ಕರ್ನಾಟಕದಲ್ಲಿ ವಾಸವಾಗಿದ್ದಲ್ಲಿ ಕನ್ನಡ ಕಡ್ಡಾಯಗೊಳಿಸಿ: ಜಗಾಪೂರ

| Published : Nov 17 2025, 01:45 AM IST

ಸಾರಾಂಶ

ಮಾತೃಭಾಷೆಯಲ್ಲಿ ಶಿಕ್ಷಣ ಪಡೆದುಕೊಳ್ಳಲು ನಮ್ಮ ತಕರಾರಿಲ್ಲ. ಆದರೆ, ಕರ್ನಾಟಕದಲ್ಲಿ ವಾಸವಾಗಿದ್ದಲ್ಲಿ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಯುವುದು ಕಡ್ಡಾಯ. ಇದಕ್ಕೆ ಸರ್ಕಾರಗಳು ಸೂಕ್ತ ತಿದ್ದುಪಡಿ ತರಬೇಕಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ:ಮಾತೃಭಾಷೆಯಲ್ಲಿ ಶಿಕ್ಷಣ ಪಡೆದುಕೊಳ್ಳಲು ನಮ್ಮ ತಕರಾರಿಲ್ಲ. ಆದರೆ, ಕರ್ನಾಟಕದಲ್ಲಿ ವಾಸವಾಗಿದ್ದಲ್ಲಿ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಯುವುದು ಕಡ್ಡಾಯ. ಇದಕ್ಕೆ ಸರ್ಕಾರಗಳು ಸೂಕ್ತ ತಿದ್ದುಪಡಿ ತರಬೇಕಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ ಅಭಿಪ್ರಾಯ ವ್ಯಕ್ತಪಡಿಸಿದರು.

ಮೋಟೆಬೆನ್ನೂರಿನ ನವೋದಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಮಕ್ಕಳ ದಿನಾಚರಣೆ, ಸಿದ್ದಮ್ಮ ಮೈಲಾರ, ಡಾ. ಮಹದೇವ ಬಣಕಾರ ಹಾಗೂ ಗೌರಮ್ಮ ಮುದ್ದಿ ಶೆಟ್ಟರ ಇವರುಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನಿಗೆ ತಿದ್ದುಪಡಿ ತರದಿರುವ ಕಾರಣ ಅನ್ಯ ಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತಿದ್ದು ಇದರಿಂದ ರಾಜ್ಯದಲ್ಲೇ ನಮ್ಮ ಕನ್ನಡ ಭಾಷೆಗೆ ಹಿನ್ನೆಡೆಯಾಗುತ್ತಿದೆ ಎಂದರು.ಉದ್ಯೋಗದಲ್ಲಿ ಮೀಸಲಾತಿ ಕಡ್ಡಾಯ: ನಮ್ಮ ರಾಜ್ಯದ ನೆಲ-ಜಲ ಸೇರಿದಂತೆ ಮೂಲಕ ಸೌಕರ್ಯ ಬಳಸಿಕೊಂಡವರೇ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುತ್ತಿಲ್ಲ ಹಾಗಿದ್ದ ಮೇಲೆ ಅವರನ್ನು ಇಲ್ಲಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ, ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳುವ ಮೂಲಕ ಖಾಸಗಿ, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವಂತಹವರಿಗೆ ಉದ್ಯೋಗದಲ್ಲಿ ಕನ್ನಡ ಭಾಷಿಕರಿಗೆ ಮೀಸಲಾತಿ ಕಡ್ಡಾಯಗೊಳಿಸುವಂತೆ ಆಗ್ರಹಿಸಿದರು.ಮೈಮರೆತು ಕೂರುವ ಕಾಲವಲ್ಲ: ಕನ್ನಡ ಒಂದು ಭಾಷೆ ಎನ್ನುವುದಕ್ಕಿಂತ ಇದೊಂದು ಸಂಸ್ಕೃತಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಭಾಷಿಕರನ್ನು ಹುಡುಕುವಂತಾಗಿದೆ., ಮೈಮರೆತು ಕುಳಿತುಕೊಳ್ಳುವ ಕಾಲ ಇದಲ್ಲ ಕನ್ನಡಿಗರಿಗೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ, ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸರ್ವರೂ ಪ್ರಯತ್ನ ಮಾಡಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಸಂಸ್ಥೆ ಅಧ್ಯಕ್ಷ ಬಿ.ಸಿ. ಹಾವೇರಿಮಠ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಕೋಶಾಧ್ಯಕ್ಷ ಅಶೋಕ ಬಣಕಾರ, ವಿ.ಸಿ. ಹಾವೇರಿಮಠ, ಆಡಳಿತಾಧಿಕಾರಿ ವಿ.ಎಫ್. ಕನ್ನಮ್ಮನವರ. ಸಹಕಾರ‍್ಯದರ್ಶಿ ಸಚಿನ್ ರುದ್ರದೇವರಮಠ, ವೀರಣ್ಣ ಮುದ್ದಿಶೆಟ್ಟರ, ಪರಮೇಶಪ್ಪ ಮೈಲಾರ, ರಾಜಶೇಖರ ಹೊಸಳ್ಳಿ, ಪ್ರಭುಗೌಡ ಪಾಟೀಲ ಮುಖ್ಯಶಿಕ್ಷಕ ಕುಮಾರ ಬ್ಯಾಡಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಚೇತನಸ್ವಾಮಿ ಹಿರೇಮಠ, ಶ್ರೀಮತಿ ಎಂ.ಎಸ್. ಸೋಮಣ್ಣನವರ, ಪ್ರಶಾಂತ ಗೊರವರ ಸಾಧಕರ ಪರಿಚಯ ಮಾಡಿಕೊಟ್ಟರು. ಎ.ಟಿ. ಪೀಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಎಂ.ಎಫ್. ಮೋರೆ ಸ್ವಾಗತಿಸಿದರು. ಶಿಕ್ಷಕ ಟಿ.ಎಲ್. ವೆಂಕಟೇಶ ವಂದಿಸಿದರು.