ಸಾರಾಂಶ
-ಹುಲಿಗೆಪ್ಪ ಶಾಲೆಯಲ್ಲಿ ಹಸಿರು ದಿನ (ಗ್ರೀನ್ ಡೇ) ನಿಮಿತ್ತ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ನಾಳಿನ ನೆಮ್ಮದಿಯ ಬದುಕಿಗೆ ಹಸಿರೇ ಉಸಿರು ಎನ್ನುವಂತೆ ಪರಿಸರ ಸಂರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವುದು ಅಗತ್ಯವಾಗಿದೆ ಎಂದು ಹುಲಿಗೆಪ್ಪ ಶಾಲೆಯ ಮುಖ್ಯಸ್ಥ ಹಾಗೂ ಮುಖ್ಯಗುರು ಆನಂದ್ ಕಾಡ್ಲೂರು ಹೇಳಿದರು.ನಗರದ ಹುಲಿಗೆಪ್ಪ ಶಾಲೆಯಲ್ಲಿ ಹಸಿರು ದಿನ (ಗ್ರೀನ್ ಡೇ) ನಿಮಿತ್ತ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬೇಸಿಗೆ ನಾಡಿನಲ್ಲಿ ವಿಪರೀತ ತಾಪಮಾನ ಏರಿಕೆಯಾಗಿದ್ದು, ನಾವೆಲ್ಲಾ ನೋಡಿದ್ದೇವೆ. ಪರಿಸರದಲ್ಲಿ ತಾಪಮಾನ ಸಮತೋಲನ ಕಾಪಾಡಲು ನಮಗಿರುವ ಒಂದೇ ದಾರಿಯೆಂದರೆ ಗಿಡ-ಮರಗಳನ್ನು ಬೆಳೆಸುವುದಾಗಿದೆ ಎಂದರು.
ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಮ್ಮ ಸುತ್ತಲು ಪರಿಸರವನ್ನು ಕಸದಿಂದ ಮುಕ್ತಗೊಳಿಸುವ ಸ್ವಚ್ಛತೆಯ ಕಾಳಜಿಯೂ ತೋರಬೇಕು. ವಿಶೇಷವಾಗಿ ಮಕ್ಕಳಲ್ಲಿ ಗಿಡ-ಮರಗಳನ್ನು ಬೆಳೆಸುವುದು. ಪರಿಸರ ಸ್ವಚ್ಛತೆ ಸಂರಕ್ಷಣೆಯ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಿ ಅವರಲ್ಲಿ ಪರಿಸರ ಹಸಿರಾಗಿಸುವ ಪ್ರಜ್ಞೆಯನ್ನು ಮೂಡಿಸಬೇಕು ಎಂದು ನುಡಿದರು.ಹುಲಿಗೆಪ್ಪ ಶಾಲೆಯಲ್ಲಿ ಹಸಿರು ದಿನ (ಗ್ರೀನ್ ಡೇ) ಸಸಿ ನೆಡುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಹಸಿರು ಬಣ್ಣದ ಎಲೆಗಳು ಮತ್ತು ಬಲೂನ್‌ಗಳಿಂದ ಶಾಲೆಯನ್ನು ಸಿಂಗರಿಸಲಾಗಿತ್ತು. ಸಸಿಗಳ ಬಗ್ಗೆ ಪರಿಸರದ ಬಗ್ಗೆ ಚಿತ್ರಪಟಗಳನ್ನು ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾಯಿತು. ಮಕ್ಕಳಿಂದಲೇ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಯಿತು.
ಶಿಕ್ಷಕರಾದ ಮಲ್ಲಪ್ಪ ನಾಟೇಕರ್, ಶ್ರುತಿ, ಸುವರ್ಣ, ಇಸ್ರತ್, ಸುಲೋಚನಾ, ಪೂಜಾ, ಪರಿಮಳ, ಲಕ್ಷ್ಮಿ, ಆಸ್ಮಾ, ಮಹ್ಮದಿ, ಜ್ಯೋತಿ, ದೀಪಾ ಸೇರಿದಂತೆ ಇತರರಿದ್ದರು.------
29ವೈಡಿಆರ್6: ಯಾದಗಿರಿ ನಗರದ ಹುಲಿಗೆಪ್ಪ ಶಾಲೆಯಲ್ಲಿ ಹಸಿರು ದಿನ (ಗ್ರೀನ್ ಡೇ) ನಿಮಿತ್ತ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.