ಜೈನ ಧರ್ಮ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಧರ್ಮದ ಆಚಾರ-ವಿಚಾರಗಳು ನಿರ್ದಿಷ್ಟ ಜಾತಿ ಮತಕ್ಕೆ ಸೀಮಿತವಾಗಿರದೇ ಮಾನವಕುಲದ ಒಳಿತಿಗೆ ಮಾರ್ಗದಶಕವಾಗಿವೆ ಎಂದು ಜೆಎಸ್‌ಎಸ್‌ ಕಾರ್ಯದರ್ಶಿ ಅಜಿತ್‌ ಪ್ರಸಾದ್‌ ಹೇಳಿದರು.

ಧಾರವಾಡ:

ಪ್ರಸ್ತುತ ಯುದ್ಧಗಳ ಸಂದರ್ಭದಲ್ಲೂ ದೇಶದ ಜನತೆ ನೆಮ್ಮದಿಯ ಜೀವನ ಸಾಗಿಸುತ್ತಿದೆ ಎಂದರೆ ಅದಕ್ಕೆ ಭಗವಾನ ಮಹಾವೀರರ ಅಹಿಂಸಾ ತತ್ವ, ಬುದ್ಧ ಬಸವಾದಿಗಳ ಉಪದೇಶಗಳೇ ಕಾರಣ ಎಂದು ಜೆಎಸ್‌ಎಸ್‌ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ, ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್ಎಸ್‌ ಐಟಿಐ ಕಾಲೇಜು ಮತ್ತು ಎಂಸಿಎ ಕಾಲೇಜು ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ಭಗವಾನ ಮಹಾವೀರ ಜಯಂತಿಯಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದ ಅವರು, ಕೋಪ, ಹಿಂಸೆ ಮತ್ತು ಅಸಹಿಷ್ಣುತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಹಾವೀರರ ಉಪದೇಶಗಳು ಬಹಳ ಅಗತ್ಯವಾಗಿವೆ. ನಾವು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಯುತ್ತದೆ ಎಂದರು.

ಜೈನ ಧರ್ಮ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಧರ್ಮದ ಆಚಾರ-ವಿಚಾರಗಳು ನಿರ್ದಿಷ್ಟ ಜಾತಿ ಮತಕ್ಕೆ ಸೀಮಿತವಾಗಿರದೇ ಮಾನವಕುಲದ ಒಳಿತಿಗೆ ಮಾರ್ಗದಶಕವಾಗಿವೆ. ಕೋಪಕ್ಕಿಂತ ಕ್ಷಮೆ, ದ್ವೇಷಕ್ಕಿಂತ ಪ್ರೀತಿ, ಹಿಂಸೆಗೆ ಬದಲು ದಯೆ ತೋರುವುದು, ಅಸೂಯೆ ಬಿಡುವುದು ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತವೆ ಎಂದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಆರ್.ವಿ. ಚಿಟಗುಪ್ಪಿ, ಜೈನ ಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬಹುದು ಎಂದರು. ಪ್ರಾಚಾರ್ಯ ಮಹಾವೀರ ಉಪಾದ್ಯೆ, ಎಂಸಿಎ ನಿರ್ದೇಶಕ ಡಾ. ಸೂರಜ್ ಜೈನ್, ಜ್ಯೋತಿ ಅಕ್ಕಿ, ಶ್ರುತಿ ಶೆಟ್ಟಿ, ಡಾ. ರೋನಿಲ್ ಮನೋಹರ್, ಡಾ. ಜಿನ್ನಪ್ಪ ಕುಂದಗೋಳ, ಡಾ. ಮಂಜುನಾಥ ಪೂಜಾರ, ಭಲಭೀಮ ಹಾವನೂರ, ಶಿಲ್ಪಾ ನಾಯಕ, ರಜನಿ ತಾಳಿಕೋಟಿ ಇದ್ದರು.