ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಅಂಗ ಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ)ಗೆ ಪ್ರತಿಷ್ಠಿತ ಸಿಎಫ್‌ಎ ಇನ್‌ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಸಿಕ್ಕಿದ್ದು, ಎಂಐಟಿಯು ಈ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಅಂಗ ಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ)ಗೆ ಪ್ರತಿಷ್ಠಿತ ಸಿಎಫ್‌ಎ ಇನ್‌ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಸಿಕ್ಕಿದ್ದು, ಎಂಐಟಿಯು ಈ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೇ 6ರಂದು ಮಣಿಪಾಲದಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನ ಪ್ರತಿನಿಧಿಗಳಾದ ಸೈಮ್ ಫಕಿಹ್ ಮತ್ತು ಕುಮಾರಿ ಅಂಜನಾ ನಹರ್ ಅವರು ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರಿಗೆ ಈ ಮಾನ್ಯತೆ ಪ್ರಮಾಣಪತ್ರ ಅಧಿಕೃತವಾಗಿ ಹಸ್ತಾಂತರಿಸಿದರು.ಎಂಐಟಿ ನಿರ್ದೇಶಕರಾದ ಕಮಾಂಡರ್ (ಡಾ) ಅನಿಲ್ ರಾಣಾ ಮತ್ತು ಡಾ. ಕುಂಚಂ ಶ್ಯಾಮ್ ಪ್ರಸಾದ್, ಎಂಐಟಿ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮಾನಿಟೀಸ್ ಅಂಡ್ ಮ್ಯಾನೇಜ್‌ಮೆಂಟ್‌ನ ಸಹ ಡೀನ್ ಡಾ. ಯೋಗೇಶ್ ಪೈ ಪಿ. ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.ಈ ಮಾನ್ಯತೆಯಿಂದ ಎಂಐಟಿ ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ದೊರೆಯಲಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದಲ್ಲದೆ, ಉದ್ಯಮದ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆಯಲು ದಾರಿಯಾಗಲಿದೆ.ಜಾಗತಿಕ ಮಟ್ಟದಲ್ಲಿ ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನೊಂದಿಗೆ ಕೈಜೋಡಿಸಿರುವುದು ಎಂಐಟಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಹಣಕಾಸು ಕ್ಷೇತ್ರದ ಜಾಗತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.ಸಿಎಸ್-ಎಫ್‌ಟಿ ಕೋರ್ಸ್ ಎಂಐಟಿಯ 2023ರಿಂದ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿ) ಎಂಬ ವಿನೂತನ ಕೋರ್ಸನ್ನು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಜತೆಗೆ ಹಣಕಾಸು, ಅನಲಿಟಿಕ್ಸ್, ತಂತ್ರಜ್ಞಾನಗಳನ್ನು ಒಳಗೊಂಡ ಅಂತರಶಿಸ್ತೀಯ ಕೋರ್ಸ್ ಪರಿಚಯಿಸಿದ ದೇಶದ ಮೊದಲ ಮತ್ತು ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಎಂಐಟಿ ಪಾತ್ರವಾಗಿದೆ. ಇಂದಿನ ಆಧುನಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಪರಿಣಿತರನ್ನು ಸಿದ್ಧಪಡಿಸುವಲ್ಲಿ ಎಂಐಟಿ ಮಹತ್ವದ ಪಾತ್ರ ವಹಿಸುತ್ತಿದೆ.