ಸಾರಾಂಶ
ಚಾಮರಾಜನಗರ: ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ ದೇಶದಲ್ಲಿ ನಂಬರ್ ಒನ್ ಕಂಪನಿಯಾಗಿದೆ ಎಂದು ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ ರಾಜ್ಯ ಮುಖ್ಯಸ್ಥ ಅರವಿಂದ್ ಪಾಂಡೆ ಹೇಳಿದರು.
ನಗರದ ನಂಜನಗೂಡು ರಸ್ತೆಯಲ್ಲಿರುವ ಈಶ್ವರಿ ಟ್ರ್ಯಾಕ್ಟರ್ ಶೋರೂಂನಲ್ಲಿ ಲಕ್ಕಿ ಡ್ರಾ ವಿಜೇತರಿಗೆ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ರೈತರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಉತ್ಪನ್ನ ಮಾಡಲಾಗುತ್ತದೆ. ಟ್ರ್ಯಾಕ್ಟರ್ ಸಮಸ್ಯೆ ಬಂದರೆ ಗ್ರಾಹಕರ ಕಂಪನಿಯ ಡೀಲರ್ಸ್‌ಗಳಿಗೆ ತಿಳಿಸಿದರೆ ತಕ್ಷಣದಲ್ಲೇ ಬಗೆಹರಿಸಲಾಗುವುದು ಎಂದರು.
ಈಶ್ವರಿ ಟ್ರ್ಯಾಕ್ಟರ್ ಪಾಲುದಾರ ಜಿ.ಪ್ರಶಾಂತ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯಂತೆ ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳನ್ನು ಬಳಸಿ ದೇಶ ಉಳಿಸಬೇಕು ಎಂದು ಮನವಿ ಮಾಡಿದರು.
ಮತ್ತೊಬ್ಬ ಪಾಲುದಾರ ಆರ್.ಅಶೋಕ್ ಮಾತನಾಡಿ,ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಉಚಿತ ಉಡುಗೊರೆ ಜತೆ ಪ್ರೋತ್ಸಾಹದಾಯಕ ಉಡುಗೊರೆ ಕೊಡಲಾಗುವುದು, ಮೊದಲು ೩೦ ಗ್ರಾಹಕರಿಗೆ ನಂತರ ೩೦ ಗ್ರಾಹಕರಿಗೆ ಉಡುಗೊರೆ ನೀಡಲಾಗುವುದು. ಈ ತಿಂಗಳಲ್ಲಿ ಹೊಸದಾಗಿ ಮಹಿಂದ್ರ ಟ್ರ್ಯಾಕ್ಟರ್ ಖರೀದಿ ಮಾಡುವ ಮೊದಲ ೫ ಗ್ರಾಹಕರಿಗೆ ಬಾಳೆ ರೋಟವೆಟರ್ ಕೊಡಲಾಗುವುದು. ಇದು ಕೇವಲ ೧೫ ದಿನಗಳಲ್ಲಿ ಖರೀದಿಸಿದರೆ ಮಾತ್ರ ಎಂದರು.
ಹೊಸ ಟ್ರ್ಯಾಕ್ಟರ್‌ಗಳ ಬಗ್ಗೆ ಮಾಹಿತಿ ನೀಡಿದರು. ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿಯ ಅರವಿಂದ್ ಪಾಂಡೆ, ಪ್ರಾಂತೀಯ ವ್ಯವಸ್ಥಾಪಕ ಮೌಲಿಕ್ ತಕ್ಕರ್, ಟಿ.ಎಂ ಪ್ರಜ್ವಲ್ ಅವರನ್ನು ರೈತರು ಸನ್ಮಾನಿಸಿದರು.
ಕಂಪನಿಯ ಟಿ.ಎಂ.ಪ್ರಜ್ವಲ್, ಸಿಬ್ಬಂದಿ, ರೈತರು ಹಾಜರಿದ್ದರು. ಈಶ್ವರಿ ಟ್ರ್ಯಾಕ್ಟರ್ ವ್ಯವಸ್ಥಾಪಕ ಹೇಮಂತ್ ಕುಮಾರ್ ನಿರೂಪಿಸಿ ವಂದಿಸಿದರು.