ಸಾರಾಂಶ
ನಗರಸಭೆ ಚುನಾವಣಾ ವೇಳೆ ಬಿಜೆಪಿ ಕಣಕ್ಕಿಳಿಸಲು ತೀರ್ಮಾನಿಸಿ ಅಭ್ಯರ್ಥಿಗೆ ಸೂಚಕರು, ಅನುಮೋದಕರಾಗಿ ಸಹಿ ಹಾಕದೆ ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ 6 ಮಂದಿ ಸದಸ್ಯರ ವಾರ್ಡ್‌ನಲ್ಲಿ ಸಭೆ ನಡೆಸಲು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ನಿರ್ಧರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆ ಚುನಾವಣಾ ವೇಳೆ ಬಿಜೆಪಿ ಕಣಕ್ಕಿಳಿಸಲು ತೀರ್ಮಾನಿಸಿ ಅಭ್ಯರ್ಥಿಗೆ ಸೂಚಕರು, ಅನುಮೋದಕರಾಗಿ ಸಹಿ ಹಾಕದೆ ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ 6 ಮಂದಿ ಸದಸ್ಯರ ವಾರ್ಡ್‌ನಲ್ಲಿ ಸಭೆ ನಡೆಸಲು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ನಿರ್ಧರಿಸಿದ್ದಾರೆ.ಒಂದು ವಾರದಾಳಗೆ ಆರು ವಾರ್ಡ್‌ಗಳಲ್ಲಿಯೂ ಜನರನ್ನು ಭೇಟಿ ಮಾಡಿ ಅಲ್ಲಿನ ವಾರ್ಡ್ ಸದಸ್ಯರು ತಮಗೆ ದ್ರೋಹಮಾಡಿದ ವಿಚಾರವನ್ನು ಎಳೆ ಎಳೆಯಾಗಿ ವಿವರಿಸುವ ಮೂಲಕ ಮುಂದೆ ಅವರನ್ನು ಬೆಂಬಲಿಸದಂತೆ ಮನವಿ ಮಾಡಲಿರುವುದಾಗಿ ಅವರ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ 6 ಮಂದಿ ನನಗೊಂದು ರಾಜಕೀಯ ಪಾಠ ಕಲಿಸಿ ರಾಜಕಾರಣದಲ್ಲಿ ನನ್ನನ್ನು ಚುರುಕುಗೊಳಿಸಿ ಹೋಗಿದ್ದಾರೆ, ಹಾಗಾಗಿ 6 ಮಂದಿ ವಾರ್ಡ್‌ಗೆ ನಾನು ಭೇಟಿ ನೀಡುತ್ತೇನೆ ಎಂದು ನಿರ್ಣಯ ಕೈಗೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.ಏನಿದು ಪ್ರಕರಣ?: ಬಿಎಸ್ಪಿಯಿಂದ ಬಿಜೆಪಿಗೆ ಬೆಂಬಲಿಸಿ ತೆರಳಿದ ಮಾಜಿ ಸಚಿವ ಮಹೇಶ್ ಅವರ ಜೊತೆಗೂಡಿ ಬಂದ ರಾಮಕೃಷ್ಣ, ನಾಸೀರ್, ಶಂಕನಪುರ ನಾಗಸುಂದ್ರಮ್ಮ, ಜಗದೀಶ್, ಶಂಕನಪುರ ಪ್ರಕಾಶ್, ಪವಿತ್ರಾ ರಮೇಶ್ ಸೇರಿದಂತೆ 6 ಮಂದಿ ಸದಸ್ಯರ
ಸದಸ್ಯತ್ವ ಅನರ್ಹವಾಗಿತ್ತು. ಈ ಹಿನ್ನೆಲೆ ಎನ್. ಮಹೇಶ್ ಶಾಸಕರಾಗಿದ್ದ ವೇಳೆ ಚುನಾವಣಾ ಹೋರಾಟ ನಡೆಸಿದ ಫಲವಾಗಿ ಜಿಲ್ಲಾಡಳಿತ ಆದೇಶವನ್ನೆ ಕೋರ್ಟ್ ಎತ್ತಿಹಿಡಿದಿತ್ತು, ಆದರೆ ಮುಂದಿನ ಚುನಾವಣೆಯಲ್ಲಿ ಆರು ಮಂದಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಇದನ್ನೆ ಜಯವೆಂದು ಬಾವಿಸಿದ ಮಹೇಶ್ ಆರು ಮಂದಿಗೂ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. 6 ಮಂದಿ ಗೆಲುವನ್ನು ನನ್ನದೆ ಗೆಲುವು ಎಂದು ಸಂಭ್ರಮಿಸಿದ್ದರು.ಆದರೆ ನಗರಸಭೆ ಚುನಾವಣೆ ವೇಳೆ ಇತ್ತಿಚೆಗೆ ತಮ್ಮ ಆಪ್ತರೆ ಕೈಕೊಟ್ಟ ವಿಚಾರದಲ್ಲಿ ಮನನೊಂದಿದ್ದರು, ಸುದ್ದಿಗೋಷ್ಠಿ ಕರೆದು ನನ್ನ ಪತ್ನಿ ಸಮಾಧಿ ಮುಂದೆ ಅತ್ತು ಅವರಿಗೆ ಶುಭವಾಗಲಿ ಎಂದು ಕೋರುವೆ ಎಂದು ತಿಳಿಸಿದ್ದನ್ನ ಇಲ್ಲಿ ಸ್ಮರಿಸಬಹುದು. ಹಾಗಾಗಿ ತಮ್ಮ ಆಪ್ತರ ವಿರುದ್ದವೇ ವಾರ್ಡ್‌ನಲ್ಲಿ ಸಭೆ ನಡೆಸಲು ನಿರ್ಧರಿಸುವ ಮಹೇಶ್ ಅವರ ಈ ನಿರ್ಣಯ ನಾನಾ ರಾಜಕೀಯ ಚರ್ಚೆಗೆ ಆಸ್ಪದ ಮಾಡಿಕೊಡಲಿವೆ ಎನ್ನಲಾಗಿದೆ.