ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗದಲ್ಲಿ ವಿಶೇಷ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಈ ಬಗ್ಗೆ ಉಭಯ ಸಂಸ್ಥೆಗಳು ಮಂಗಳವಾರ ಮಣಿಪಾಲದಲ್ಲಿ ಈ ಪಾಲುದಾರಿಕೆಯನ್ನು ಘೋಷಿಸಿದವು.ಈ ಕೋರ್ಸ್‌ಗಳು ಆನ್‌ಲೈನ್, ನೇರ ತರಗತಿ ಹಾಗೂ ಅವೆರಡನ್ನು ಒಳಗೊಂಡ ಅಲ್ಪಾವಧಿ ಕೋರ್ಸ್ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನೊಳಗೊಂಡಿದೆ. ಪ್ರಸ್ತುತ ಕ್ರೀಡಾ ಉದ್ಯಮದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತ ವಿದ್ಯಾರ್ಥಿಗಳಿಗೆ ಹಾಗೂ ವೃತ್ತಿಪರರಿಗೆ ಅಗತ್ಯವಾದ ಶೈಕ್ಷಣಿಕ ಪರಿಣತಿ ಮತ್ತು ಪ್ರಾಯೋಗಿಕ ಜ್ಞಾನವನ್ನು 3 ಕೋರ್ಸ್ ಗಳಲ್ಲಿ ನೀಡಲಾಗುತ್ತದೆ. ಮುಂದೆ ಕ್ರೀಡಾ ತರಬೇತಿ, ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ಮಾಧ್ಯಮ ವಿಭಾಗಗಳಲ್ಲಿ ಹೆಚ್ಚಿನ ಕೋರ್ಸ್‌ಗಳನ್ನು ಆರಂಭಿಸಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕೋರ್ಸ್‌ಗಳನ್ನು ಪೂರ್ಣ ಪ್ರಮಾಣದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಾಗಿ ರೂಪಿಸಲಾಗುತ್ತದೆ.
ಕ್ರೀಡಾ ಕ್ಷೇತ್ರದ ತಜ್ಞರಾದ ವಿನಯ್ ಬದಾಮಿ, ಅಪರ್ಣಾ ಪೋಪಟ್, ದೀಪ್ತಿ ಬೋಪಯ್ಯ, ಹೇಮಂತ್ ಬುಚ್, ಸಿದ್ದಾರ್ಥ್ ರಾಮನ್ ಮತ್ತು ಸಿಕೆಎಂ ಧನಂಜಯ್ ಅವರು ಅತಿಥಿ ಉಪನ್ಯಾಸಕರಾಗಿ ಈ ಭಾಗವಹಿಸಲಿದ್ದಾರೆ. ಹೈ-ಪರ್ಫಾರ್ಮೆನ್ಸ್ ಸೆಂಟರ್: ಅಲ್ಲದೆ ಕ್ರೀಡಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ, ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಮಣಿಪಾಲ ಮತ್ತು ಬೆಂಗಳೂರಿನ ಮಾಹೆ ಕ್ಯಾಂಪಸ್‌ಗಳಲ್ಲಿ ''''''''ಹೈ-ಪರ್ಫಾರ್ಮೆನ್ಸ್ ಸೆಂಟರ್''''''''ಗಳನ್ನು ಸ್ಥಾಪಿಸಲಿವೆ.ಈ ಕೇಂದ್ರಗಳು ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ತರಬೇತಿ, ಕ್ರೀಡಾ ನೆರವು ಮತ್ತು ವಸತಿ ಸಹಿತ ತರಬೇತಿ ಸೌಲಭ್ಯಗಳನ್ನು ಒದಗಿಸಲಿವೆ. ಇದರ ಜತೆಗೆ, ಕ್ರೀಡಾಪಟುಗಳು ಕ್ಯಾಂಪಸ್‌ನಲ್ಲಿರುವ ಸಂಯೋಜಿತ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮೂಲಕ ಶೈಕ್ಷಣಿಕ ವ್ಯಾಸಂಗ ಮುಂದುವರಿಸಲು ಈ ಯೋಜನೆ ಅವಕಾಶ ಕಲ್ಪಿಸಲಿದೆ.
ಈ ಕೇಂದ್ರಗಳು ಆರಂಭಿಕ ಹಂತದಲ್ಲಿ 4 ಕ್ರೀಡೆಗಳಿಗೆ ಸಂಬಂಧಿಸಿ ತರಬೇತಿ ನೀಡಲಿದ್ದು, ನಂತರದಲ್ಲಿ ಸುಮಾರು 12 ಕ್ರೀಡೆಗಳಿಗೆ ಸಂಬಂಧಿಸಿದ ತರಬೇತಿ ನೀಡುವ ಯೋಜನೆ ಇದೆ.ಕ್ರೀಡಾ ವೃತ್ತಿಪರರ ಸಜ್ಜು - ಡಾ. ಬಲ್ಲಾಳ್: ಈ ಸಂದರ್ಭದಲ್ಲಿ ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, ಮೈದಾನದಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ಕ್ರೀಡಾ ವ್ಯವಸ್ಥೆಯಲ್ಲಿ ಮುಂದಿನ ಪೀಳಿಗೆಯ ವೃತ್ತಿಪರರನ್ನು ಸಜ್ಜುಗೊಳಿಸುವ ಮೂಲಕ, ನಾವು ಸದೃಢ ರಾಷ್ಟ್ರ ಮತ್ತು ಬಲಿಷ್ಠ ಕ್ರೀಡಾ ಸಂಸ್ಕೃತಿಯ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ವೃತ್ತಿಪರರ ಕೊರತೆಗೆ ಪರಿಹಾರ - ಕುಂಬ್ಳೆ: ಟೆನ್ವಿಕ್ ಸ್ಪೋರ್ಟ್ಸ್‌ನ ಸಹ-ಸಂಸ್ಥಾಪಕ ಅನಿಲ್ ಕುಂಬ್ಳೆ, ‘ವೃತ್ತಿಪರ ಲೀಗ್‌ಗಳು, ಕ್ರೀಡಾ ಸ್ಟಾರ್ಟ್‌ಅಪ್‌ಗಳು ಮತ್ತು ನುರಿತ ತರಬೇತುದಾರರ ಬೇಡಿಕೆ ಹೆಚ್ಚುತ್ತಿದ್ದರೂ, ಭಾರತದ ಕ್ರೀಡಾ ವ್ಯವಸ್ಥೆಯು ಸಮರ್ಥ ಮತ್ತು ಉದ್ಯಮಕ್ಕೆ ಸಜ್ಜಾದ ವೃತ್ತಿಪರರ ತೀವ್ರ ಕೊರತೆ ಎದುರಿಸುತ್ತಿದೆ. ಕ್ರೀಡಾ ಉದ್ಯಮದ ಈ ಗಂಭೀರ ಸವಾಲಿಗೆ ಟೆನ್ವಿಕ್-ಮಾಹೆ ಪರಿಹಾರ ಕಂಡುಕೊಳ್ಳುತ್ತಿವೆ. ಈ ದೀರ್ಘಕಾಲೀನ ಪ್ರತಿಭೆಗಳ ಪೂರೈಕೆಯು ಮುಂದಿನ ದಶಕಗಳಲ್ಲಿ ಭಾರತದ ಕ್ರೀಡಾ ಬೆಳವಣಿಗೆಗೆ ಸುಸ್ಥಿರ ಶಕ್ತಿಯನ್ನು ತುಂಬಲಿದೆʼ ಎಂದು ಸಂತಸ ವ್ಯಕ್ತಪಡಿಸಿದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಸಹಕುಲಪತಿ ಡಾ. ಶರತ್ ಕೆ. ರಾವ್, ಟೆನ್ವಿಕ್ ಸ್ಪೋರ್ಟ್ಸ್ ಸಹ-ಸಂಸ್ಥಾಪಕ ಹಾಗೂ ಸಿಇಒ ವಸಂತ್ ಭಾರದ್ವಾಜ್ ಉಪಸ್ಥಿತರಿದ್ದರು.ಯೋಜನೆಯ 3 ಕೋರ್ಸ್ ಗಳು: ಪ್ರಸ್ತುತ 3 ಅಲ್ವಾವಧಿ ಕೋರ್ಸ್ ಗಳನ್ನು ಘೋಷಿಸಲಾಗಿದೆ, ಅವುಗಳೆಂದರೆ, ಕ್ರೀಡಾ ವ್ಯವಹಾರ (Business of Sports), ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ (Data Acquisition and Analytics) ಮತ್ತು ಕ್ರೀಡೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ (AI & ML in Sports)