ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆ ವತಿಯಿಂದ ‘ಸ್ವಚ್ಛತಾ ಹೀ ಸೇವಾ’ ಎಂಬ ಧ್ಯೇಯದಂತೆ 11ನೇ ‘ಸ್ವಚ್ಛ ಭಾರತ್’ ಶ್ರಮದಾನ ನೆರವೇರಿತು.

ಉಡುಪಿ: ಸ್ವಚ್ಛ ಗಾಳಿ, ನೀರು ಬೆಳಕು ಹಾಗೂ ಪರಿಸರವನ್ನು ನಿರ್ಮಿಸಿಕೊಳ್ಳುವುದು ನಮ್ಮ ಕರ್ತವ್ಯದ ಭಾಗವಾಗಿದೆ. ಇದು ಸರ್ಕಾರ ಜವಾಬ್ದಾರಿಯಲ್ಲ. ನಮ್ಮ ಮೂಲಭೂತ ಜವಾಬ್ದಾರಿ. ಸ್ವಚ್ಛ ಪರಿಸರವನ್ನು ನಿರ್ಮಿಸುವರೇ ನಮ್ಮ ಕಸ, ನಮ್ಮ ಹೊಣೆ ಎಂಬ ಸಾಮಾಜಿಕ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು ಎಂದು ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದ್ದಾರೆ.

ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆ ವತಿಯಿಂದ ‘ಸ್ವಚ್ಛತಾ ಹೀ ಸೇವಾ’ ಎಂಬ ಧ್ಯೇಯದಂತೆ ನಡೆದ 11ನೇ ‘ಸ್ವಚ್ಛ ಭಾರತ್’ ಶ್ರಮದಾನದ ಸಂದರ್ಭ ಅವರು ಮಾತನಾಡಿದರು.

ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ, ಇದರ ಮೊಕ್ತೇಸರ ಮುರಹರಿ ಕೆ. ಆಚಾರ್ಯ ಹಾಗೂ ಗಂಗಾಧರ ಆಚಾರ್ಯ ಹಸಿರು ನಿಶಾನೆ ತೋರಿಸಿ ಶ್ರಮದಾನಕ್ಕೆ ಚಾಲನೆ ನೀಡಿದರು. ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಪರಿಸರದಲ್ಲಿ ಸ್ವಚ್ಛತೆಯ ಕಾರ್ಯ ನಡೆಯಿತು.

ಬ್ಯಾಂಕಿನ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಪಿ., ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ನಿರ್ದೇಶಕ ಜಗದೀಶ್ ಜೆ ಆಚಾರ್ಯ, ವಿಶ್ವಬ್ರಾಹ್ಮಣ ಯುವ ಸಂಘಟನೆ ಉಡುಪಿ ಜಿಲ್ಲೆ ಉಪಾಧ್ಯಕ್ಷ ಹರೀಶ್ ಆಚಾರ್ಯ ಕಳತ್ತೂರು ಹಾಗು ವಿಜಯ್ ಆಚಾರ್ಯ ಪಡುಬಿದ್ರಿ, ಸಂಚಾಲಕ ಮುರಳೀಧರ ಆಚಾರ್ಯ ಇನ್ನಂಜೆ ಮತ್ತು ಗೌರವ ಸದಸ್ಯ ಪ್ರಕಾಶ್ ಆಚಾರ್ಯ , ವಿಶ್ವನಾಥ ಆಚಾರ್ಯ ಕೈಪುಂಜಾಲು ಮತ್ತು ನಿತ್ಯಾನಂದ ಆಚಾರ್ಯ ಬಂಟಕಲ್ಲು ಮತ್ತು ಸದಸ್ಯರು, ನಾಗಧರ್ಮೇಂದ್ರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಆಚಾರ್ಯ ಕಟಪಾಡಿ, ಪದಾಧಿಕಾರಿ ರಾಘವೇಂದ್ರ ಆಚಾರ್ಯ ಕಾಡಬೆಟ್ಟು ಮತ್ತು ಸದಸ್ಯರು ಹಾಗೂ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ಯುವಕ ಸೇವಾದಳ ಇದರ ಅಧ್ಯಕ್ಷ ಪ್ರಕಾಶ್ ಆಚಾರ್ಯ ಇನ್ನಂಜೆ, ಪದಾಧಿಕಾರಿಗಳಾದ ಪ್ರಶಾಂತ್ ಆಚಾರ್ಯ ಕಟಪಾಡಿ, ನಿತಿನ್ ಆಚಾರ್ಯ, ಶೈಲೇಶ್ ಆಚಾರ್ಯ ಮತ್ತು ಸದಸ್ಯರು, ಹಾಗೂ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ಮಹಿಳಾ ಬಳಗದ ಅಧ್ಯಕ ಶಾಲಿನಿ ಶಿವರಾಮ್ ಆಚಾರ್ಯ, ಕಾರ್ಯದರ್ಶಿ ದೀಪಾ ಪ್ರಶಾಂತ್ ಆಚಾರ್ಯ, ಕೋಶಾಧಿಕಾರಿ ದೀಪಾ ಸುರೇಶ್ ಆಚಾರ್ಯ ಮತ್ತು ಸದಸ್ಯರು, ಹಾಗೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ್ ಆಚಾರ್ಯ ಮತ್ತು ಸದಸ್ಯರು ಹಾಗೂ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಶ್ರಮದಾನದಲ್ಲಿ ಭಾಗವಹಿಸಿದರು.