ಸ್ವಾವಲಂಬಿಯಾಗಿ ಜೀವನ ರೂಪಿಸಿಕೊಳ್ಳಿ

| Published : Aug 29 2024, 12:49 AM IST

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಮಹಿಳೆಯರು ಜೀವನ ರೂಪಿಸಿಕೊಂಡು ಮನೆಗೆ ಆಧಾರ ಸ್ಥಂಬವಾಗಿದ್ದಾರೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಕೊರಟಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಮಹಿಳೆಯರು ಜೀವನ ರೂಪಿಸಿಕೊಂಡು ಮನೆಗೆ ಆಧಾರ ಸ್ಥಂಬವಾಗಿದ್ದಾರೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ಸ್ವಾರ್ಥ ಜನಗಳ ಮಧ್ಯೆ ದಾನ ಧರ್ಮ ಸೇವೆ, ಪೂಜೆಗೆ ಮೊತ್ತೊಂದು ಹೆಸರು ಪರಮ ಪೂಜ್ಯ ಡಾ. ವೀರೇಂದ್ರ ಹೆಗಡೆ ಎಂದರೆ ತಪ್ಪಾಗುವುದಿಲ್ಲ. ಅವರು ತಂದಿರುವ ಯೋಜನೆಗಳು ಗ್ರಾಮೀಣ ಭಾಗದ ಬಡ ಜನರ ಕಣ್ಣೀರು ಒರೆಸುವ ಯೋಜನೆಗಳಾಗಿವೆ ಎಂದು ಹೇಳಿದರು. ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ಮಾತನಾಡಿ, ವೀರೇಂದ್ರ ಹೆಗಡೆ ಮಾರ್ಗದಶನದಂತೆ ಕೊರಟಗೆರೆ ತಾಲೂಕಿನಲ್ಲಿ ೨೩೦೦ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ೧೬೪ ಅಸಹಾಯಕರಿಗೆ, ನಿರ್ಗತಿಕರಿಗೆ ಮಾಶಾಸನವನ್ನ ನೀಡಲಾಗಿದೆ. ೧೯ ಲಕ್ಷ ರು. ಅನುದಾನ ಮಂಜೂರು ಮಾಡಿದ್ದಾರೆ. ತಾಲೂಕಿನಲ್ಲಿ ೯ ಮದ್ಯವರ್ಜನ ಶಿಬಿರ ಆಯೋಜನೆ ಮಾಡಿ ೫೦೦ ಜನ ಕುಡಿತದಿಂದ ದೂರ ಉಳಿದಿದ್ದಾರೆ ಎಂದು ತಿಳಿಸಿದರು.ತಾಲೂಕಿನ ಹಾಲು ಉತ್ಪಾದಕರ ಸಂಘದ ಕಟ್ಟಡಗಳಿಗೆ ೨೭ ಕಟ್ಟಡಕ್ಕೆ ೨೧ ಲಕ್ಷ ರು. ನೀಡಲಾಗಿದೆ. ೨೭ ದೇವಸ್ಥಾನಕ್ಕೆ ೧ ಕೋಟಿ ೯ ಲಕ್ಷ ರು. ನೀಡಲಾಗಿದೆ. ತಾಲೂಕಿನಲ್ಲಿ ನಾಲ್ಕು ಕೆರೆಗಳಲ್ಲಿ ಹೂಳು ಎತ್ತುವ ಕೆಲಸವನ್ನ ಮಾಡಲಾಗಿದೆ. ನಮ್ಮ ಸಂಘದ ಸದಸ್ಯರ ೪೦೯ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ೪೪ ಲಕ್ಷ ರು. ಅನುದಾನ ನೀಡಿ ಅವರ ಮುಂದಿನ ಜೀವನ ರೂಪಿಕೊಳ್ಳವಂತೆ ಸಹಕಾರ ಮಾಡುತ್ತಿದ್ದಾರೆ ಎಂದರು. ತೀತಾ ಗ್ರಾಪಂ ಅಧ್ಯಕ್ಷೆ ಸುಮಂಗಳಮ್ಮ, ಜಿಲ್ಲಾ ನಿರ್ದೇಶಕ ದಿನೇಶ್.ಡಿ., ಯೋಜನಾಧಿಕಾರಿ ಅನಿತಗುಂಡು ಬೆಳಗಾಣಕರ್, ಲಲೀತಮ್ಮ ಪ್ರಸನ್ನಕುಮಾರ್, ಜನಜಾಗೃತಿ ವೇದಿಕೆಯ ಸದಸ್ಯ ಟಿ.ಕೆ.ಜಗದೀಶ್, ಮಮತ, ಕುಮಾರ್ ಹಾಜರಿದ್ದರು.