ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಬಡವರಿಗೆ ಕೈಗೆಟಕುವ ವೆಚ್ಚದಲ್ಲಿ ನಿಸ್ವಾರ್ಥ ಆರೋಗ್ಯ ಸೇವೆ ಮಾಡುತ್ತಿರುವ ಸ್ಥಳೀಯ ಮಹಾವೀರ ಆರೋಗ್ಯ ಕೇಂದ್ರಕ್ಕೆ ₹1,11,111 ದೇಣಿಗೆ ನೀಡಲಾಗುವುದು ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಚೇರಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಹೇಳಿದರು.ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ 66ನೇ ಸಂಸ್ಥಾಪನಾ ದಿನದ ನಿಮಿತ್ತ ವಿಎಸ್‌ಎಂ ಫೌಂಡೇಶನ್ ಹಾಗೂ ಡಾ. ವೈಶಾಲಿ ಹಾಗೂ ಡಾ.ವಿಲಾಸ ಪಾರೇಖ ಮಹಾವೀರ ಆರೋಗ್ಯ ಕೇಂದ್ರ ಆಶ್ರಯದಲ್ಲಿ ವಿಎಸ್‌ಎಂ ಸಿಬಿಎಸ್‌ಇ ಶಾಲೆಯಲ್ಲಿ ಗುರುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ನಮ್ಮ ಮಂಡಳದ ವಿದ್ಯಾರ್ಥಿಗಳ ಆರೋಗ್ಯದ ಜೊತೆಗೆ ಸಾರ್ವಜನಿಕರ ಆರೋಗ್ಯವೂ ನಮಗೆ ಮಹತ್ವದ್ದು. ಆದ್ದರಿಂದ ಇಂತಹ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗುವುದು ಎಂದರು.
ನವಜಾತಶಾಸ್ತ್ರಜ್ಞ ಮತ್ತು ಮಕ್ಕಳ ತಜ್ಞ ಡಾ.ವಿಜಯ ಮಾಳಿ ಮಾತನಾಡಿ, ಸಾರ್ವಜನಿಕರ ಜೊತೆಗೆ ತಮ್ಮ ಸಂಸ್ಥೆಯ ಮಕ್ಕಳ ಆರೋಗ್ಯದ ಕುರಿತು ಇಷ್ಟೊಂದು ಕಾಳಜಿ ವಹಿಸುತ್ತಿರುವ ವಿಎಸ್‌ಎಂ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.ವಿಎಸ್‌ಎಂ ಸಂಚಾಲಕ ಸಚಿನ ಹಾಲಪ್ಪನವರ ಮಾತನಾಡಿ, ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ರೋಗ ಬರುವ ಮುನ್ನ ಎಚ್ಚರ ವಹಿಸಿದಲ್ಲಿ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಲು ಸಾಧ್ಯ. ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ನಡೆಯಬೇಕು ಎಂದರು.
ಓಂ ಮೆಡಿಸಿನ್ ಮಾಲ್ ಮೂಲಕ ಅವಶ್ಯಕ ಉಚಿತ ಔಷಧಿಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು 2 ಸಾವಿರಕ್ಕೂ ಅಧಿಕ ರೋಗಿಗಳ ತಪಾಸಣೆ ನಡೆಸಲಾಯಿತು. ಮಕ್ಕಳ ತಜ್ಞೆ ಡಾ.ಸ್ನೇಹಲ್ ಮಾಳಿ, ವಿಎಸ್‌ಎಂ ಸಂಚಾಲಕ ಗಣೇಶ ಖಡೇದ ಮುಖ್ಯ ಅತಿಥಿಯಾಗಿದ್ದರು. ಸಂಚಾಲಕ ಸಂಜಯ ಮೊಳವಾಡೆ ಅಧ್ಯಕ್ಷತೆ ವಹಿಸಿದ್ದರು. ಡಾ.ಚಂದ್ರಕಾಂತ ಕುರಬೆಟ್ಟಿ, ಡಾ.ಶಂಕರಗೌಡ ಪಾಟೀಲ, ಡಾ.ಅಶೋಕ ಪೂಜಾರಿ, ಡಾ.ಎಂ.ಬಿ.ಪಾಟೀಲ, ಡಾ.ಮಹೇಶ ಐನಾಪುರೆ, ಡಾ.ಐಶ್ವರ್ಯಾ ಪಾಟೀಲ, ಡಾ.ಪವನ ಜೋಶಿ, ಡಾ.ನೂತನ ಚೌಗುಲೆ, ಡಾ.ಕೌಸ್ತುಭ ಖಾಂಡಕೆ, ಡಾ.ರೋಹಿನಿ ಪಾಟೀಲ, ಡಾ.ಐಶ್ವರ್ಯಾ ಖಾಂಡಕೆ, ಡಾ.ಕಾವೇರಿ ಚರಾಟಿ, ಮೊದಲಾದ ವೈದ್ಯರನ್ನು ಸನ್ಮಾನಿಸಲಾಯಿತು.ಉಪಾಧ್ಯಕ್ಷ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಆನಂದ ಗಿಂಡೆ, ಅವಿನಾಶ ಪಾಟೀಲ ಇತರರಿದ್ದರು. ಸಿಇಒ ಡಾ.ಸಿದ್ಧಗೌಡ ಪಾಟೀಲ ಸ್ವಾಗತಿಸಿ, ಶಿಲ್ಪಾ ರೋಖಡೆ ನಿರೂಪಿಸಿ, ಪಿಯು ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ ವಂದಿಸಿದರು.
--6ಎನ್‌ಪಿಎನ್1
ನಿಪ್ಪಾಣಿಯ ವಿಎಸ್‌ಎಂ ಫೌಂಡೇಶನ್ ಹಾಗೂ ಮಹಾವೀರ ಆರೋಗ್ಯ ಕೇಂದ್ರ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ.ವಿಜಯ ಮಾಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.