ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆಯೇ ಧ್ಯೇಯವಾಗಲಿ: ಮರಕಲ್

| Published : May 19 2024, 01:54 AM IST

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆಯೇ ಧ್ಯೇಯವಾಗಲಿ: ಮರಕಲ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಓದಿನಲ್ಲಿ ತೊಡಗಿಕೊಂಡು ಅಭ್ಯಾಸ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಡಿಡಿಯು ಪಿಯು ಕಾಲೇಜು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆಯೇ ಧ್ಯೇಯವಾಗಬೇಕು. ಅದಕ್ಕಾಗಿ ನಿರಂತರ ಪರಿಶ್ರಮಪಟ್ಟರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಸಾಧ್ಯವೆಂದು ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಹಣಮೇಗೌಡ ಮರಕಲ್ ಹೇಳಿದರು.

ತಾಲೂಕಿನ ದೋರನಹಳ್ಳಿ ಗ್ರಾಮದ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿಲ್ಲಿ ನಡೆದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಸ್.ಟಿ.ಎಸ್. ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ್ ಹೊಸ್ಮನಿ ಮಾತನಾಡಿ, ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಓದಿನಲ್ಲಿ ತೊಡಗಿಕೊಂಡು ಅಭ್ಯಾಸ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಡಿಡಿಯು ಪಿಯು ಕಾಲೇಜು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತಿದೆ ಎಂದು ಹೇಳಿದರು.

ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಭೀಮಣ್ಣ ಮೇಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನವನ್ನು ನಿರ್ಧರಿಸಿಕೊಳ್ಳಲು ಪಿಯು ಹಂತ ಮಹತ್ವವಾಗಿದೆ. ಉಜ್ವಲ ಭವಿಷ್ಯಕ್ಕೆ ನಾಂದಿಯಾದ ದ್ವಿತೀಯ ಪಿಯುಸಿಯಲ್ಲಿ ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಎಂತಹ ಹುದ್ದೆಯನ್ನಾದರೂ ಪಡೆಯಬಹುದು. ನಿರಂತರ ಗುರುಗಳ ಮಾರ್ಗದರ್ಶನ ಹಾಗೂ ಕಠಿಣ ಅಭ್ಯಾಸದಿಂದ ನಿರೀಕ್ಷಿತ ಗುರಿ ಸಾಧಿಸಬಹುದುಧ ಎಂದರು.

ಕಾಲೇಜಿನ ಪ್ರಾಂಶುಪಾಲ ಮಹೇಶ ಪತ್ತಾರ ಮಾತನಾಡಿದರು. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಿ ಗೌರವ ಪುರಸ್ಕಾರ ಮಾಡಲಾಯಿತು.

ಪರುಶರಾಮ ಹೊಸ್ಮನಿ, ಡಿ.ಡಿ.ಯು ಶಾಲೆಯ ಮುಖ್ಯಗುರು ಪ್ರಕಾಶ ಬಳ್ಳಾರಿ, ಉಪನ್ಯಾಸಕ ಪ್ರಭುಲಿಂಗಯ್ಯ ಹಿರೇಮಠ, ಸಂಗಮೇಶ ಪಾಟೀಲ್, ಪವನಕುಮಾರ ಬಿರನಾಳ, ಚೈತ್ರಾ ಕೊಲ್ಲುರು, ಮಲ್ಲಿಕಾರ್ಜುನ ಪೂಜಾರಿ, ಮಂಜುಳಾ ಖಾನಾಪುರ, ವಿಶ್ವಪಂಡಿತ ಇತರರಿದ್ದರು. ಶ್ರೀಶೈಲ್ ಡಂಬಾಳ ನಿರೂಪಿಸಿದರು. ವಿದ್ಯಾರ್ಥಿನಿ ಶೀಲಾದೇವಿ ಪ್ರಾರ್ಥಿಸಿದರು. ಅಕ್ಕಮ ವಂದಿಸಿದರು. ಶರಣು ಸಂವಿಧಾನದ ಪೂರ್ವ ಪೀಠಿಕೆ ವಾಚಿಸಿದರು.