ನಗರವನ್ನು ಸ್ವಚ್ಛತೆ ಕಾಪಾಡುವುದು ಮತ್ತು ಸುಂದರ ನಗರವನ್ನಾಗಿಸಲು ಪ್ರತಿಯೊಬ್ಬ ನಾಗರಿಕರು ಪಣತೊಡುವಂತಾಗಬೇಕು. ಸ್ವಚ್ಛತೆ ಎಂಬುವುದನ್ನು ಒಂದು ದಿನದ ಕಾರ್ಯಕ್ರಮವಲ್ಲ, ಇದು ಪ್ರತಿಯೊಬ್ಬರ ಜೀವನಲ್ಲಿ ನಮ್ಮ ಮನೆಯನ್ನು ಯಾವ ರೀತಿ ಸ್ವಚ್ಛತೆಯಿಂದ ಇಟ್ಟು ಕೊಳ್ಳುತ್ತಿರೋ ಅದೇ ರೀತಿ ನಮ್ಮ ಪರಿಸರ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಕೋಲಾರನಮ್ಮ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಗರದ ಪ್ರತಿಯೊಬ್ಬ ಪ್ರಬುದ್ದ ನಾಗರೀಕನ ಜವಾಬ್ದಾರಿ, ಇದು ನಗರಸಭೆ, ಜಿಲ್ಲಾಡಳಿತದ ಕೆಲಸ ಎಂಬ ತಾತ್ಸರ, ನಿರ್ಲಕ್ಷತನದ ಮನೋಭಾವ ಬೇಡ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕಿವಿಮಾತು ಹೇಳಿದರು.
ನಗರದ ಸರ್ವಜ್ಞ ಉದ್ಯಾನವನ ಬಳಿ ಕೋಲಾರಮ್ಮ ಸ್ವಚ್ಛತಾ ಕಾರ್ಯ ಪಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಭಾನುವಾರ ಬೆಳಗ್ಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಪರಿಸರ ಸ್ವಚ್ಛತೆಯಿಂದ ನಮ್ಮ ಕುಟುಂಬ, ನಮ್ಮ ನಗರದ ಜನತೆಯ ಆರೋಗ್ಯ ಸುಧಾರಣೆ ಸಾಧ್ಯ, ನಗರದ ಸೌಂದರ್ಯ ರಕ್ಷಣೆ ಸಾಧ್ಯ ಎಂಬ ಜಾಗೃತಿಯ ಅರಿವು ಪ್ರತಿಯೊಬ್ಬರಲ್ಲೂ ಬರುವಂತಾಗಬೇಕು ಎಂದರು.ಸ್ವಚ್ಛತೆ ಎಂಬುದು ನಿರಂತರ
ನಗರವನ್ನು ಸ್ವಚ್ಛತೆ ಕಾಪಾಡುವುದು ಮತ್ತು ಸುಂದರ ನಗರವನ್ನಾಗಿಸಲು ಪ್ರತಿಯೊಬ್ಬ ನಾಗರಿಕರು ಪಣತೊಡುವಂತಾಗಬೇಕು. ಸ್ವಚ್ಛತೆ ಎಂಬುವುದನ್ನು ಒಂದು ದಿನದ ಕಾರ್ಯಕ್ರಮವಲ್ಲ, ಇದು ಪ್ರತಿಯೊಬ್ಬರ ಜೀವನಲ್ಲಿ ನಮ್ಮ ಮನೆಯನ್ನು ಯಾವ ರೀತಿ ಸ್ವಚ್ಛತೆಯಿಂದ ಇಟ್ಟು ಕೊಳ್ಳುತ್ತಿರೋ ಅದೇ ರೀತಿ ನಮ್ಮ ಪರಿಸರ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳಬೇಕೆಂದರು.ನಗರದೊಳಗಿನ ಖಾಲಿ ನಿವೇಶನ ಹೊಂದಿರುವಂತ ಮಾಲೀಕರು ನಿವೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ನಿವೇಶನಗಳಲ್ಲಿ ತ್ಯಾಜ್ಯವನ್ನು ಸುರಿಯಂತೆ ನಿವೇಶನಗಳಿಗೆ ಫೆನ್ಸಿಂಗ್‌ಗಳ ಮೂಲಕ ಸಂರಕ್ಷಣೆ ಮಾಡಿಕೊಳ್ಳಬೇಕು ಇದರಿಂದ ನಿಮ್ಮ ಆಸ್ತಿಗೂ ಭದ್ರತೆ ಇರುವುದು ಎಂದು ಕಿವಿಮಾತು ಹೇಳಿದರು.
ಕಟ್ಟಡ ತ್ಯಾಜ್ಯ ಸಂಗ್ರಗಕ್ಕೆ ಜಾಗನಗರದಲ್ಲಿ ರಸ್ತೆ ಬದಿಗಳಲ್ಲಿ ಖಾಲಿ ನಿವೇಶನಗಳಲ್ಲಿ ಸುರಿದಿರುವ ಕಟ್ಟಡದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಈಗಾಗಲೇ ಕೆಂದಟ್ಟಿ ಕೆರೆಯ ಪಕ್ಕದಲ್ಲಿ ಸ್ಥಳವನ್ನು ಗುರುತಿಸಲಾಗಿದ್ದು, ಸಾರ್ವಜನಿಕರು ಅದನ್ನು ಬಳಕೆ ಮಾಡಿಕೊಳ್ಳಬೇಕು, ನಗರದ ವಿವಿಧ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಡಂಪ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಇದನ್ನು ತಪ್ಪಿಸುವ ಸಲುವಾಗಿ ಅದಕ್ಕೆಂದೇ ಸ್ಥಳವನ್ನು ನಿಗದಿ ಮಾಡಲಾಗಿದೆ, ಹಸಿ ಕಸವನ್ನು ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶೇಖರಿಸಿ ಸಾವಯವ ಗೊಬ್ಬರ ಮಾಡಿ ರೈತರಿಗೆ ಒದಗಿಸುವ ಉದ್ದೇಶದಿಂದ ಈ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.ಜಿಪಂ ಸಿಇಒ ಡಾ.ಪ್ರವೀಣ್ ಬಾಗೇವಾಡಿ ಮಾತನಾಡಿ, ಸ್ವಚ್ಛತಾ ಕಾರ್ಯಕ್ರಮ ನಗರಕ್ಕೆ ಮಾತ್ರ ಮೀಸಲಾಗಿರದೆ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛತೆಯಾಗಿಟ್ಟುಕೊಳ್ಳುವ ದೆಸೆಯಲ್ಲಿ ಪ್ರತಿ ಪಂಚಾಯತ್ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು, ಸಾರ್ವಜನಿಕರ ಸಹಕಾರ ಅಗತ್ಯ
ನಗರಸಭೆ ಆಯುಕ್ತ ನವೀನ್‌ಚಂದ್ರ ಮಾತನಾಡಿ, ಈಗಾಗಲೇ ಕೋಲಾರ ನಗರದಲ್ಲಿ ಪ್ರತಿನಿತ್ಯ ಸ್ವಚ್ಛತಾ ಕಾರ್ಯವನ್ನು ಸಮುದಾಯ ಸಂಘಟಕರು ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಅದರೊಂದಿಗೆ ಭಾನುವಾರ ನಗರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಉದ್ಯಾನವನಗಳನ್ನು ಸ್ವಚ್ಛ ಮಾಡಲಾಗುವುದು, ನಗರದ ಸಾರ್ವಜನಿಕರು ಸಹ ಸ್ವಚ್ಚತಾ ಕಾರ್ಯಕ್ರಮಗಳಲ್ಲಿ ಸಹಕಾರ ನೀಡುವಂತಾಗಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಪಿಡಿ ಅಂಬಿಕಾ, ನಗರಸಭೆಯ ಅಧಿಕಾರಿಗಳಾದ ಶ್ರೀನಿವಾಸ್, ಗೋವಿಂದಪ್ಪ, ಪಿಡಬ್ಲ್ಯೂಡಿ ಇಲಾಖೆಯ ರಾಮಮೂರ್ತಿ, ನಿರ್ಬೀತಿ ಕೇಂದ್ರದ ಅಧಿಕಾರಿಗಳಾದ ಖಾನ್, ರವಿ ಇದ್ದರು.