ಸಾರಾಂಶ
ಕನಕಪುರ: ಸಾತನೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಎಂದು ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಗಳಿಗೆ ಮನವಿ ನೀಡಿದ್ದರೂ ಯಾವುದೇ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಅನುಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಸಾತನೂರು ಹೋಬಳಿಯಲ್ಲಿ ರೈತ ಸಂಘದ ಸಭೆಯಲ್ಲಿ ಮಾತನಾಡಿ, ಉಪಮುಖ್ಯಮಂತ್ರಿಗಳು ಈಗಲಾದರೂ ಸಾತನೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿಸಿ, ಅದನ್ನು ಬಿಟ್ಟು ಬಿಡದಿ ಟೌನ್ ಶಿಪ್ ಮಾಡುತ್ತೇನೆ ಎಂದು ಬಿಡದಿಗೆ ಹೋಗಿ ರೈತರ ಸಭೆ ಕರೆಯದೇ ಏಕಾಏಕಿ ನೀವೇ ನಿರ್ಧಾರ ಮಾಡಿರುವುದಕ್ಕೆ ನಮ್ಮ ರೈತ ಸಂಘದ ವಿರೋಧವಿದೆ. ಮಾಗಡಿಯ ಸೋಲೂರು ನಮ್ಮ ಜಿಲ್ಲೆಗೆ ಸೇರಬೇಕೇ ಹೊರತು ನೆಲಮಂಗಲಕ್ಕೆ ಸೇರಿಸದಿರಿ, ಬಿಡದಿಯಲ್ಲಿ ರೈತರು ಘೋಷಣೆ ಕೂಗುತ್ತಿದ್ದ ವೇಳೆ ನೀವು ದರ್ಪದ ಮಾತು ಆಡಿದ್ದೀರಿ, ಆ ಮಾತುಗಳು ನಿಮಗೆ ಶೋಭೆ ತರುವುದಿಲ್ಲ, ಆದ್ದರಿಂದ ರೈತರ ಕ್ಷಮೆ ಕೋರಬೇಕೆಂದು ಒತ್ತಾಯ ಮಾಡಿದರು.ತಾಲೂಕು ಅಧ್ಯಕ್ಷ ಶಿವಗೂಳಿಗೌಡ, ಸಾತನೂರು ಅಧ್ಯಕ್ಷ ರಾಜೇಶ್. ಸಾತನೂರು ಉಪಾಧ್ಯಕ್ಷ ಪುಟ್ಟರಂಗಣ್ಣ, ರೈತ ಮುಖಂಡರಾದ ಚನ್ನಪ್ಪ, ಚೆನ್ನಿಗಣ್ಣ, ಪುಟ್ಟಸ್ವಾಣ್ಣಜೋಗಪ್ಪ, ಸಿದ್ದರಾಮೇಗೌಡ, ಹಳಪ್ಪ, ಸತೀಶ್, ರಾಮೇಗೌಡ, ಮಾದೇಗೌಡ, ಚಿಕ್ಕಸಿದಯ್ಯ, ಸತೀಶ್ , ಆಟೋ ಸುರೇಶ್ ಸೇರಿ ಹಲವರು ಸಭೆಯಲ್ಲಿ ಹಾಜರಿದ್ದರು.