ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳು ತಮ್ಮ ತಂದೆ ತಾಯಿಯವರಿಗೆ ಗೌರವ ನೀಡುವುದು ಕಡಿಮೆ ಆಗಿದೆ. ಮಕ್ಕಳು ಸಂಸ್ಕಾರ ಮತ್ತು ಸಂಸ್ಕೃತಿ ಕಲಿಯುವುದು ಬಹಳ ಅವಶ್ಯ, ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಿದರೆ ಮಕ್ಕಳ ಬದುಕು ಉಜ್ವಲವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಆರ್. ನಟೇಶ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತಾಲೂಕಿನ ವೇಮಗಲ್ ಸ್ತ್ರೀಶಕ್ತಿ ಭವನದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಚಟುವಟಿಕೆಗಳು, ಮಾತೃವಂದನ ಸಪ್ತಾಹ ಹಾಗೂ ಬಾಲ್ಯ ವಿವಾಹ ಕಾಯ್ದೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಲ್ಯ ವಿವಾಹ ಅಪರಾಧ
ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ, ಬಾಲ್ಯ ವಿವಾಹ ನಿಷಧ ಕಾಯ್ದೆಯಲ್ಲಿ ೧೮ ವರ್ಷ ಒಳಗಿನ ಹೆಣ್ಣು ಮಕ್ಕಳು ಮತ್ತು ೨೧ ವರ್ಷ ಒಳಗಿನ ಗಂಡು ಮಕ್ಕಳು ಮದುವೆ ಆಗುವುದು ಅಪರಾಧ. ಮನೆಯಲ್ಲಿ ಬಾಲ್ಯ ವಿವಾಹ ಮಾಡಲು ಪ್ರಯತ್ನಿಸಿದರೆ ಮತ್ತು ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಕರೆ ಮಾಡಿ ತಿಳಿಸಬೇಕು. ಬಾಲ್ಯ ವಿವಾಹ ಮುಕ್ತ ಕೋಲಾರ ಜಿಲ್ಲೆ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು. ಇತ್ತೀಚೆಗೆ ಎಲ್ಲ ಕಡೆ ಬಾಲ್ಯವಿವಾಹ ಮಾಡುವುದು ಹೆಚ್ಚಾಗುತ್ತದೆ ಅದು ಸಹ ಮಕ್ಕಳ ಶಿಕ್ಷಣ ಹಕ್ಕಿನ ಉಲ್ಲಂಘನೆ ಆಗುತ್ತದೆ ೧೮ ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹಾಗೂ ೨೧ ವರ್ಷ ಒಳಗಿನ ಗಂಡು ಮಕ್ಕಳಿಗೆ ಬಾಲ್ಯವಿವಾಹ ಮಾಡುವವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ೨ ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.ನೆರವಿಗೆ ೧೫೧೦೦ ಸಂಪರ್ಕಿಸಿಇತ್ತೀಚಿಗೆ ೧೮ ವರ್ಷ ಒಳಗಿನ ಮಕ್ಕಳು ತಂಬಾಕು ಉತ್ಪನ್ನ ಮತ್ತು ಮಾಧಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಅಲ್ಲದೆ ಮೋಟಾರು ವಾಹನಗಳನ್ನು ಚಲಾವಣೆ ಮಾಡುತ್ತಿದ್ದಾರೆ. ಅದು ಮಕ್ಕಳ ಜೀವನಕ್ಕೆ ತೊಂದರೆ. ಅಲ್ಲದೆ ಅವರ ಭವಿಷ್ಯಕ್ಕೂ ತೊಂದರೆ ಆಗುತ್ತದೆ. ಎಲ್ಲರೂ ಕಾನೂನುಗಳನ್ನು ಅನುಸರಿಸಿ ನಡೆದುಕೊಳ್ಳಬೇಕು. ಕಾನೂನಿನ ನೆರವಿಗೆ ೧೫೧೦೦ಕ್ಕೆ ಉಚಿತ ಕರೆ ಮಾಡಿ ಅವಕಾಶ ಉಪಯೋಗಿಸಿಕೊಳ್ಳಲು ಕರೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ.ಎನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ನಾಗರತ್ನ.ವಿ, ಟಿಹೆಚ್‌ಓ ಡಾ.ನಾರಾಯಣಸ್ವಾಮಿ, ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಅಧಿಕಾರಿ ವೆಂಕಟೇಶ್ ಎಸ್.ಎಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿ ಕುಮಾರ್.ಇ ಇದ್ದರು.