ಸಂಕ್ರಾಂತಿ ಎಲ್ಲರಿಗೂ ಶುಭಫಲ ನೀಡಲಿ: ಅರುಣಕುಮಾರ ಪಾಟೀಲ್

| Published : Jan 16 2024, 01:46 AM IST

ಸಂಕ್ರಾಂತಿ ಎಲ್ಲರಿಗೂ ಶುಭಫಲ ನೀಡಲಿ: ಅರುಣಕುಮಾರ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಚಿನಮಳ್ಳಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಚಿನಮಳ್ಳಿ ಐತಿಹಾಸಿಕ ಗ್ರಾಮವಾಗಿದೆ. ಇಲ್ಲಿನ ಮಲ್ಲಿಕಾರ್ಜುನ ದೇವಾಲಯ ಬಹಳ ಪುರಾತನವಾಗಿದ್ದಲ್ಲದೆ ಬಹಳಷ್ಟು ಶಕ್ತಿಶಾಲಿಯಾಗಿದೆ. ಇಲ್ಲಿ ಭಕ್ತರು ಕೂಡ ಬಹಳ ಶ್ರದ್ಧಾ ಭಕ್ತಿಯವರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಪ್ರತಿವರ್ಷದ ಪದ್ಧತಿಯಂತೆ ಮಕರ ಸಂಕ್ರಮಣ ಯಾವುದೇ ಅಡಚಣೆಗಳಿಲ್ಲದಂತೆ ನಡೆದಿದೆ. ಈ ಬಾರಿಯ ಸಂಕ್ರಮಣ ಫಲ ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಹೇಳಿದರು.

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಚಿನಮಳ್ಳಿ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಚಿನಮಳ್ಳಿ ಐತಿಹಾಸಿಕ ಗ್ರಾಮವಾಗಿದೆ. ಇಲ್ಲಿನ ಮಲ್ಲಿಕಾರ್ಜುನ ದೇವಾಲಯ ಬಹಳ ಪುರಾತನವಾಗಿದ್ದಲ್ಲದೆ ಬಹಳಷ್ಟು ಶಕ್ತಿಶಾಲಿಯಾಗಿದೆ. ಇಲ್ಲಿ ಭಕ್ತರು ಕೂಡ ಬಹಳ ಶ್ರದ್ಧಾ ಭಕ್ತಿಯವರಾಗಿದ್ದಾರೆ ಎಂದ ಅವರು, ಈ ಗ್ರಾಮ ಮತ್ತು ದೇವಾಲಯದ ಅಭಿವೃದ್ಧಿಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದರು.

ಅಫಜಲ್ಪುರ ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಜಗದೇವಿ ಸುಭಾಷ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಮಾಜಿ ಜಿ.ಪಂ. ಅಧ್ಯಕ್ಷ ನಿತೀನ ಗುತ್ತೇದಾರ, ಮುಖಂಡರಾದ ಸಿದ್ದು ಶಿರಸಗಿ, ಎಸ್.ಎಸ್. ಪಾಟೀಲ, ಶರಣಬಸಪ್ಪ ಮೈನಾಳ, ಮಲ್ಲಿಕಾರ್ಜುನ ಮಾನಕರ, ದೇವಸ್ಥಾನ ಕಮೀಟಿ ಅಧ್ಯಕ್ಷ ಕಲ್ಯಾಣರಾವ ಬಿರಾದಾರ, ಬಸಯ್ಯ ಸ್ವಾಮಿ, ಸಿದ್ದರಾಮಮಾವೂರ, ಶಿವಾನಂದ ಪೊಲೀಸಪಾಟೀಲ, ಲಕ್ಷ್ಮಣಗೌಡ ಸಂಗಾಪೂರ, ಶ್ರೀಮಂತ ಬೋಳಶೆಟ್ಟಿ, ಶಿವು ಬೆಳಗುಂಪಿ, ಮಲ್ಲಿನಾಥ ಬಿರಾದಾರ, ನಿಂಗಣ್ಣ ಒಳಕಟ್ಟಿ, ನಾಗರಾಜ ಮೇಳಕುಂದಿ, ಮಲ್ಲು ಬಿರಾದಾರ, ಬಾಬು ಮಾಂಗ, ಸಾಹಿಲ್ ಶೇಕ್, ಯಮನಪ್ಪ ಇಟಗಿ, ಬೈಲಪ್ಪ ಮಾಂಗ, ಅಪ್ಪಾಸಾಬ ದೇವರಮನಿ, ಮಾಳಪ್ಪ ಪೂಜಾರಿ, ಸಂತೋಷ ಅವಟೆ ಸೇರಿದಂತೆ ಗ್ರಾಮಸ್ಥರು ಭಕ್ತರು ಇದ್ದರು.