ಜಮೀನು ವಿವಾದ ಹಿನ್ನೆಲೆ ಅತ್ತಿಗೆಯೇ ಮೇಲೆಯೇ ಮೈದುನ ಬೊಲೆರೋ ವಾಹನ ಹರಿಸಿ ಕೊಲೆಗೆ ಯತ್ನಿಸಿದ ಘಟನೆ ಇಳಕಲ್ಲ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಮೀನು ವಿವಾದ ಹಿನ್ನೆಲೆ ಅತ್ತಿಗೆಯೇ ಮೇಲೆಯೇ ಮೈದುನ ಬೊಲೆರೋ ವಾಹನ ಹರಿಸಿ ಕೊಲೆಗೆ ಯತ್ನಿಸಿದ ಘಟನೆ ಇಳಕಲ್ಲ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದಿದೆ.ವಾಹನದ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿರುವ ಮಂಗಳಾದೇವಿ ಬಿರಾದಾರ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಘಟನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು, ಪೊಲೀಸರು ಪತ್ತೆಗೆ ಜಾಲ ಬೀಸಿದ್ದಾರೆ.ಆಗಿದ್ದೇನು?:
ಆರೋಪಿ ಚನ್ನಪ್ಪಗೌಡ ಹಾಗೂ ಅತ್ತಿಗೆ ಮಂಗಳಾದೇವಿ ಕುಟುಂಬದ ಮಧ್ಯೆ ಮಧ್ಯೆ 6 ಎಕರೆ ಜಮೀನಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಾಜ್ಯ ನಡೆಯುತ್ತಿತ್ತು. ಗಾಯಾಳು ಮಂಗಳಾದೇವಿ ಅವರಿಗೆ ಸೇರಿದ ಎರಡೂವರೆ ಎಕರೆ ಜಮೀನನ್ನು 20 ವರ್ಷಗಳಿಂದ ಆರೋಪಿ ಚನ್ನಪ್ಪಗೌಡ ಒತ್ತುವರಿ ಮಾಡಿಕೊಂಡು ತನ್ನ ಸುಪರ್ದಿ ಯಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಸುಮಾರು ಆರು ತಿಂಗಳ ಹಿಂದೆ ಮಂಗಳಾದೇವಿ ಅವರ ಪತಿ ನಿಧನರಾಗಿದ್ದು, ಪತಿಯ ನಿಧನ ಬಳಿಕ ಮಂಗಳಾದೇವಿ ಜಮೀನಿನ ಸರ್ವೇ ಮಾಡಿಸಿದ್ದರು. ಸರ್ವೇಯಲ್ಲಿ ಜಮೀನು ಮಂಗಳಾದೇವಿಗೆ ಸೇರಿದ್ದೆಂದು ಗೊತ್ತಾದರೂ ಚನ್ನಪ್ಪಗೌಡ ಆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ. ಇದಕ್ಕೆ ಪ್ರತಿರೋಧ ತೋರಿದ್ದ ಮಂಗಳಾದೇವಿ ಕುಟುಂಬದವರು ಒತ್ತುವರಿ ಜಮೀನಿನಲ್ಲಿ ಗಳೆ ಹೊಡೆದಿದ್ದರು.ಇದರಿಂದ ರೊಚ್ಚಿಗೆದ್ದ ಚನ್ನಪ್ಪಗೌಡ ಮಂಗಳಾದೇವಿ ಮತ್ತೊಂದು ಗದ್ದೆಯಲ್ಲಿದ್ದಾಗ ಬೊಲೆರೋ ವಾಹನ ಹರಿಸಿ ಕೊಲೆಗೆ ಯತ್ನಿಸಿದ್ದಾನೆ. ವಾಹನದ ಚಕ್ರಗಳಡಿ ಸಿಲುಕಿದ ಮಂಗಳಾದೇವಿ ಕಾಲುಗಳಿಗೆ ಹಾಗೂ ಶರೀರಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಈ ಕುರಿತು ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆ0ುಲ್ಲಿ ಪ್ರಕರಣ ದಾಖಲಾಗಿದೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋ0ುಲ್ ಅವರು ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
