ಸಜ್ಜನರ ಸಂಘ ಮಾಡಿ ಸಾಧನೆ ಮಾಡಿ

| Published : Jul 05 2024, 12:47 AM IST

ಸಾರಾಂಶ

ಬದುಕು ಯಶಸ್ವಿಯಾಗಬೇಕಾರೇ ದುಶ್ಚಟಗಳಿಂದ ದೂರವಿದ್ದು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಮಾದರಿಯಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಧಾರವಾಡದ ಪ್ರಾದೇಶಿಕ ಕಚೇರಿಯ ನಿರ್ದೇಶಕಿ ದಯಾಶೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬದುಕು ಯಶಸ್ವಿಯಾಗಬೇಕಾರೇ ದುಶ್ಚಟಗಳಿಂದ ದೂರವಿದ್ದು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಮಾದರಿಯಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಧಾರವಾಡದ ಪ್ರಾದೇಶಿಕ ಕಚೇರಿಯ ನಿರ್ದೇಶಕಿ ದಯಾಶೀಲ ಹೇಳಿದರು.ಪಟ್ಟಣದ ವೀರರಾಣಿ ಚನ್ನಮ್ಮ ಸಮಾಧಿ ರಸ್ತೆಯಲ್ಲಿನ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸಂಯುಕ್ರ ಅಶ್ರಯದಲ್ಲಿ ಮಂಗಳವಾರ ಜರುಗಿದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚಾರಣೆ ಹಾಗೂ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘ ದೋಷದಿಂದ ಹಲವಾರು ಜನರ ಜೀವನ ನರಕಮಯವಾಗುತ್ತಿದ್ದು, ಸಜ್ಜನರ ಸಂಘ ಮಾಡಿ ಸಾಧನೆ ಮಾಡಬೇಕು. ಯುವ ಜನಾಂಗ ಮನಸ್ಸು ಮಾಡಿದರೇ ದೇಶ ಉದ್ದಾರವಾಗಲು ಸಾಧ್ಯವಿದೆ ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳಗಾವಿಯ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯ ನಿರ್ದೇಶಕ ವಿಠ್ಠಲ ಪಿಸೆ ಅವರು ವಿಶ್ವ ಮಾದಕ ವಸ್ತು ವಿರೋಧಿ ಹಾಗೂ ಸ್ವಾಸ್ಥ್ಯ ಸಂಕಲ್ಪದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಪ್ರಾಚಾರ್ಯ ಸಿ.ಬಿ.ಗಣಾಚಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಕೆಡಿಆರ್‌ಡಿಪಿಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಜಿಲ್ಲಾ ಜನ ಜಾಗೃತಿ ವೇದಿಕೆಯ ನಿರ್ದೇಶಕರಾದ ಉಮೇಶ ಮುಪೈನವರಮಠ, ಜಗದೀಶ ಜಕ್ಕಪ್ಪನವರ, ಮಹೇಶ ಕೋಟಗಿ, ಮಹಾಂತೇಶ ಕಮತ, ಎಸ್‌ಕೆಡಿಆರ್‌ಡಿಪಿಯ ತಾಲೂಕು ಯೋಜನಾಧಿಕಾರಿ ಪಿ.ವಿಜಯಕುಮಾರ, ವಲಯ ಮೇಲ್ವಚಾರಕ ರವಿಕುಮಾರ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ ಇದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಎಂ.ಎಚ್.ಪೆಂಟೇದ, ಕಾಲೇಜಿನ ಉಪನ್ಯಾಸಕರಾದ ಸಿ.ಎಂ.ಹಕ್ಕಿ, ಎಸ್.ಎಂ.ತೋಟದ, ಎಸ್.ಎಸ್.ತಲ್ಲೂರ, ವಿ.ಎಂ.ಅಂಗ್ರೊಳ್ಳಿ, ಡಿ,ಡಿ.ಹಾದಿಮನಿ, ಎಂ.ಎಸ್.ಹಾದಿಮನಿ, ವಿ.ಡಿ.ಮಾಕಾರ, ಸೇವಾಪ್ರತಿನಿಧಿಗಳಾದ ಮಹಾದೇವಿ ಹುಲಕುಂದ, ಸುಮಾ ಹಿರೇಮಠ ಹಾಗೂ ಕಾಲೇಜಿನ ಉಪನ್ಯಾಸ ವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಸುಪ್ರೀತಾ ಕೋಣಿ ಸ್ವಾಗತಿಸಿದರು. ರಾಜೇಶ್ವರಿ ಜಮುನಾಳ ನಿರೂಪಿಸಿದರು. ಗೀತಾ ಚಳಕೊಪ್ಪ ವಂದಿಸಿದರು.