ಸಾರಾಂಶ
ನೀವು ನಮಗೆ ಅವರ ವಿವರ ನೀಡುವಂತೆ ಸೂಚಿಸಿ ವೈಕ್ತಿಕವಾಗಿ ನೆರವು ನೀಡುತ್ತೇವೆ
ಗೋಕರ್ಣ: ಇಲ್ಲಿನ ಪೊಲೀಸ್ ಠಾಣೆಯಿಂದ ಮೊರಬಾದ ಡಾ. ಬಿ.ಆರ್. ಅಂಬೇಡ್ಕರ ಸಭಾಭವನದಲ್ಲಿ ಪರಿಶಿಷ್ಟ ಜಾತಿ, ಪಂಗಡವರ ಕುಂದು ಕೊರತೆ ಕುರಿತು ಪಿಐ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಭಾನುವಾರ ಸಭೆ ನಡೆಯಿತು.
ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಸೂಚಿಸಿ, ಆರ್ಥಿಕವಾಗಿ ಸಮಸ್ಯೆಯಾದರೆ ನೀವು ನಮಗೆ ಅವರ ವಿವರ ನೀಡುವಂತೆ ಸೂಚಿಸಿ ವೈಕ್ತಿಕವಾಗಿ ನೆರವು ನೀಡುತ್ತೇವೆ ಎಂದರು.ಶಿಕ್ಷಣ ಪಡೆದರೆ ಸಮಾಜ, ಸಮುದಾಯ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಮನವರಿಕೆ ಮಾಡಿದರು.
ನಂತರ ಪೋಕ್ಸೋ ಕಾನೂನು ಸೇರಿದಂತೆ ವಿವಿಧ ಕಾನೂನಿನ ತಿಳಿವಳಿಕೆ, ನೆರವು, ಸರ್ಕಾರದ ಸೌಲಭ್ಯವನ್ನು ವಿವರಿಸಿದ ಪಿ.ಐ. ಶ್ರೀಧರ, ಶಾಂತಿ ಸೌಹಾರ್ದದಿಂದ ಬಾಳ್ವೆ ನಡೆಸುವಂತೆ ಕರೆ ನೀಡಿದರು. ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆ ಜೊತೆ ಇರುತ್ತದೆ ಎಂದು ತಿಳಿಸಿ ಹಲವು ಕೊಂದು ಕೊರತೆ ಆಲಿಸಿ ಸಲಹೆ ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ಪಿ.ಎಸ್.ಐ. ಖಾದರ ಬಾಷಾ, ಶಶಿಧರ ಹಾಗೂ ಪೊಲೀಸ್ ಸಿಬ್ಬಂದಿ, ಡಾ. ಬಿ.ಆರ್. ಅಂಬೇಡ್ಕರ್ ಸಂಘದವರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಹಿರೇಗುತ್ತಿ,ಮಾದನಗೇರಿ, ಮೊರಬಾ ಭಾಗದ ಎಸ್ಸಿ-ಎಸ್ಟಿ ಸಮುದಾಯದವರು ಪಾಲ್ಗೊಂಡಿದ್ದರು.
ಸಭೆಗೆ ಮೊದಲು ಎಸ್ಟಿ-ಎಸ್ಸಿ ಕಾಲೋನಿಗಳಿಗೆ ತೆರಳಿ ಜನರು ಭೇಟಿ ನೀಡಿದರು.