಮಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಎಲ್ಲ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸಿ ತಾಲೂಕಿನಾದ್ಯಂತ ಹಲವು ಶಾಲಾ- ಕಾಲೇಜು, ಮೊರಾರ್ಜಿ ಶಾಲೆ, ಹಾಸ್ಟೆಲ್ ನಿರ್ಮಿಸಿದ್ದಾರೆ. ಕಳೆದ 3-4 ದಶಕದ ಹಿಂದಿನ ಶಿಕಾರಿಪುರ ಇದೀಗ ಸಂಪೂರ್ಣ ಬದಲಾಗಿದ್ದು, ಸರ್ವತೋಮುಖ ಅಭಿವೃದ್ಧಿ ಮೂಲಕ ಗುರುತಿಸಿಕೊಂಡಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ.ಜಾತಿ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜೆ.ಪಲ್ಲವಿ ಮಾತನಾಡಿ, ಸಾಧನೆ ಪರಿಶ್ರಮದ ಮೂಲಕ ಜ್ಞಾನ ಸಂಪಾದಿಸಿದಾಗ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಸಲ್ಲಿಸಲು ಸಾಧ್ಯ ಎಂಬುದನ್ನು ಮಹರ್ಷಿ ವಾಲ್ಮೀಕಿ ರಾಮಾಯಣ ಗ್ರಂಥ ರಚಿಸಿ ತೋರಿಸಿಕೊಟ್ಟಿದ್ದಾರೆ ಎಂದರು. ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ ಮಾತನಾಡಿ, ಜಯಂತಿ ಆಚರಣೆಯಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ. ಶೋಷಿತ ಜನಾಂಗಕ್ಕೆ ನ್ಯಾಯ ದೊರಕಿಸಿಕೊಡಬೇಕು. ಈ ದಿಸೆಯಲ್ಲಿ ಸಿದ್ದರಾಮಯ್ಯನವರು ಎಸ್ಟಿಪಿ ಟಿಎಸ್ಪಿ ಕಾಯ್ದೆ ಜಾರಿಗೊಳಿಸಿದ್ದು, ಮನಮೋಹನ್ ಸಿಂಗ್ ಪ್ರಧಾನಿಯಾಗಿ ಸಾಗುವಳಿದಾರ ಪರಿಶಿಷ್ಟರಿಗೆ ಹಕ್ಕುಪತ್ರ ನೀಡಲು ಆದೇಶಿಸಿದ ಮೇರೆಗೆ ಕಾಗೋಡು ತಿಮ್ಮಪ್ಪ 610 ಸಾಗುವಳಿದಾರರಿಗೆ ನೀಡಿದ್ದು ನಂತರದಲ್ಲಿ ಸಮುದಾಯಕ್ಕೆ ನ್ಯಾಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹರ್ಷಿ ವಾಲ್ಮೀಕಿ ಕುರಿತು ಸತೀಶ್ ನಾಯಕ್ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್, ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್, ಇಒ ನಾಗರಾಜ್, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ತಾ.ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಪುರಸಭೆ ಉಪಾಧ್ಯಕ್ಷೆ ರೂಪ ಪಾರಿವಾಳದ, ಮುಖಂಡ ಫಕೀರಪ್ಪ, ರಂಗಪ್ಪ, ಸುರೇಶ್ ಮತ್ತಿತರರಿದ್ದರು.