ಮಕ್ಕಳಿಗೆ ದೇಶದ ಇತಿಹಾಸದ ಅರಿವು ಮೂಡಿಸಿ

| Published : Aug 24 2025, 02:00 AM IST

ಸಾರಾಂಶ

ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಪ್ರತಿ ವಾರ ತಪ್ಪದೇ ಮಸೀದಿ ಮತ್ತು ಚರ್ಚುಗಳಿಗೆ ಹೋಗುತ್ತಾರೆ. ಹಿಂದೂಗಳು ಸಹ ವಾರಕ್ಕೊಮ್ಮೆ ದೇವಾಲಯಕ್ಕೆ ಭೇಟಿ ನೀಡಿದರೆ ಒಗ್ಗಟ್ಟು ಮತ್ತು ಸಾಮರಸ್ಯ ಬೆಳೆಯುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನ ಪ್ರಾಣವನ್ನು ಮಡುಪಾಗಿ ಇಟ್ಟ ಹೋರಾಟಗಾರರ ಬಗ್ಗೆ ಹಾಗೂ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ದೇಶದ ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಬಳಿಯ ಶ್ರೀ ಶಿವ ಶನೈಶ್ಚರ ದೇವಾಲಯದ ೫ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ಧರ್ಮಸ್ಥಳ ಹಿಂದೂಗಳ ಪ್ರಮುಖ ಧರ್ಮ ಕ್ಷೇತ್ರವಾಗಿದೆ. ರಾಜ್ಯಾದ್ಯಾಂತ ರೈತರು ತಾವು ಬೆಳೆದ ತರಕಾರಿ ಮತ್ತು ಧಾನ್ಯಗಳನ್ನು ದೇವಾಲಯಕ್ಕೆ ಸಮರ್ಪನೆ ಮಾಡುತ್ತಾರೆ. ಇಂತಹ ದೇವಾಲಯಕ್ಕೆ ಕೆಟ್ಟ ಹೆಸರು ತರಲಿಕ್ಕೆ ಹತ್ತಾರು ವರ್ಷಗಳಿಂದ ಕೆಲವರು ಹೊಂಚು ಹಾಕಿದ್ದಾರೆ ಎಂದು ಹೇಳಿದರು.

ಕೆಟ್ಟ ಹೆಸರು ತರುವ ಉದ್ದೇಶ

ವಿದೇಶಗಳ ಮಿಷನರಿಗಳಿಂದ, ಉಗ್ರಗಾಮಿ ಸಂಘಟನೆಗಳಿಂದ ಹಣವನ್ನು ಪಡೆದು ಮುಸುಕುಧಾರಿಯನ್ನು ಸೃಷ್ಟಿಸಿ ಧರ್ಮಸ್ಥಳ ದೇವಾಲಯಕ್ಕೆ ಕೆಟ್ಟ ಹೆಸರು ತರಲು ಹೊಂಚು ಹಾಕಿದರು. ಕೇವಲ ದೇವಾಲಯಕ್ಕೆ ಕೆಟ್ಟ ಹೆಸರು ತರಲಿಲ್ಲ ಜೊತೆಗೆ ಸರ್ಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ೨೨ ಕೊಲೆಗಳನ್ನು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸರ್ಕಾರ ಸಹ ಧರ್ಮಸ್ಥಳದ ವಿಚಾರ ಬಂದಾಗ ದೇವಾಲಯದ ಪರ ನಿಲ್ಲಬಕಿತ್ತು. ಆದರೂ ಸಹ ಎಸ್.ಐಟಿ ರಚನೆ ಮಾಡಿ, ೧೫ಕ್ಕೂ ಹೆಚ್ಚಿನ ಕಡೆ ಜೆಸಿಬಿ ಬಳಸಿ ಅಗೆದರೂ ಸಹ ಯಾವುದೇ ಅಸ್ತಿಪಂಜರ ಸಿಗಲಿಲ್ಲ ಎಂದರು.

ಈಗ ಎಲ್ಲವೂ ಸಹ ನಕಲಿ ಎಂದು ಗೊತ್ತಾಗಿದೆ. ತಿಮರೋಡಿಯನ್ನು ಬಂಧಿಸಿ, ಯುಟ್ಯೂಬರ್ ಸಮೀರನ್ನು ಬಂಧಿಸಲು ಮುಂದಾಗಿರುವುದು ಸ್ವಾಗತಾರ್ಹ. ಸ್ಥಳೀಯವಾಗಿ ಸ್ವಾಮೀಜಿಗಳನ್ನು ಕೆಟ್ಟದಾಗಿ ಮಾತನಾಡಿದ್ದಾರೆ, ಆದರೆ ಸ್ವಾಮೀಜಿ ಕೋಟ್ಯತರ ರು.ಗಳನ್ನು ಖರ್ಚು ಮಾಡಿ ಜನರಿಗೆ ಹಿಂದುತ್ವ ಮತ್ತು ಭಕ್ತಿ ಭಾವನೆ ಬರಬೇಕು ಎಂಬ ಉದ್ದೇಶದಿಂದ ಸನ್ನಿದಾನದಲ್ಲಿ ಹಲವು ದೇವರುಗಳನ್ನು ಪ್ರತಿಷ್ಠಾಪನೆ ಮಾಡಿರುವುದು ಶ್ಲಾಘನೀಯ. ಅವರ ಜೊತೆಗೆ ಜನರು ನಿಂತು ಧರ್ಮದ ಕೆಲಸಗಳನ್ನು ಮಾಡಬೇಕು ಎಂದರು.

ದೇವಾಲಯಕ್ಕೆ ಭೇಟಿ ನೀಡಿಅಧಿಕಾರಕ್ಕಾಗಿ ದೇಶವನ್ನು ವಿಂಗಡನೆ ಮಾಡಿದರು. ಆದರೂ ಸಹ ೧೨೦ ಕೋಟಿ ಜನ ಹಿಂದುಗಳು ದೇಶದಲ್ಲಿ ಇದ್ದೇವೆ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಪ್ರತಿ ವಾರ ತಪ್ಪದೇ ಮಸೀದಿ ಮತ್ತು ಚರ್ಚುಗಳಿಗೆ ಹೋಗುತ್ತಾರೆ. ಹಿಂದೂಗಳು ಸಹ ವಾರಕ್ಕೊಮ್ಮೆ ದೇವಾಲಯಕ್ಕೆ ಭೇಟಿ ನೀಡಿದರೆ ಒಗ್ಗಟ್ಟು ಮತ್ತು ಸಾಮರಸ್ಯ ಬೆಳೆಯುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನ ಪ್ರಾಣವನ್ನು ಮಡುಪಾಗಿ ಇಟ್ಟ ಹೋರಾಟಗಾರರ ಬಗ್ಗೆ ಹಾಗೂ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಶತೃ ರಾಷ್ಟçಗಳು ದೇಶದ ಮತ್ತು ಸ್ವಾಮೀಜಿಗಳ ತಂಟೆಗೆ ಬಂದರೆ ಒನಕೆ ಒಬ್ಬವನ ತರಹ ದೇಶದ ರಕ್ಷಣೆಗೆ ಎಲ್ಲರೂ ಸಿದ್ದರಾಗಬೇಕು ಎಂದರು. ದೇಶಕ್ಕೆ ಸ್ವಾಂತಂತ್ರ್ಯ ಪಡೆಯಲು ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ಆರಂಭಿಸಿದ ಗಣೇಶ ಉತ್ಸವಕ್ಕೆ ಗಣೇಶ ಇಡಲು ದೊಣ್ಣೆನಾಯಕನ ಅಪ್ಪಣೆ ಬೇಕಿದೆ. ವಾರ್ಡ್‌ಗೆ ಒಂದೇ ಗಣಪತಿ ಇಡಬೇಕು ಎಂದು ಹೇಳೋದಕ್ಕೆ ಇವರು ಯಾರು. ಗಲ್ಲಿಗಲ್ಲಿಗೂ ಸಹ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ ಎಂದರು.

ಈ ವೇಳೆ ಪುರಸಭೆ ಸದಸ್ಯ ಕಪಾಲಿ ಶಂಕರ್, ಮುಖಂಡರಾದ ಹೊಸರಾಯಪ್ಪ, ನಾರಾಯಣಸ್ವಾಮಿ, ನಾರಾಯಣಪ್ಪ, ಚನ್ನಕೃಷ್ಣ, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.