ಸಾರಾಂಶ
ಮಾಹೆಯು ನವಹೆದಲಿಯ ಐಡಿಪಿ ಎಜುಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.ಮಾಹೆಯ ಕುಲಸಚಿವ ಡಾ. ಗಿರಿಧರ್ ಕಿಣಿ ಮತ್ತು ಐಡಿಪಿ ಇಐಪಿಎಲ್‌ನ ದ.ಭಾರತದ ಪ್ರಾದೇಶಿಕ ಪ್ರಬಂಧಕ ಕಿಶನ್ ಕುಮಾರ್ ಯಾದವ್ ತಿಳುವಳಿಕಾ ಒಪ್ಪಂದಕ್ಕೆ ಸಹಿ ಮಾಡಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ - ಮಾಹೆಯು ಇಂಟರ್‌ನ್ಯಾಷನಲ್ ಇಂಗ್ಲಿಷ್ ಲಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ (ಐ.ಇ.ಎಲ್.ಟಿ.ಎಸ್.) ಪರೀಕ್ಷಾ ಕೇಂದ್ರವಾಗಿ ಗುರುತಿಸಲ್ಪಟ್ಟಿದ್ದು, ಇದು ಈ ಪರೀಕ್ಷೆಯ ಆತಿಥ್ಯ ವಹಿಸಲಿರುವ ಭಾರತದ ಮೊದಲ ವಿಶ್ವವಿದ್ಯಾನಿಲಯವಾಗಿದೆ.ಈ ಬಗ್ಗೆ ಮಾಹೆಯು ನವಹೆದಲಿಯ ಐಡಿಪಿ ಎಜುಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.ಮಾಹೆಯ ಕುಲಸಚಿವ ಡಾ. ಗಿರಿಧರ್ ಕಿಣಿ ಮತ್ತು ಐಡಿಪಿ ಇಐಪಿಎಲ್‌ನ ದ.ಭಾರತದ ಪ್ರಾದೇಶಿಕ ಪ್ರಬಂಧಕ ಕಿಶನ್ ಕುಮಾರ್ ಯಾದವ್ ತಿಳುವಳಿಕಾ ಒಪ್ಪಂದಕ್ಕೆ ಸಹಿ ಮಾಡಿದರು. ಎಂಐಟಿಯ ನಿರ್ದೇಶಕ ಡಾ.ಅನಿಲ್ ರಾಣಾ, ಅಂತಾರಾಷ್ಟ್ರೀಯ ಸಹಯೋಗಗಳ ನಿರ್ದೇಶಕ ಡಾ.ಅನುಪ್ ನಹಾ, ಎಂಐಟಿಯ ಮಾನವಿಕ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ.ಯೋಗೇಶ್ ಪೈ ಪಿ., ಐಡಿಪಿ ಇಐಪಿಎಲ್‌ನ ಸಹಾಯಕ ಪ್ರಾದೇಶಿಕ ಪ್ರಬಂಧಕ ಅಭಿಷೇಕ್ ಸ್ವಾಮಿ ಉಪಸ್ಥಿತರಿದ್ದರು.ಇನ್ನು ಮುಂದೆ ಮಾಹೆಯ ಎಂಐಟಿಯ ಮಾನವಿಕ ಮತ್ತು ನಿರ್ವಹಣಾ ವಿಭಾಗ ಮಾಹೆ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷಾ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. ನ.7ರಿಂದ ಮೊದಲ ಐ.ಇ.ಎಲ್.ಟಿ.ಎಸ್.ನ ಪೇಪರ್ ಆಧಾರಿತ ಪರೀಕ್ಷೆಗಾಗಿ ನೋಂದಣಿ ಆರಂಭವಾಗಲಿವೆ.ಐ.ಇ.ಎಲ್.ಟಿ.ಎಸ್. ಪರೀಕ್ಷೆಗಾಗಿ ಇನ್ನು ಮುಂದೆ ಆಸಕ್ತ ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ವಿದ್ಯಾರ್ಥಿಗಳಿಗೆ ಕೋರ್ಸ್ ಮಾಡ್ಯೂಲ್‌ಗಳಿಗೆ ಅನುಕೂಲಕರ ಅವಕಾಶ ಇಲ್ಲಿದ್ದು, ಜೊತೆಗೆ ರಿಯಾಯಿತಿ ಸದಸ್ಯತ್ವಗಳು ಮತ್ತು ಹೆಚ್ಚಿನ ಸಹಾಯಕ್ಕಾಗಿ ತರಬೇತಿ ಪಡೆದ ಅಧ್ಯಾಪಕ ಮಾರ್ಗದರ್ಶಕರಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ.