ವಿಶೇಷಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಮುಖ್ಯ

| Published : Dec 22 2024, 01:34 AM IST

ವಿಶೇಷಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸೂಲಿಬೆಲೆ: ವಿಶೇಷ ಚೇತನ ಮಕ್ಕಳ ಪೋಷಕರು ಎಡಿಪಿ ಸಂಸ್ಥೆ ನೀಡುವ ತರಬೇತಿಯ ಪ್ರಯೋಜನ ಪಡೆಯಬೇಕು ವಿಶೇಷ ಚೇತನ ಮಕ್ಕಳು ಇತರೆ ಮಕ್ಕಳಂತೆ ಸಮಾಜ ಮುಖಿಯಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಹೇಳಿದರು.

ಸೂಲಿಬೆಲೆ: ವಿಶೇಷ ಚೇತನ ಮಕ್ಕಳ ಪೋಷಕರು ಎಡಿಪಿ ಸಂಸ್ಥೆ ನೀಡುವ ತರಬೇತಿಯ ಪ್ರಯೋಜನ ಪಡೆಯಬೇಕು ವಿಶೇಷ ಚೇತನ ಮಕ್ಕಳು ಇತರೆ ಮಕ್ಕಳಂತೆ ಸಮಾಜ ಮುಖಿಯಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಶಿಕ್ಷಣ ಕುರಿತು ಪೋಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದಿ ಅಸೋಷಿಯೇಷನ್ ಅಪ್ ಪೀಪಲ್ ವಿತ್ ಡಿಸೆಬಿಲಿಟಿ(ಎಡಿಪಿ) ಸಂಸ್ಥೆ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಪೋಷಕರಿಗೆ ತರಬೇತಿ ನೀಡಿ ಅವರಿಗೆ ಅವಶ್ಯವಿರುವ ಪರಿಕರಗಳು ಹಾಗೂ ಚಿಕಿತ್ಸಾ ಕ್ರಮಗಳ ಮಾಹಿತಿ ನೀಡಲಾಗುತ್ತದೆ ಎಂದರು.

ಸೂಲಿಬೆಲೆ ಹೋಬಳಿ ಮಟ್ಟದಲ್ಲಿ ೩೦ ಮಕ್ಕಳು ನೋಂದಣಿಯಾಗಿದ್ದು ೪.೫೦ ಲಕ್ಷ ಮೌಲ್ಯದ ಪರಿಕರಗಳನ್ನು ನೀಡಿದ್ದಾರೆ. ಪ್ರತಿ ಗುರುವಾರ ೩ ಗಂಟೆಗಳ ಕಾಲದ ಪೋಷಕರಿಗೆ ತರಬೇತಿ ಕಾರ್ಯಾಗಾರ ಹಾಗೂ ಸಮಾಲೋಚನಾ ಕಾರ್ಯಕ್ರಮಗಳು ನಡೆಯುತ್ತಿದ್ದು ಪೋಷಕರು ಇದರ ಸದುಪಯೋಗ ಪಡೆಯಬೇಕು ಎಂದರು.

ಕ್ಷೇತ್ರ ಶಿಕ್ಷಣ ಸಮನ್ವಯ ಆಧಿಕಾರಿ ನಿರ್ಮಲ ಮಾತನಾಡಿ ಎಡಿಪಿ ಸಂಸ್ಥೆಯ ಸಹಕಾರದಲ್ಲಿ ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ೧.೫೦ ಕೋಟಿ ಅನುದಾನದಲ್ಲಿ ಪರಿಕರಗಳನ್ನು ನೀಡಿದ್ದಾರೆ. ಪ್ರತಿವಾರ ಎಡಿಪಿ ಸಂಸ್ಥೆಯಿಂದ ತರಬೇತಿ ಕಾರ್ಯಾಗಾರ, ಪೋಷಕರ ಸಮಾಲೋಚನೆ ಸಭೆ ನಡೆಯುತ್ತದೆ ಎಂದರು.

ಈ ವೇಳೆ ಬಿಇಒ ಪದ್ಮನಾಭ, ಬಿಅಅರ್‍ಸಿ ನಾಗರಾಜ್, ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕಿ ನಾಯಿದಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸೌಮ್ಯ, ಎಡಿಪಿ ಸಂಸ್ಥೆಯ ಸಂಯೋಜಕರಾದ ಕೀರ್ತಿರಾಜ್, ಗಿರೀಶ್ ಡಾ.ಅಪೂರ್ವ, ನಿರ್ಮಲ, ರಿಜ್ವಾನ್, ಜಿಯಾವುಲ್ಲಾ, ಇರ್ಮಾನ್, ಪದ್ಮಿನಿ, ಕೃಷ್ಣಪ್ಪ, ಜೇನುಗೂಡು ಟ್ರಸ್ಟ್ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಪತ್ರಕರ್ತ ಪ್ರಶಾಂತ್ ಇತರರಿದ್ದರು.