ಸಾರಾಂಶ
ಮಹಾವೀರ ಜಯಂತಿಯ ಅಂಗವಾಗಿ ಸಂಘಟನೆಗಳ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಗುರುವಾರ ಮೂಡುಬಿದಿರೆ ಧವಲಾ ಕಾಲೇಜಿನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮಹಾವೀರ ಜಯಂತಿಯ ಅಂಗವಾಗಿ ಎಜೆ ಆಸ್ಪತ್ರೆ ಜೈನ್ ಮೆಡಿಕಲ್ ಸೆಂಟರ್, ಜೈನ್ ಮಿಲನ್ ಮಹಾವೀರ ಸಂಘ, ತಾಳವ ಇಂದ್ರ ಸಮಾಜ, ತ್ರಿಭುವನ್ ಯೂತ್ ಅಸೋಸಿಯೇಶನ್ ರೋಟರಿ ಕ್ಲಬ್ , ಟೆಂಪಲ್ ಟೌನ್ , ಡಿಜೆವಿವಿ ಸಂಘ, ತ್ರಿಭುವನ್ ಹಾಗೂ ಬೆದ್ರ ಆಟೋ ಸ್ಪೋರ್ಟ್ಸ್ ಕ್ಲಬ್, ತ್ರಿಭುವನ್ ಟ್ರಸ್ಟ್, ಸರ್ವಮಂಗಳ ಹಾಗೂ ಮಹಿಳಾ ಸಂಘಗಳ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಗುರುವಾರ ಧವಲಾ ಕಾಲೇಜಿನಲ್ಲಿ ನಡೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಉದ್ಘಾಟಿಸಿದರು.
ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾವೀರ ಸ್ವಾಮಿಯು ಅಹಿಂಸೆಯನ್ನು ಬೋಧಿಸಿದ್ದು, ಅದು ಜಗತ್ತಿಗೆ ಇಂದೂ ಪ್ರಸ್ತುತವಾಗಿದೆ. ಪ್ರಾಣಿಗಳಿಗೆ ಮಾತ್ರವಲ್ಲ ಮನುಷ್ಯರಿಗೂ ಹಿಂಸೆಯಾಗಬಾರದು. ಹಿಂಸಾಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದರು. ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ , ಡಿಜೆವಿವಿ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ, ಎಪಿಎಂಸಿ ಮಾಜಿ ಅಧ್ಯಕ್ಷ ಬಕೆ ಕೃಷ್ಣರಾಜ ಹೆಗ್ಡೆ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಜೈನ್ ಮೆಡಿಕಲ್ ಸೆಂಟರ್ ನ ಡಾ. ಮಹಾವೀರ ಜೈನ್, ಎಜೆ ಆಸ್ಪತ್ರೆ ಯ ವೈದ್ಯಾಧಿಕಾರಿ ಡಾ ದಿಶಾ ಅಜಿಲ,ದಂತ ವೈದ್ಯ ಡಾ. ರೇಶ್ಮಾ ಬ್ಲಡ್ ಬ್ಯಾಂಕ್ ನ ಮುಖ್ಯಾಧಿಕಾರಿ ಗೋಪಾಲಕೃಷ್ಣ, ಸರ್ವಮಂಗಳ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ವೇದಿಕೆಯಲ್ಲಿ ಇದ್ದರು.ಪ್ರಭಾತ್ ಬಲ್ಲಾಡ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಮಹಾವೀರ ಜೈನ್ ವಂದಿಸಿದರು.
ಶಿಬಿರದಲ್ಲಿ ಹೆಚ್ಚು ಮಂದಿ ಆರೋಗ್ಯ ತಪಾಸಣೆ ನಡೆಸಿದರು ಹಾಗೂ ರಕ್ತದಾನ ಮಾಡಿದರು.