ಸಾರಾಂಶ
Mahavir Jain is a proponent of truth: Vikrama
-ಶಹಾಪುರದಲ್ಲಿ ಜೈನ ಸಮುದಾಯದಿಂದ ಮಹಾವೀರರ ಭಾವಚಿತ್ರದ ಮೆರವಣಿಗೆ
-----ಕನ್ನಡಪ್ರಭ ವಾರ್ತೆ ಶಹಾಪುರ
ಭಗವಾನ್ ಮಹಾವೀರರು ಅಹಿಂಸೆಯ ಮಾರ್ಗವನ್ನು ಜಗತ್ತಿಗೆ ಸಾರಿದ ಒಬ್ಬ ಮಹಾನ್ ಶ್ರೇಷ್ಠ ಸಂತ. ಪ್ರೀತಿ-ವಿಶ್ವಾಸ, ಕರುಣೆಯೊಂದಿಗೆ ಎಲ್ಲ ಧರ್ಮಗಳ ಜೊತೆ ಸೌಹಾರ್ದತೆಯಿಂದ ಇರಬೇಕೆಂದು ಮಹಾವೀರರು ಬೋಧಿಸಿದ್ದಾರೆ ಎಂದು ಪತ್ರಕರ್ತ ವಿಕ್ರಮ್ ಜೈನ ತಿಳಿಸಿದರು.ಮಹಾವೀರ ಜಯಂತಿ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಮಹಾವೀರ ಜೈನರ ಭಾವಚಿತ್ರದ ಮೆರವಣಿಗೆ, ಜೈನ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಭಗವಾನ್ ಮಹಾವೀರರ ಬದುಕು ಮತ್ತೊಬ್ಬರಿಗೆ ಮಾದರಿ. ಭಗವಾನ್ ಮಹಾವೀರರು ಮಾನವನ ಕಲ್ಯಾಣಕ್ಕಾಗಿ ತಮ್ಮ ಆತ್ಮಸಾಧನೆಯಿಂದ ಏನನ್ನು ಅರಿಯುತ್ತಿದ್ದರೋ, ಅದನ್ನು ಪ್ರಜೆಗಳಿಗೆ ತತ್ವಗಳ ಮೂಲಕ ನೀಡುತ್ತಿದ್ದರು. ಅವರನ್ನು ಜೈನ ಧರ್ಮವನ್ನು ಉದ್ದೀಪನಗೊಳಿಸಿದ ಮಹಾನ್ ಪುರುಷ ಎನ್ನಬಹುದಾಗಿದೆ ಎಂದರು.
ಜೈನ ಸಮುದಾಯದ ಹಿರಿಯ ಮುಖಂಡ ಮಂಗೀಲಾಲ್ ಜೈನ ಮಾತನಾಡಿ, ಯಾರಿಗೂ ಯಾವ ರೀತಿಯಿಂದಲೂ ಶೋಷಣೆಯನ್ನೂ ಮಾಡದೆ ಮತ್ತೊಬ್ಬರ ಕಷ್ಟದಲ್ಲಿ ನೆರವಾಗಬೇಕು. ರಾಗ-ದ್ವೇಷಗಳನ್ನು ದೂರಮಾಡಿ ಜೀವನ ಸಾರ್ಥಕ ಮಾಡಿಕೊಂಡಾಗ ಜೀವನ ಪಾವನವಾಗುವುದು ಎಂದರು.ಸಮಾಜದ ಮುಖಂಡರಾದ ಕಾಂತಿಲಾಲ ಜೈನ್, ಇಂದರ್‌ಮಲ್ ಜೈನ್, ದೇವಿಚಂದ್ ಜೈನ್, ರಮೇಶ್ ಜೈನ್, ಲಲಿತಕುಮಾರ್ ಜೈನ್, ಆನಂದ್ ಜೈನ್, ವಿಜಯಕುಮಾರ್ ಜೈನ್, ವಿಶಾಲ್ ಜೈನ್, ವಿವೇಕ್ ಜೈನ್ ಮುಂತಾದವರು ಉಪಸ್ಥಿತರಿದ್ದರು.
-----ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜೈನ ಸಮುದಾಯದ ವತಿಯಿಂದ ಶಹಾಪುರ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು.
10ವೈಡಿಆರ್5