ಆರ್‌ಬಿಐ ರೂಲ್ಸ್‌ ಪ್ರಕಾರ ಸಾಲ ವಸೂಲಾತಿ ಮಾಡಿ

| Published : Feb 02 2025, 01:01 AM IST

ಆರ್‌ಬಿಐ ರೂಲ್ಸ್‌ ಪ್ರಕಾರ ಸಾಲ ವಸೂಲಾತಿ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಯವರು ಸಾರ್ವಜನಿಕರಿಗೆ ನೀಡಿರುವ ಸಾಲವನ್ನು ವಸಲಿ ಮಾಡುವಾಗ ನಿಯಮಗಳನ್ನುಪಾಲಿಸಬೇಕು. ಇಲ್ಲವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್‌ ಶಿರಿನ್‌ ತಾಜ್‌ ಮೈಕ್ರೋ ಫೈನಾನ್ಸ್‌ ಕಂಪನಿ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಯವರು ಸಾರ್ವಜನಿಕರಿಗೆ ನೀಡಿರುವ ಸಾಲವನ್ನು ವಸಲಿ ಮಾಡುವಾಗ ನಿಯಮಗಳನ್ನುಪಾಲಿಸಬೇಕು. ಇಲ್ಲವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್‌ ಶಿರಿನ್‌ ತಾಜ್‌ ಮೈಕ್ರೋ ಫೈನಾನ್ಸ್‌ ಕಂಪನಿ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಂಪನಿಗಳು ನೀಡಿರುವ ಸಾಲವನ್ನು ಭಾರತೀಯ ರಿಜರ್ವ್‌ ಬ್ಯಾಂಕ್‌ ನಿಯಮನುಸಾರ ವಸೂಲಿ ಮಾಡಬೇಕು. ಈ ಕುರಿತು ಜಿಲ್ಲಾಧಿಕಾರಿ ಮತ್ತು ಸರ್ಕಾರಗಳ ಆದೇಶದನ್ವಯ ವಸೂಲಿಗೆ ಮಾಡಬೇಕು. ಸಾಲ ಪಡೆದವರ ಮೇಲೆ ದೌರ್ಜನ್ಯ, ಕಿರುಕುಳ ಮತ್ತು ಕುಟುಂಬದ ಘನತೆಗೆ ದಕ್ಕೆ ಉಂಟಾದಲ್ಲಿ ಫೈನಾನ್ಸ್‌ ಕಂಪನಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾಲ ನೀಡುವಾಗ ವ್ಯಕ್ತಿಯ ಆಗತ್ಯ ದಾಖಲೆ ಪಡೆದು ಅವರ ಕುಟುಂಬದ ಶಕ್ತಿಗೆ ಅನುಸಾರ ಸಾಲ ನೀಡಿ ಗೌರವಯುತವಾಗಿ ವಸೂಲಿ ಮಾಡಿಕೊಳ್ಳಿ, ಯಾರಿಗೆ ಆದರೂ ಕನಿಷ್ಯ 2 ಲಕ್ಷದಷ್ಠು ಮಾತ್ರ ಸಾಲ ನೀಡಬೇಕು. 2 ಕ್ಕಿಂತ ಹೆಚ್ಚು ಖಾತೆಗಳಿರುವ ವ್ಯಕ್ತಿಗೆ ಹೆಚ್ಚು ಸಾಲ ನೀಡಬಾರದು. ಸಾಲ ನೀಡಿ ಸಾಲ ವಸೂಲಾಗದ ವೇಳೆ ಕಿರುಕುಳ ನೀಡುವುದನ್ನು ನಿರ್ಬಂದಿಸಲಾಗಿದೆ. ಕಿರುಕುಳದ ದೂರು ಬಂದರೆ ಸೂಕ್ತ ಕಾನೂನು ಕ್ರ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಫೈನಾನ್ಸ್‌ ಕಂಪನಿಗಳ ಪ್ರತಿನಿಧಿಗಳು ಯಾವ ಪ್ರದೇಶದಲ್ಲಿ ಸಾಲ ವಸೂಲಾತಿ ಮಾಡಲು ಬರುತ್ತೀರಾ ಆ ಭಾಗದ ಪೊಲೀಸ್‌ ಠಾಣೆಗೆ ತಮ್ಮ ಸ್ವವಿವರ ನೀಡಿ ಅವರಿಂದ ಪಡೆದ ಗುರುತಿನ ಚೀಟಿ ಪಡೆದು ಮಾನವೀಯತೆಯಿಂದ ವಸೂಲಿ ಮಾಡಬೇಕು, ದೌರ್ಜನ್ಯ, ದಬ್ಬಾಳಿಕೆ, ನಿಂದಿಸಿ ತಮ್ಮ ಶಕ್ತಿ ತೋರಿಸಲು ಮುಂದಾದರೆ ಕ್ರಮ ನಿಶ್ವಿತ ಎಂದು ಎಚ್ಚರಿಸಿದರು.

ಸಭೆಯಲ್ಲಿ ಪಿಎಸೈಗಳಾದ ಮುತ್ತುರಾಜು , 23 ಮೈಕ್ರೋ ಫೈನಾನ್ಸ್‌ ಕಂಪನಿಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪೊಲೀಸ್‌ ಅಧಿಕಾರಿಗಳು ಇದ್ದರು.