ಧಾರ್ಮಿಕ ನಂಬಿಕೆಯಲ್ಲಿ ಅಡಗಿದೆ ಬದುಕಿನ ಶ್ರೇಷ್ಠತೆ

| Published : Feb 28 2025, 12:47 AM IST

ಸಾರಾಂಶ

ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರ ಮಾಡುವ ಮೂಲಕ ಶಿವರಾತ್ರಿಯ ಧ್ಯಾನವು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರುಪ್ರತಿ ಜೀವಿಯಲ್ಲಿಯೂ ದೇವರಿದ್ದಾನೆ, ಧಾರ್ಮಿಕ ನಂಬಿಕೆಯಲ್ಲಿ ಬದುಕಿನ ಶ್ರೇಷ್ಠತೆ ಅಡಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಅಶೋಕ ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಹಳೆ ಸಂತೆಪೇಟೆಯ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆಯ ಶ್ರೀ ಅಮೃತೇಶ್ವರ ದೇವಸ್ಥಾನ ಹಾಗೂ ಮೇಟಗಳ್ಳಿಯ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು.ನಂತರ ಮಾತನಾಡಿದ ಅವರು, ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರ ಮಾಡುವ ಮೂಲಕ ಶಿವರಾತ್ರಿಯ ಧ್ಯಾನವು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ ಎಂದು ಹೇಳಿದರು.ಬಿಜೆಪಿ ಮುಖಂಡರಾದ ಎಸ್.ಕೆ. ದಿನೇಶ್, ರಾ. ಪರಮೇಶ್ ಗೌಡ, ಸಂದೇಶ್, ಸತೀಶ್, ಬ್ರಹ್ಮಚಾರ್, ವಿ.ಎಸ್. ಕಿರಣ್, ರಾಮು, ಅರುಣ್, ವಿನೋದ್ ಅರಸ್, ಪ್ರಮೋದ್ ಗೌಡ, ಮಲ್ಲಿಕ್, ಕಾಂತ , ದೇವರಾಜ್, ಸಂಜೀವಿನಿ ಕುಮಾರ್, ದಿವಾಕರ್, ಗೋಪಿ, ರವಿಕುಮಾರ್, ಚಿಕ್ಕರಾಮಣ್ಣ ಇದ್ದರು.