ಮಕ್ಕಳನ್ನು ರಾಷ್ಟ್ರದ ಸಂಪತ್ತನ್ನಾಗಿ ರೂಪಿಸಿ: ಶಾಸಕ ದೇಶಪಾಂಡೆ

| Published : May 18 2025, 01:47 AM IST

ಮಕ್ಕಳನ್ನು ರಾಷ್ಟ್ರದ ಸಂಪತ್ತನ್ನಾಗಿ ರೂಪಿಸಿ: ಶಾಸಕ ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ಶಾಲೆಗಳಿಗೆ ಎಲ್ಲ ಸೌಲತ್ತುಗಳನ್ನು ನೀಡುತ್ತಿದ್ದು, ಮಕ್ಕಳು ಮತ್ತು ಪಾಲಕರು ಇದರ ಲಾಭ ಪಡೆಯಬೇಕು.

ದಾಂಡೇಲಿ: ಸರ್ಕಾರವು ವಸತಿ ಶಾಲೆಗಳಿಗೆ ಎಲ್ಲ ಸೌಲತ್ತುಗಳನ್ನು ನೀಡುತ್ತಿದ್ದು, ಮಕ್ಕಳು ಮತ್ತು ಪಾಲಕರು ಇದರ ಲಾಭ ಪಡೆಯಬೇಕು. ಒಂದು ಕಾಲದಲ್ಲಿ ವಿದ್ಯೆ ದುಬಾರಿಯಾಗಿತ್ತು. ಆದರೆ ಈಗ ಸರ್ಕಾರ ಹಲವಾರು ಯೋಜನೆಗಳ ಮೂಲಕ ಕಾಲೇಜುಗಳನ್ನು ಸ್ಥಾಪಿಸಿ ಉನ್ನತ ಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಲ್ಪಸಂಖ್ಯಾತರ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜು ವಸತಿ ಕಾಲೇಜಿನ ನೂತನ ಕಟ್ಟಡದ ಶಂಕು ಸ್ಥಾಪನೆ ನೆರವೆರಿಸಿ ಮಾತನಾಡುತ್ತಿದ್ದರು. ಸುಮಾರು ₹೮ ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳಿಗಾಗಿ ಈ ಕಾಲೇಜು ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಬಡ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಆದರೆ ಆರ್ಥಿಕವಾಗಿ ಸಬಲರಾಗಿರದ ಕಾರಣ ಇಂತಹ ವಸತಿ ಕಾಲೇಜುಗಳು ಅನುಕೂಲವಾಗಲಿವೆ. ಭವಿಷ್ಯದ ಭಾರತದ ರೂವಾರಿಗಳಾಗಿ ರಾಷ್ಟ್ರದ ಪ್ರಗತಿಗೆ ಭಾಗಿದಾರರಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಜಡೆನವರ ಪ್ರಾಸ್ತಾವಿಕ ಮಾತನಾಡಿ, ಪ್ರಸಕ್ತ ಸಾಲಿನ ಶೈಕ್ಷಣಿಕ ಪ್ರಗತಿ ಹಾಗೂ ದಾಖಲಾತಿ ಮತ್ತು ಫಲಿತಾಂಶದ ಕುರಿತು ತಿಳಿಸಿದರು. ವೇದಿಕೆಯಲ್ಲಿ ಕಾರವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಶೋಕ ಗಡ್ಡೇಗೌಡರ, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ನಗರಸಭೆಯ ಅಧ್ಯಕ್ಷ ಅಷ್ಪಾಕ ಶೇಖ, ಸ್ಥಾಯಿಸಮಿತ ಅಧ್ಯಕ್ಷೆ ಸುಧಾ ಜಾಧವ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಪಾಟೀಲ, ಸಂಜಯ ನಂದ್ಯಾಳಕರ ಮುಂತಾದವರಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಸುಖದೇವಿ ಗುರವ, ವಿಕ್ರಮ, ಅಮ್ರಿನ ಕಿತ್ತೂರ ಕಾರ್ಯಕ್ರಮದ ಶಯಸ್ಸಿಗೆ ಸಹಕರಿಸಿದರು.

ಪಹಲ್ಗಾಮನಲ್ಲಿ ಅಮಾಯಕ ನಾಗರಿಕರ ಹತ್ಯೆ ಕ್ರೂರ ಕೃತ್ಯವಾಗಿದ್ದು, ಇಂತಹ ಪಾಪಿ ಕೃತ್ಯವನ್ನು ಮಾಡಿದ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ಪ್ರತೀಕಾರವಾಗಿ ಭಾರತೀಯ ಸೈನ್ಯ ಕೈಗೊಂಡಿರುವ ಆಪರೇಶನ್ ಸಿಂದೂರ ಯಶಸ್ವಿಯಾಗಿರುವುದಕ್ಕೆ ನನ್ನ ಬೆಂಬಲವಿದೆ. ಕೇಂದ್ರ ಸರ್ಕಾರ ಇಂತಹ ದಿಟ್ಟ ನಿರ್ಧಾರವನ್ನು ತಗೆದುಕೊಂಡು ಯಶಸ್ವಿಯಾಗಿದೆ. ಭೂ, ವಾಯು, ಜಲ ಸೈನ್ಯಗಳ ದಿಟ್ಟತನ, ಧೈರ್ಯ, ಸಾಹಸ, ಶೌರ್ಯಗಳಿಂದ ಹೋರಾಡಿದ್ದನ್ನು ಮೆಚ್ಚುವಂತಹದ್ದು, ದೇಶದ ಬಗ್ಗೆ ಅಭಿಮಾನ ಇರಬೇಕು. ಜಾತಿ ಧರ್ಮ ಪಕ್ಷ ಇವು ನಂತರ, ಮೊದಲು ರಾಷ್ಟಾçಭಿಮಾನ, ನಾನು ಭಾರತೀಯ ಎಂದು ಎದೆ ತಟ್ಟಿಕೊಂಡು ಹೆಮ್ಮೆಯಿಂದ ಹೇಳಬೇಕು. ಮುಂದೆ ಯಾವುದೇ ಯುದ್ಧದ ಸಂದರ್ಭ ಬಂದರೆ ದಿಟ್ಟ ಉತ್ತರ ನೀಡಲು ನಮ್ಮ ಸೈನ್ಯ ಸಮರ್ಥವಾಗಿದೆ ಎಂದರು.