ಸಾರಾಂಶ
ಕ್ಷೇತ್ರದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಒಟ್ಟು ೧೬೦ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ರೈತರು ಅಭಿವೃದ್ಧಿ ಹೊಂದಬೇಕು. 
ಹಗರಿಬೊಮ್ಮನಹಳ್ಳಿ: ರೈತರ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಪಕ್ಷಾತೀತವಾಗಿ ಸರ್ಕಾರ ಸ್ಪಂದಿಸುವ ಭರವಸೆ ಹೊಂದಲಾಗಿದೆ ಎಂದು ಶಾಸಕ ಕೆ. ನೇಮರಾಜ ನಾಯ್ಕ ತಿಳಿಸಿದರು.
ತಾಲೂಕಿನ ಕಡಲಬಾಳು ಗ್ರಾಮದ ಬ್ಯಾಟಿ ಕಡ್ಲೆಪ್ಪ ಅವರ ಹೊಲದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲು ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಒಟ್ಟು ೧೬೦ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ರೈತರು ಅಭಿವೃದ್ಧಿ ಹೊಂದಬೇಕು. ತಾಲೂಕಿನ ಚಿಲವಾರು ಬಂಡೆ ಏತ ನೀರಾವರಿ ಯೋಜನೆ ವಿಳಂಬ ಕುರಿತಂತೆ ಈಗಾಗಲೆ ಹಲವು ಬಾರಿ ಗುತ್ತಿಗೆದಾರಿಗೆ ಎಚ್ಚರಿಕೆ ನೀಡಲಾಗಿದೆ. ಚಿಲವಾರು ಬಂಡೆ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ತ್ವರಿತ ಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದರು.ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನರೇಂದ್ರ ಚೌವ್ಹಾಣ್, ಗಂಗಾಕಲ್ಯಾಣ ಯೋಜನೆಯ ಶೆಟ್ಟಿನಾಯ್ಕ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಮುಖಂಡರಾದ ಬಿ. ಮಂಜುನಾಥಗೌಡ, ಕೆ. ರೋಹಿತ್, ಬ್ಯಾಟಿ ನಾಗರಾಜ, ಎನ್. ಕೃಷ್ಣಮೂರ್ತಿ, ಕೃಷ್ಣಂರಾಜು, ಸಿ. ಹೇಮಣ್ಣ, ಎಸ್. ದೊಡ್ಡಬಸವರಾಜ, ಒಂಟಿಗೋಡಿ ವಿರುಪಾಕ್ಷ, ಸಿ. ರಮೇಶ್, ಟಿ.ಎಂ. ಶರಣಯ್ಯ, ಹೇಮಜ್ಜ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))