ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಳಿಸಿ: ಮಲ್ಲಿಕಾರ್ಜುನ

| Published : Feb 08 2024, 01:30 AM IST

ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಳಿಸಿ: ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸಂಸ್ಕಾರ ಮತ್ತು ಸನಾತನ ಸಂಸ್ಕೃತಿ ಹೊಂದಿದೆ. ಬೆಳಗಾವಿ ಗ್ರಾಮಾಂತರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ ಎಂದು ಬಿಜೆಪಿ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಕರೆ ನೀಡಿದರು.

ತಾಲೂಕಿನ ಮಾರೀಹಾಳ ಗ್ರಾಮದಲ್ಲಿ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬಿಜೆಪಿ ಸಂಸ್ಕಾರ ಮತ್ತು ಸನಾತನ ಸಂಸ್ಕೃತಿ ಹೊಂದಿದೆ. ಬೆಳಗಾವಿ ಗ್ರಾಮಾಂತರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ 2 ವಿಧಾನಸಭಾ ಸ್ಥಾನ ಕಳೆದುಕೊಂಡೆವು. ಆದರೆ, ಬರುವ ಲೊಕಸಭಾ ಚುನಾವಣೆಯಲ್ಲಿ ಪಕ್ಷ ಗಟ್ಟಿಗೊಳಿಸುವ ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅತ್ಯಧಿಕ‌ ಮತಗಳಿಂದ ಗೆಲವು ತಂದು ಕೊಡವತ್ತ ಪರಿಶ್ರಮಿಸೋಣ ಎಂದು ಹೇಳಿದರು.

ಬೂತ ಮಟ್ಟದ ಕಾರ್ಯಕರ್ತರಾಗಿ ಮಂಡಲ, ಜಿಲ್ಲೆಯ ವಿವಿಧ ಪದಾಧಿಕಾರಿಗಳಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ ಸುಭಾಷ ಪಾಟೀಲರು ರೈತನ ಮಗನಾಗಿ ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ. ಅವರಿಗೆ ಜಿಲ್ಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಒಬ್ಬ ಸಾಮನ್ಯ ಕಾರ್ಯಕರ್ತನಿಗೂ ಪಕ್ಷದ ಜವಾಬ್ದಾರಿ ಮತ್ತು ಚುನಾಯಿತ ಪ್ರತಿನಿಧಿಯಾಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬೇರೆ ಪಕ್ಷದಲ್ಲಿ ಒಮ್ಮೆ ನೇಮಕವಾದರೆ ಬದಲಾವಣೆ ಕಷ್ಟ ಸಾಧ್ಯ. ಆದರೆ, ಬಿಜೆಪಿಯಲ್ಲಿ ಕಡ್ಡಾಯವಾಗಿ 3 ವರ್ಷಗಳ ನಂತರ ಬೂತ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಬದಲಾವಣೆ ಮಾಡುವುದರೊಂದಿಗೆ ಸರ್ವರಿಗೂ ಸಮಪಾಲು ಸಮಬಾಳು ಎನ್ನುವಂತೆ ಸರ್ವ ಜನಾಂಗವನ್ನು ಪ್ರೀತಿಸುತ್ತಾ ಜತೆ ಜೊತೆಯಲ್ಲಿ ಕರೆದುಕೊಂಡು ಹೊಗುವ ಪಕ್ಷ ಬಿಜೆಪಿ ಭರವಸೆಯ ನಾಯಕ ಸುಭಾಷ ಪಾಟೀಲರ ಅಧ್ಯಕ್ಷತೆಯಲ್ಲಿ ಪಕ್ಷ ಎತ್ತರಕ್ಕೆ ಬೆಳೆಯಲೆಂದು ಶುಭ ಹಾರೈಸಿದರು.

ಸತ್ಕಾರ ಸ್ವೀಕರಿಸಿದ ನೂತನ ಜಿಲ್ಲಾ‌ ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ನನ್ನ ಮೇಲೆ‌ ವಿಶ್ವಸವನ್ನಿಟ್ಟು ಜವಾಬ್ದಾರಿ ನೀಡಿದ ಪಕ್ಷದ ಮುಖಂಡರ ವಿಶ್ವಸಕ್ಕೆ ಎಲ್ಲಿಯೂ ಚುತಿಬರದಂತೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಎಲ್ಲರ ವಿಶ್ವಸದೊಂದಿಗೆ ಜಿಲ್ಲೆಯಲ್ಲಿರುವ ಎಲ್ಲ ಗ್ರಾಮಗಳಿಗೂ ಸಂಚರಿಸಿ ಪಕ್ಷ ಸಂಘಟಿಸುತ್ತೆನೆ ಗ್ರಾಮಸ್ಥರ ಸಹಾಯ ಸಹಕಾರ ವಿಶ್ವಾಸ ಸದಾ ಪಕ್ಷದ ಮೇಲೆರಿ ಎಂದರು.

ಜಿಲ್ಲಾ ಎಸ್ಸಿ‌ ಮೋರ್ಚಾ ಅಧ್ಯಕ್ಷ ಯಲ್ಲೆಶ ಕೊಲಕಾರ, ಬಸವರಾಜ ಮಾದಮ್ಮನವರ, ವೀರಭದ್ರ ಪುಜಾರ,ಶಿವಾನಂದ ಹಿತ್ತಲಮನಿ ಇದ್ದರು.