ಅರಣ್ಯ ಇಲಾಖೆ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

| Published : Jun 07 2024, 12:15 AM IST

ಅರಣ್ಯ ಇಲಾಖೆ ಯೋಜನೆ ಸದ್ಬಳಕೆ ಮಾಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ದಿನ ಕೇವಲ ಆಚರಣೆಗೆ ಸೀಮಿತವಾಗಬಾರದು. ಪರಿಸರವನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಶ್ರೀ ಅಯ್ಯ ಆಂಜನೇಯ ಚಾರಿಟೇಬಲ್, ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಪರಿಸರ ದಿನ ಕೇವಲ ಆಚರಣೆಗೆ ಸೀಮಿತವಾಗಬಾರದು. ಪರಿಸರವನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಶ್ರೀ ಅಯ್ಯ ಆಂಜನೇಯ ಚಾರಿಟೇಬಲ್, ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದರು. ತಾಲೂಕಿನ ಹುಯಿಲ್ದೊರೆ ಗ್ರಾಮದ ಶ್ರೀ ಶಾರದಾ ಇಂಟನ್ರ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅರಣ್ಯ ಬೆಳೆಸಲು ಸರ್ಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ರೈತರಿಗೆ ಅರಣ್ಯ ಸಸಿ ಬೆಳೆಸಲು ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಕೆಲವೊಬ್ಬ ಪ್ರಾಮಾಣಿಕ ರೈತರಿಗೆ ಪ್ರೋತ್ಸಾಹ ಧನ ಸಿಗದೆ ಅನ್ಯಾಯವಾಗುತ್ತದೆ ಎಂದರು.

ಅರಣ್ಯ ಇಲಾಖೆ ಎಚ್ಚರಗೊಂಡು ಪರಿಶೀಲನೆ ನಡೆಸಿ ನಿಜವಾದ ಹಾಗೂ ಪ್ರಾಮಾಣಿಕ ರೈತರಿಗೆ ಪ್ರೋತ್ಸಾಹ ಧನ ಸಿಗುವ ವ್ಯವಸ್ಥೆ ಮಾಡಬೇಕು. ಹುಟ್ಟು ಹಬ್ಬದಂದು ಒಂದೊಂದು ಗಿಡ ನೆಟ್ಟು ಅದನ್ನು ವರ್ಷಪೂರ್ತಿ ಘೋಷಣೆ ಮಾಡಬೇಕು. ಆ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸಬೇಕು. ಅದು ಆದಾಗ ಮಾತ್ರ ನಿಜವಾದ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.ಗಸ್ತು ಅರಣ್ಯ ಪಾಲಕ ಪರಶುರಾಮ್ ಮಾತನಾಡಿ, ರೈತರು ಹೊಲ ಗದ್ದೆಗಳಲ್ಲಿ ರಾಸಾಯನಿಕಗಳನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದಾರೆ. ಈ ರಾಸಾಯನಿಕಗಳನ್ನು ಬಳಸುವುದರಿಂದ ಮಣ್ಣು ಮಾಲಿನ್ಯವಾಗಿ ತನ್ನ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಫಲವತ್ತತೆಯನ್ನು ಕಳೆದುಕೊಂಡಂತ ಮಣ್ಣು ಯಾವುದೇ ಬೆಳೆ ಬೆಳೆಯಲು ಆಶಕ್ತವಾಗುತ್ತದೆ. ನೀವೆಲ್ಲರೂ ಉತ್ತಮ ಹಾಗೂ ರಾಸಾಯನಿಕ ಮುಕ್ತ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡುವುದನ್ನು ನಿಮ್ಮ ಪೋಷಕರಿಗೆ ತಿಳಿಸಬೇಕು. ಪ್ರತಿಯೊಂದು ಮಗು ಒಂದೊಂದು ಗಿಡ ನೆಟ್ಟು ಘೋಷಣೆ ಮಾಡಿ ಅರ್ಥಪೂರ್ಣ ಪರಿಸರ ದಿನ ಆಚರಿಸುವಂತಾಗಬೇಕು ಎಂದರು.ಶಾಲೆಯ ಸಂಸ್ಥಾಪಕ ಅಧ್ಯಕ್ಷ ರಂಗನಾಥ್, ಶಿಕ್ಷಕರು ವಿದ್ಯಾರ್ಥಿ, ಸಿಬ್ಬಂದಿ ಹಾಜರಿದ್ದರು.