ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜೀವನದಲ್ಲಿ ನಿಜವಾದ ಸಾಧನೆ ಎಂದರೆ ಆರೋಗ್ಯ ಕಾಪಾಡಿಕೊಳ್ಳುವುದಾಗಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಆಯೋಜಿಸಿದ್ದ ಶ್ರೀರಂಗಪಟ್ಟಣ ಕ್ರೀಡಾ ದಸರಾ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಶೈಕ್ಷಣಿಕವಾಗಿ ಅಂಕ ಕಡಿಮೆ ಪಡೆದರೂ ಜೀವನ ಸಾಗಿಸಬಹುದು. ಆದರೆ, ಆರೋಗ್ಯದಲ್ಲಿ ವೈಪರಿತ್ಯ ಉಂಟಾದರೆ ಸಾಧಿಸಲು ಸಾಧ್ಯವಿಲ್ಲ. ಕ್ರೀಡಾಳುಗಳು ಹಾಗೂ ಸಾರ್ವಜನಿಕರು ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಡಿಗೆ, ಓಟದಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಮ್ಯಾರಥಾನ್ ಓಟದಲ್ಲಿ ಸ್ಪರ್ಧಿಸುವ ದೃಢತೆ ಇದೆ ಎಂದರೆ ಶೈಕ್ಷಣಿಕ, ಔದ್ಯೋಗಿಕವಾಗಿ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಧ್ಯ. ಕ್ರೀಡೆಯಲ್ಲಿ ಸಾಧನೆ ಗೈದವರು ಜಗತ್ ವಿಖ್ಯಾತಿ ಪಡೆಯುತ್ತಾರೆ ಎಂದು ಅಭಿಪ್ರಾಯಪಟ್ಟರು. ತಹಸೀಲ್ದಾರ್ ಚೇತನ ಯಾದವ್ ಮಾತನಾಡಿದರು.
ಸ್ಪರ್ಧೆ ವಿಜೇತರು:20 ವರ್ಷ ಮೇಲ್ಪಟ್ಟ ಪುರುಷ ವಿಭಾಗ- ಭುವನ್ ಜಿ.ವಿ- ಪ್ರಥಮ ಸ್ಥಾನ, ವರುಣ್ ಗೌಡ- ದ್ವಿತೀಯ ಸ್ಥಾನ, ಸುದರ್ಶನ್ ಎ.ಬಿ- ತೃತೀಯ ಸ್ಥಾನ, 21 ರಿಂದ 50 ವರ್ಷ ವಿಭಾಗ - ಮಣಿಕಂಠ ಪಿ,-ಪ್ರಥಮ ಸ್ಥಾನ, ಸುಮಂತ್ ಕುಮಾರ್ ಬಿ-ದ್ವಿತೀಯ ಸ್ಥಾನ, ಆನಂದ್ ಡಿ ಎಂ-ತೃತೀಯ ಸ್ಥಾನ. 51 ವರ್ಷ ಮೇಲ್ಪಟ್ಟ ವಿಭಾಗ ಹರೀಶ್ ಪಿ-ಪ್ರಥಮ ಸ್ಥಾನ, ಬಿ ಬಾಲಚಂದ್ರ- ದ್ವಿತೀಯ ಸ್ಥಾನ, ಆರ್.ಸೋಮಶೇಖರ್ - ತೃತೀಯ ಸ್ಥಾನ ಪಡೆದುಕೊಂಡರು.
೨೦ ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ - ಪ್ರಣಮ್ಯ-ಪ್ರಥಮ ಸ್ಥಾನ, ಜಯಶ್ರೀ- ದ್ವಿತೀಯ ಸ್ಥಾನ, ದಿವ್ಯಶ್ರೀ- ತೃತೀಯ ಸ್ಥಾನ. 21 ರಿಂದ 50 ವರ್ಷ ಮಹಿಳೆಯರ ವಿಭಾಗ - ಅನನ್ಯ- ಪ್ರಥಮ ಸ್ಥಾನ, ಶಾಂತಕುಮಾರಿ ಕೆ ಬಿ- ದ್ವಿತೀಯ ಸ್ಥಾನ, ಅರ್ಪಿತ- ತೃತೀಯ ಸ್ಥಾನ, 51 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ - ಎನ್ ಆರ್ ಶೋಭಾ- ಪ್ರಥಮ ಸ್ಥಾನ, ವಿಜಯ ಎಸ್ ಜಿ- ದ್ವಿತೀಯ ಸ್ಥಾನ, ಮಂಜುಳಾ- ತೃತೀಯ ಸ್ಥಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಎಚ್ ಐ.ವಿ ನಿಯಂತ್ರಣಾಧಿಕಾರಿ ಆಶಾಲತಾ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಅಧೀಕ್ಷಕ ನಾಗಭೂಷಣ್, ಅಚೀವರ್ಸ್ ಅಕಾಡೆಮಿಯ ರಾಘವೇಂದ್ರ ಸೇರಿದಂತೆ ಇತರರು ಇದ್ದರು.
-----------26ಕೆಎಂಎನ್ ಡಿ23
ಶ್ರೀರಂಗಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ದಸರಾ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಲಾಯಿತು.