ಮಾಹೆ ಮಣಿಪಾಲ-ಜಪಾನ್ ಎಚ್‌ಟಿಎಲ್‌ ಕಂಪನಿ ಒಡಂಬಡಿಕೆ

| Published : Jul 02 2025, 11:49 PM IST

ಮಾಹೆ ಮಣಿಪಾಲ-ಜಪಾನ್ ಎಚ್‌ಟಿಎಲ್‌ ಕಂಪನಿ ಒಡಂಬಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಜಪಾನ್ ದೇಶದ ಎಚ್‌ಟಿಎಲ್ ಕಂಪನಿ ಮತ್ತು ಅದರ ಭಾರತೀಯ ಅಂಗಸಂಸ್ಥೆಯಾದ ಎಚ್‌ಟಿಎಲ್ ಕೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗಳ ಮಧ್ಯೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಜಪಾನ್ ದೇಶದ ಎಚ್‌ಟಿಎಲ್ ಕಂಪನಿ ಮತ್ತು ಅದರ ಭಾರತೀಯ ಅಂಗಸಂಸ್ಥೆಯಾದ ಎಚ್‌ಟಿಎಲ್ ಕೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗಳ ಮಧ್ಯೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಜೂ. 26ರಂದು, ಟೋಕಿಯೋ, ಮಣಿಪಾಲ, ಬೆಂಗಳೂರು ಮತ್ತು ಕೊಲ್ಕೊತ್ತಾಗಳಲ್ಲಿ ಉಭಯ ಸಂಸ್ಥೆಗಳ ಪ್ರಮುಖರ ನಡುವೆ ಝೂಮ್‌ ಮೂಲಕ ವರ್ಚುವಲ್ ಸಹಿ ಸಮಾರಂಭದಲ್ಲಿ ಮುಂದಿನ 5 ವರ್ಷಗಳ ಸಹಯೋಗಕ್ಕೆ ಈ ಒಡಂಬಡಿಕೆ ನಡೆಸಲಾಯಿತು.

ಈ ವರ್ಚುವಲ್ ಸಹಿ ಸಮಾರಂಭದಲ್ಲಿ ಮಾಹೆಯ ಸಹಉಪಕುಲಪತಿ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ್, ಕುಲಸಚಿವ ಡಾ. ಪಿ ಗಿರಿಧರ್ ಕಿಣಿ, ಔದ್ಯಮಿಕ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್, ಎಂಐಟಿ ಮಣಿಪಾಲದ ನಿರ್ದೇಶಕ ಡಾ. ಅನಿಲ್ ರಾಣಾ, ಎಚ್‌ಟಿಎಲ್ ಜಪಾನ್‌ನ ಅಧ್ಯಕ್ಷ ಅಚಿಂತ್ಯ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಡಾ. ಆತ್ಮರಾಮ್ ಗುಪ್ತ, ಮಾರುಕಟ್ಟೆ ಮಹಾಪ್ರಬಂಧಕ ಹಿಡೇಕಿ ಹಮಾದ , ಮಹಾಪ್ರದಬಂಧಕ ಅಖೀಕೋ ಮಿಯಾ ಮೋಟೋ, ಎಚ್‌ಟಿಎಲ್ ಇಂಡಿಯಾದ ನಿರ್ದೇಶಕ ಡಾ. ಸಂಜಯ್ ಆಚಾರ್ಯ, ಮಹಾಪ್ರಬಂಧಕ ಸುಬ್ರಾತ ಮುಖರ್ಜಿ, ಭಾರತೀಯ ಕಾರ್ಯಾಚರಣೆಗಳ ಮುಖ್ಯಸ್ಥ ಲಿವಿಂಗ್ಸ್ ಟನ್ ಕ್ರಿಸ್ಟಾಫರ್, ಸಿಒಒ ಅಬು ಅಬಿಜಿತ್, ಕೇಂದ್ರ ಮುಖ್ಯಸ್ಥ ನೀಲಾದ್ರಿ ದಾಸ್, ಸಹಾಯಕ ಕೇಂದ್ರ ಮುಖ್ಯಸ್ಥ ಅಖಿಲ್ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.

ಈ ಒಡಂಬಡಿಕೆಯಿಂದ ಸಹಯೋಗಿ ಸಂಸ್ಥೆಗಳ ನಡುವೆ ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಉತ್ಪಾದನೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳಲ್ಲಿರುವ ಸಮಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಮಾಹೆಯ ಮತ್ತು ಎಚ್‌ಟಿ ಎಲ್ ತಾಂತ್ರಿಕ ತಜ್ಞರ ನಡುವೆ ಒಗ್ಗಟ್ಟಾದ ಸಂಶೋಧನಾ ಅಧ್ಯಯನಗಳಿಂದ ಉಂಟಾಗುವ ಹೊಸ ಅನ್ವೇಷಣೆಗಳಿಗೆ ಪ್ರೋತ್ಸಾಹ ಸಿಗಲಿದೆ.

ಎಚ್‌ಟಿಎಲ್ ಸಂಸ್ಥೆಯು ತನ್ನ ಪ್ರಮುಖ ಸೆಮಿಕಂಡಕ್ಟರ್ ಉಪಕರಣ ತಯಾರಿಕೆಯ ವ್ಯಾಪಕ ಜಾಗತಿಕ ವಿತರಣಾ ಜಾಲದಿಂದ ಮಾಹೆಯಲ್ಲಿ ಒಂದು ಅತ್ಯಾಧುನಿಕ ಹಾಗೂ ಸುಧಾರಿತ ಲಿತೋಗ್ರಾಫಿ ವ್ಯವಸ್ಥೆ, ಪ್ಲಾಟ್ ಪ್ಯಾನಲ್ ಡಿಸ್ಪ್ಲೇ ಪರಿಕರಗಳು ಮತ್ತು ತ್ರೀಡಿ ಮುದ್ರಣ ತಂತ್ರಜ್ಞಾನ ಇರುವ ಲೇಬೋರಟರಿಯನ್ನು ಸ್ಥಾಪಿಸಲು ಈ ಒಡಂಬಡಿಕೆ ಸಹಾಯ ಮಾಡುತ್ತದೆ. ಮಾಹೆ ವಿದ್ಯಾರ್ಥಿಗಳಿಗೆ ಭಾರತ, ಜಪಾನ್ ಮತ್ತು ಇತರ ರಾಷ್ಟ್ರಗಳ ಎಚ್ ಟಿ ಎಲ್ ಘಟಕಗಳಲ್ಲಿ ಇಂಟರ್ನ್‌ಷಿಪ್‌ಗೆ ಅವಕಾಶ ನೀಡುತ್ತದೆ ಎಂದು ಮಾಹೆ ತಿಳಿಸಿದೆ.