ತರೀಕೆರೆಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ರೈತರು ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಸಿ ಸುಸ್ಥಿರ ಬೇಸಾಯ ಮಾಡಬೇಕು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಶಂಕರ್ ಎಂ.ವಿ.ಹೇಳಿದ್ದಾರೆ.

- ರಾಗಿ ಬೆಳೆ ಪ್ರಾತ್ಯಕಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ರೈತರು ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಸಿ ಸುಸ್ಥಿರ ಬೇಸಾಯ ಮಾಡಬೇಕು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಶಂಕರ್ ಎಂ.ವಿ.ಹೇಳಿದ್ದಾರೆ.

ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ವಿಶ್ವ ಬ್ಯಾಂಕ್ ಅನುದಾನಿತ ರಿವಾರ್ಡ್ಸ್ ಯೋಜನೆಯಡಿ ಜಲಾನಯನ ಅಭಿವೃದ್ಧಿ ಇಲಾಖೆ, ಜಲಾನಯನ ನಿರ್ವಹಣೆ ಉತ್ಕೃಷ್ಟ, ಬೆಂಗಳೂರು ಜಿಕೆವಿಕೆ ಮತ್ತು ಕೆಳದಿ ಶಿವಪ್ಪ ನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿವಿ, ಶಿವಮೊಗ್ಗ ಕೈಗೊಂಡ ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ರಾಸಾಯನಿಕ ಗೊಬ್ಬರಗಳ ಬಳಕೆ ಬಗ್ಗೆ ರಾಗಿ ಬೆಳೆಯಲ್ಲಿ ಕಳೆದ 2 ವರ್ಷಗಳಿಗೆ ಏರ್ಪಾಡಾಗಿದ್ದ ರಾಗಿ ಬೆಳೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.ಈ ಯೋಜನೆ ಮುಖ್ಯ ಉದ್ದೇಶ ರೈತರಲ್ಲಿ ರಾಸಾಯನಿಕ ಗೊಬ್ಬರಗಳ ಇತಿಮಿತಿ ಬಳಕೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು. ಇದರಿಂದ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಕಾಪಾಡುವುದು. ಭೂ ಸಂಪನ್ಮೂಲ ಕಾರ್ಡ್ ನಲ್ಲಿ ಭೂಮೇಲ್ಮೆ ಲಕ್ಷಣ ಮಣ್ಣಿನ ಗುಣಧರ್ಮಗಳು, ಪೋಷಕಾಂಶಗಳ ವರ್ಗೀಕರಣ, ರಸಗೊಬ್ಬರಗಳ ಶಿಫಾರಸ್ಸು ಮತ್ತು ಆಯಾ ಮಣ್ಣಿಗೆ ಸೂಕ್ತ ಬೆಳೆಗಳ ಆಯ್ಕೆ ಬಗ್ಗೆ ಸಂಪೂರ್ಣ ಮಾಹಿತಿ ರೈತರಿಗೆ ಒದಗಿಸಲಾಗುತ್ತದೆ. ರೈತರು ಇದನ್ನು ಅರ್ಥೈಸಿ ಕೊಂಡು ತಪ್ಪದೇ ಅನುಸರಿಸಬೇಕೆಂದು ಕೋರಲಾಯಿತು. ಕೋರನಹಳ್ಳಿ ಪಂಚಾಯಿತಿ ಉಪಾಧ್ಯಕ್ಷ ಮಂಜಾನಾಯ್ಕ ರಾಗಿ ಬೆಳೆ ಪ್ರಾತ್ಯಾಕ್ಷಿತೆ ಉದ್ಘಾಟನೆ ನೆರವೇರಿಸಿ ಮಾತನಾಡಿ ರಿವಾರ್ಡ್ಸ್ ಯೋಜನೆ ಮಹತ್ವದ ಯೋಜನೆಯಾಗಿದ್ದು ವಿಶ್ವ ವಿದ್ಯಾಲಯದವರು ದೂರದ ಸಣ್ಣ ಹಳ್ಳಿಯಲ್ಲಿ ಅನುಷ್ಟಾನ ಗೊಳಿಸಿರುವುದು ರೈತರ ಪುಣ್ಯ ಹಾಗೂ ಭೂ ಸಂಪನ್ಮೂಲ ಕಾರ್ಡ್ ಮಾಹಿತಿಯಂತೆ ರೈತರು ತಮ್ಮ ಜಮೀನಿನಲ್ಲಿ ಅನುಸರಿಸಬೇಕೆಂದು ಕೋರಿದರು. ಪ್ರಾದ್ಯಾಪಕ ಮತ್ತು ನೋಡಲ್ ವಿಜ್ಞಾನಿ ಡಾ. ಜಿ. ಎನ್ ತಿಪ್ಪೇಶಪ್ಪ ಭೂಸಂಪನ್ಮೂಲ ಕಾರ್ಡ್ ನ ಉಪಯೋಗದ ಬಗ್ಗೆ ಮಾತನಾಡಿದರು. ಗ್ರಾಮದ ಮುಖಂಡರಾದ ಲಕ್ಕಪ್ಪ, ಗೌಡಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

9ಕೆಟಿಆರ್.ಕೆ.2ಃ ತರೀಕೆರೆ ಸಮೀಪದ ರಾಜನಹಳ್ಳಿಯಲ್ಲಿ ನಡೆದ ರಾಗಿ ಬೆಳೆ ಪ್ರಾತ್ಯಕ್ಷಿತೆಯನ್ನು ಕೋರನಹಳ್ಳಿ ಪಂಚಾಯಿತಿ ಉಪಾಧ್ಯಕ್ಷ ಮಂಜಾನಾಯ್ಕ ಉದ್ಘಾಟಿಸಿದರು. ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಶಂಕರ್ ಎಂ.ವಿ. ಮತ್ತು ನೋಡಲ್ ವಿಜ್ಞಾನಿ ಡಾ. ಜಿ. ಎನ್ ತಿಪ್ಪೇಶಪ್ಪ ಮತ್ತಿತರರು ಇದ್ದರು.