ಜಾಗತಿಕ ವಿವಿ ರ್‍ಯಾಂಕಿಂಗ್‌ನಲ್ಲಿ ಮಾಹೆ ಮಹತ್ತರ ಸಾಧನೆ

| Published : Oct 12 2025, 01:02 AM IST

ಜಾಗತಿಕ ವಿವಿ ರ್‍ಯಾಂಕಿಂಗ್‌ನಲ್ಲಿ ಮಾಹೆ ಮಹತ್ತರ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಅ.9 ರಂದು ಬಿಡುಗಡೆಯಾದ ಈ ಜಾಗತಿಕ ವಿವಿ ಶ್ರೇಯಾಂಕಗಳ ಪಟ್ಟಿಯಲ್ಲಿ 115 ದೇಶಗಳ 2,191 ವಿವಿಗಳನ್ನು 18 ಮಾಪನಾಂಕ ಮತ್ತು 5 ಐದು ಪ್ರಮುಖ ಕಾರ್ಯಕ್ಷಮತೆಯ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ.

ಕಳೆದ ಬಾರಿ 801-1000 ಬ್ಯಾಂಡ್‌ನಲ್ಲಿದ್ದ ಮಾಹೆ ಈ ಬಾರಿ 601-800ಕ್ಕೆ ಜಿಗಿತಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) 2026ನೇ ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್‌ನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 2025ರಲ್ಲಿ 801-1000 ಬ್ಯಾಂಡ್‌ನಲ್ಲಿದ್ದ ಮಾಹೆ ಈ ಸಾಲಿನಲ್ಲಿ 601-800 ಬ್ಯಾಂಡ್‌ಗೆ ಜಿಗಿದಿದೆ. ಮಾಹೆಯ ಈ ಸಾಧನೆಯು ಈ ಬ್ಯಾಂಡ್‌ನೊಳಗಿರುವ ಭಾರತದ ಅಗ್ರ 6 ಖಾಸಗಿ ವಿವಿಗಳಲ್ಲಿ ಸ್ಥಾನ ಪಡೆದಿದೆ. ಇದು ದೇಶದಲ್ಲಿ ಪ್ರಮುಖ ಸಂಶೋಧನಾಚಾಲಿತ ಸಂಸ್ಥೆಯಾಗಿ ಮಾಹೆಯ ಸಾಧನೆಯನ್ನು ಖಚಿತಪಡಿಸಿದೆ.ಅ.9 ರಂದು ಬಿಡುಗಡೆಯಾದ ಈ ಜಾಗತಿಕ ವಿವಿ ಶ್ರೇಯಾಂಕಗಳ ಪಟ್ಟಿಯಲ್ಲಿ 115 ದೇಶಗಳ 2,191 ವಿವಿಗಳನ್ನು 18 ಮಾಪನಾಂಕ ಮತ್ತು 5 ಐದು ಪ್ರಮುಖ ಕಾರ್ಯಕ್ಷಮತೆಯ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ 2ನೇ ಅತಿ ಹೆಚ್ಚು ಕೊಡುಗೆ ನೀಡಿದ ದೇಶವಾಗಿ ಭಾರತವು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 163 ಭಾರತೀಯ ವಿವಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ 601-800 ಬ್ಯಾಂಡ್‌ನಲ್ಲಿ 17 ಭಾರತೀಯ ವಿವಿಗಳು ಸ್ಥಾನ ಪಡೆದಿವೆ, ಅವುಗಳಲ್ಲಿ ಮಾಹೆಯೂ ಸೇರಿ 8 ಖಾಸಗಿ ವಿವಿಗಳಾಗಿವೆ.ಕಾರ್ಯಕ್ಷಮತೆ ಸೂಚಕದಲ್ಲಿ ಮಾಹೆಯ ಸಂಸ್ಥೆಯ ಸಂಶೋಧನಾ ಗುಣಮಟ್ಟವು 47.8 ರಿಂದ ಸುಧಾರಣೆಯಾಗಿ 56.4ಕ್ಕೇರಿದೆ. ಬೋಧನೆಯಲ್ಲಿ 42.6 ರಿಂದ 44.7ಕ್ಕೆ, ಸಂಶೋಧನಾ ವ್ಯವಸ್ಥೆಯಲ್ಲಿ 17 ರಿಂದ 18.6, ಉದ್ಯಮದಲ್ಲಿ ತೊಡಗುವಿಕೆಯಲ್ಲಿ 50,1ರಿಂದ 54.1, ಅಂತಾರಾಷ್ಟ್ರೀಯ ದೃಷ್ಟಿಕೋನದಲ್ಲಿ 51ರಿಂದ 52.2 ಕ್ಕೇರಿಕೆಯಾಗಿದೆ. ಗಣನೀಯ ಅಂಶ ಎಂದರೆ ಮಾಹೆಯು ಈ ಎಲ್ಲಾ ಕಾರ್ಯಕ್ಷಮತೆ ಸೂಚಕಗಳಲ್ಲಿ ಜಾಗತಿಕ ಸರಾಸರಿಗಿಂತ ಮೇಲಿದೆ. --------------

ಈ ಶ್ರೇಯಾಂಕ ಮಾಹೆಯ ಬದ್ಧತೆಗೆ ಸಾಕ್ಷಿ

ಮಾಹೆಯ ಈ ಮಹತ್ತರ ಸಾಧನೆಯ ಬಗ್ಗೆ ಕುಲಪತಿ ಲೆ.ಜ. (ಡಾ.) ಎಂ. ಡಿ. ವೆಂಕಟೇಶ್, ಈ ಶ್ರೇಯಾಂಕವು ಮಾಹೆಯ ಸುಸ್ಥಿರವಾದ ಸಂಶೋಧನಾ ವ್ಯವಸ್ಥೆ, ಶೈಕ್ಷಣಿಕ ಶ್ರೇಷ್ಠತೆ, ನಾವೀನ್ಯತೆಯ ಬದ್ಧತೆಗೆ ಸಾಕ್ಷಿಯಾಗಿದೆ. ಜೊತೆಗೆ ನಮ್ಮ ಪ್ರಾಧ್ಯಾಪಕರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.