ಇಂದು ಪರಿಸರದಲ್ಲಿ ಅಸಮತೋಲನ ಹೆಚ್ಚಾಗಿ ಅನೇಕ ಕಷ್ಟಗಳಿಗೆ ತುತ್ತಾಗುತ್ತಿದ್ದೇವೆ.
ಶಿರಹಟ್ಟಿ: ಮಹಾತ್ಮ ಗಾಂಧೀಜಿ ಈ ದೇಶ ಕಂಡ ಮಹಾನ್ ಚೇತನರಾಗಿದ್ದು ಅವರ ಸತ್ಯ, ಅಹಿಂಸೆ, ಶಾಂತಿ ತತ್ವಾದರ್ಶಗಳು ಬರಡಾದ ಬದುಕಿಗೆ ಬೆಳಕಾಗುತ್ತವೆ ಎಂದು ಸಾವಿತ್ರಿಬಾಯಿ ಫುಲೆ ರೇಂಜರ್ಸ್ ಘಟಕದ ಲೀಡರ್ ಸುಧಾ ಹುಚ್ಚಣ್ಣವರ ಹೇಳಿದರು.
ಪಟ್ಟಣದ ಎಫ್.ಎಂ. ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿ ಜೀವನ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿ ಸರ್ವ-ಧರ್ಮಗಳ ಪ್ರಾರ್ಥನೆ ನೆರೆವೇರಿಸಿ ಮಾತನಾಡಿದರು.ಗಾಂಧೀಜಿಯಂತಹ ಸಾಕಾರ ಮೂರ್ತಿಗಳು ಇಂದು ದೇಶಕ್ಕೆ ಅವಶ್ಯಕವಾಗಿದ್ದಾರೆ. ಅಂತಹ ಗುಣ ಬೆಳೆಸಿಕೊಂಡು ವಿದ್ಯಾರ್ಥಿಗಳು ದೇಶದ ಅಭ್ಯುದಯಕ್ಕೆ ಜೀವನವನ್ನು ಸಮರ್ಪಿಸಿಕೊಳ್ಳಬೇಕು. ಅವರ ಸರಳ ಜೀವನ ಶೈಲಿ, ಉದಾತ್ತ ವಿಚಾರಧಾರೆಗಳು ಎಲ್ಲರಲ್ಲೂ ಬರಲಿ. ಸ್ವಚ್ಛ ಭಾರತದ ಬಗ್ಗೆ ಅವರು ಕಂಡ ಕನಸು ನನಸಾಗಿಸಬೇಕು ಎಂದರು.
ಇಂದು ಪರಿಸರದಲ್ಲಿ ಅಸಮತೋಲನ ಹೆಚ್ಚಾಗಿ ಅನೇಕ ಕಷ್ಟಗಳಿಗೆ ತುತ್ತಾಗುತ್ತಿದ್ದೇವೆ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿವಹಿಸಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಈ ವೇಳೆ ಪ್ರಾಚಾರ್ಯ ಎಂ.ಸಿ. ಭಜಂತ್ರಿ, ಎನ್. ಹನುಮರಡ್ಡಿ, ಪಿ.ಎನ್. ಕುಲಕರ್ಣಿ, ರೇಣುಕಾ ಜಗಂಡಬಾವಿ, ಜಿ.ಕೆ. ಕರ್ಕಣ್ಣವರ, ಎಫ್.ಎ. ಬಾಬುಕಾನವರ, ಆರ್.ಎಫ್. ಬಡಕುರ್ಕಿ, ನೌಶಾದ್ ಶಿಗ್ಲಿ, ಸುನಿಲ್ ಲಮಾಣಿ, ಎನ್.ಆರ್. ಉಡಚಗೋಂಡ, ರೇಂಜರ್ಸ್ ಘಟಕದ ಲೀಡರ್ ಆದ ಸ್ನೇಹಾ ಮುಳುಗುಂದ್ ಹಾಗೂ ವಿಜಯಲಕ್ಷ್ಮಿ ಡೊಳ್ಳಿನ, ಎಸ್.ಐ. ಒಂಟಿಯವರ, ಚೈತ್ರಾ ಲಮಾಣಿ, ಸುಧಾ ಬಡ್ಡೆಪ್ಪನವರ್, ಸುಮಯ್ಯ, ಲಕ್ಷ್ಮಿ ಮುಳಗುಂದ, ಸನಾ ಮುಂತಾದವರು ಉಪಸ್ಥಿತರಿದ್ದರು.