ಭೂಮಿಗೆ ದೇವಗಂಗೆಯನ್ನು ತಂದ ಮಹಾತಪಸ್ವಿ ಭಗೀರಥ: ಕೆ.ಎಂ.ಶಿವಪ್ಪ

| Published : May 15 2024, 01:34 AM IST

ಭೂಮಿಗೆ ದೇವಗಂಗೆಯನ್ನು ತಂದ ಮಹಾತಪಸ್ವಿ ಭಗೀರಥ: ಕೆ.ಎಂ.ಶಿವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಾಪಗ್ರಸ್ಥರಾಗಿದ್ದ ತನ್ನ ಪೂರ್ವಜರ ಮೋಕ್ಷಕ್ಕಾಗಿ ತನ್ನ ಅಧಿಕಾರವನ್ನು ತ್ಯಾಗಮಾಡಿ ಮಹಾತಪಸ್ಸಿನ ಮೂಲಕ ದೇವಗಂಗೆಯನ್ನು ಭೂಮಿಗೆ ತಂದ ಕಾರಣದಿಂದಲೇ ಇಂದು ನಮ್ಮ ಭೂಮಿ ಜೀವಜಲದಿಂದ ಸಂಮೃದ್ದವಾಗಿದೆ. ಜಲವಿಲ್ಲದೆ ಜೀವವಿಲ್ಲ. ಸಮಾಜದ ಒಳಿತಿಗಾಗಿ ತಮ್ಮ ಅಧಿಕಾರ ಮತ್ತು ಕುಟುಂಬವನ್ನು ತ್ಯಾಗಮಾಡಿ ಕಠೋರ ತಪ್ಪಸ್ಸು ಮಾಡುವ ಮೂಲಕ ಸಮಾಜಕ್ಕೆ ಶಾಶ್ವತ ಪರಿಹಾರ ನೀಡಿದ ಮಹನೀಯರ ಸಾಲಿನಲ್ಲಿ ಭಗೀರಥರು ಸೇರಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಮ್ಮ ಘೋರ ತಪಸ್ಸಿನ ಮೂಲಕ ಮಹಾಶಿವನನ್ನು ಒಲಿಸಿಕೊಂಡು ಭೂಮಿಗೆ ದೇವಗಂಗೆಯನ್ನು ತಂದ ಮಹಾತಪಸ್ವಿ ಭಗೀರಥ ಮಹಾರಾಜ ಎಂದು ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ನಡಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಭಗಿರಥ ಜಯಂತಿಯಲ್ಲಿ ಮಾತನಾಡಿ, ಇಕ್ಷ್ಯಾಕು ವಂಶದ ಪ್ರಸಿದ್ಧ ದೊರೆ ದಿಲೀಪನ ಮಗನಾದ ಭಗೀರಥ ರಾಜನಾಗಿದ್ದರೂ ತನ್ನ ಮಹಾತಪ್ಪಿಸಿನ ಮೂಲಕ ಶ್ರೇಷ್ಠ ಸಂತನಾಗಿದ್ದಾನೆ. ಭಗೀರಥ ಮಹಾರಾಜನ ಬಗ್ಗೆ ಮಹಾ ಭಾರತದಲ್ಲಿ ನಾವು ಉಲ್ಲೇಖ ಕಾಣಬಹುದು ಎಂದರು.

ಶಾಪಗ್ರಸ್ಥರಾಗಿದ್ದ ತನ್ನ ಪೂರ್ವಜರ ಮೋಕ್ಷಕ್ಕಾಗಿ ತನ್ನ ಅಧಿಕಾರವನ್ನು ತ್ಯಾಗಮಾಡಿ ಮಹಾತಪಸ್ಸಿನ ಮೂಲಕ ದೇವಗಂಗೆಯನ್ನು ಭೂಮಿಗೆ ತಂದ ಕಾರಣದಿಂದಲೇ ಇಂದು ನಮ್ಮ ಭೂಮಿ ಜೀವಜಲದಿಂದ ಸಂಮೃದ್ದವಾಗಿದೆ. ಜಲವಿಲ್ಲದೆ ಜೀವವಿಲ್ಲ. ಸಮಾಜದ ಒಳಿತಿಗಾಗಿ ತಮ್ಮ ಅಧಿಕಾರ ಮತ್ತು ಕುಟುಂಬವನ್ನು ತ್ಯಾಗಮಾಡಿ ಕಠೋರ ತಪ್ಪಸ್ಸು ಮಾಡುವ ಮೂಲಕ ಸಮಾಜಕ್ಕೆ ಶಾಶ್ವತ ಪರಿಹಾರ ನೀಡಿದ ಮಹನೀಯರ ಸಾಲಿನಲ್ಲಿ ಭಗೀರಥರು ಸೇರಿದ್ದಾರೆ ಎಂದರು.

ಭಗೀರಥ ತಮ್ಮ ಘೋರ ತಪಸ್ಸನ್ನು ಮಾಡಿ ಶಿವ ಮತ್ತು ಗಂಗೆಯ ಮನಸ್ಸು ಒಲಿಸಿಕೊಂಡು ಗಂಗೆಯನ್ನು ಭೂಮಿಗೆ ಬರುವಂತೆ ಮಾಡುವ ಮೂಲಕ ತಮ್ಮ ಪೂರ್ವಜರಿಗೆ ಮೋಕ್ಷ ಮಾರ್ಗವನ್ನು ಕಲ್ಪಿಸಿದ್ದಲ್ಲದೇ, ಭೂಮಿಯ ಜಲಕ್ಷಾಮವನ್ನು ನೀಗಿಸಿದರು. ಇಂತಹ ಮಹಾನ್ ಸಂತರಂಥಹ ನಾಯಕರನ್ನು ಹೊಂದಿರುವ ನಮ್ಮ ಜನ್ಮಭೂಮಿಯೇ ಶ್ರೇಷ್ಠವಾದ ಸ್ಥಳವಾಗಿದೆ ಎಂದರು.

ಪುರಾಣದ ಕಥೆಗಳನ್ನು ನಾವು ತಿರಸ್ಕರಿಸಬಾರದು. ನಮ್ಮ ಪುರಾಣದ ಒಂದೊಂದು ಕಥೆಯಲ್ಲಿಯೂ ಮಾನ ಕುಲದ ಹಿತಕ್ಕಾಗಿಯೇ ಬದುಕಿದ ನಮ್ಮ ಹಿರಿಯರ ಬದುಕಿನ ನಡೆಯಿದೆ. ನಮ್ಮ ಪುರಾಣ ಪುರಷರ ಜೀವನ ಗಾತೆಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸಿಉವ ಕೆಲಸ ಆಗಬೇಕು. ಇದರಿಂದ ನಮ್ಮ ಸಂಸ್ಕೃತಿ ಮತ್ತಷ್ಟು ವಿಕಸಿಸುತ್ತದೆಯಲ್ಲದೆ ನಮ್ಮ ಮಕ್ಕಳಿಗೆ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ ಎಂದರು.

ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮಾತನಾಡಿ, ಮಹಾನ್ ವ್ಯಕ್ತಿಗಳ ಸಾಧನೆ ಹಿಂದೆ ಅವರ ತ್ಯಾಗ, ಪರಿಶ್ರಮ, ಅನುಭಗಳು ಅಡಕವಾಗಿರುತ್ತವೆ. ಈ ನಾಯಕರುಗಳು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಇಡೀ ವಿಶ್ವಕ್ಕೇ ಅವರ ಆದರ್ಶಗಳು ಅನುಕರಣೀಯ. ಭಗೀರಥ ಮಹರ್ಷಿಗಳ ತ್ಯಾಗ ಅವರ ಸೇವಾ ಮನೋಭಾವನೆಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಸಿಡಿಪಿಓ ಅರುಣ್ ಕುಮಾರ್, ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಶಿಕ್ಷಣ ಸಂಯೋಜಕಿ ನೀಲಾಮಣಿ, ಕಸಬಾ ರಾಜಸ್ವನಿರೀಕ್ಷಕ ಜ್ಞಾನೇಶ್, ಗ್ರಾಮಾಭಿವೃದ್ದಿ ಅಧಿಕಾರಿ ಜಗದೀಶ್, ಆಸರೆ ಸಮಾಜಸೇವಾ ಸಂಸ್ಥೆ ಎಚ್.ಬಿ.ಮಂಜುನಾಥ್, ಅಮೃತರಾಜ್ ಸೇರಿದಂತೆ ಸಮುದಾಯದ ಮುಖಂಡರುಗಳು ಹಾಜರಿದ್ದರು.